ಕೋಟಿ ನಿರ್ಮಾಪಕ ರಾಮು ಕೊರೊನಾಗೆ ಬಲಿ

5 years ago

ಬೆಂಗಳೂರು: ಕರ್ನಾಟಕದಲ್ಲಿ ಕೋಟಿ ನಿರ್ಮಾಪಕ ಎಂದೇ ಹೆಸರಾಗಿದ್ದ ನಿರ್ಮಾಪಕ ರಾಮು (52) ಕೊರೊನಾಗೆ ಬಲಿಯಾಗಿದ್ದಾರೆ. ಗೋಲಿಬಾರ್, ಎಕೆ 47, ಸಿಂಹದ ಮರಿ ಮೊದಲಾದ ಯಶಸ್ವಿ ಸುಮಾರು 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸುವ ಮೂಲಕ ಇವರು ಚಂದನವನದಲ್ಲಿ ಸದ್ದು ಮಾಡಿದ್ದರು. ಕನಸಿನರಾಣಿ ನಟಿ ಮಾಲಾಶ್ರೀಯವರನ್ನು ಇವರು ವರಿಸಿದ್ದರು. ಕನ್ನಡದಲ್ಲಿ ಕೋಟಿ ರೂಪಾಯಿ ಬಜೆಟ್ ನ ಚಿತ್ರ ನಿರ್ಮಿಸುವ ಮೂಲಕ ಅವರು ಹೆಸರಾಗಿದ್ದರು.

ರಾಮು ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕಾಲವಶರಾಗಿದ್ದಾರೆ.  ಅವರು, ಪತ್ನಿ ಮಾಲಾಶ್ರೀ, ಮಗ ಮತ್ತು ಮಗಳನ್ನು ಅಗಲಿದ್ದಾರೆ.

ಇವರ ಸಾವಿನ ಕುರಿತು ಕಂಬನಿ ಮಿಡಿದಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಕನ್ನಡದ ಖ್ಯಾತ ನಿರ್ಮಾಪಕ ರಾಮು ಅವರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದು ಕೇಳಿ ನನ್ನ ಮನಸ್ಸಿಗೆ ತೀವ್ರ ನೋವಾಗಿದೆ. ಕನ್ನಡ ಚಿತ್ರೋದ್ಯಮದಲ್ಲಿ ಕೋಟಿ ನಿರ್ಮಾಪಕ ಎಂದೆ ಖ್ಯಾತರಾಗಿದ್ದ ರಾಮು ಅವರ ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಮೃತರ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Leave a Reply