ಕರ್ನಾಟಕದ ಸ್ವಂತ ಓಟಿಟಿ ವೇದಿಕೆ ‘ಕಟ್ಟೆ’ನಿಮ್ಮ ಬಳಿ ಬರಲು ಸಿದ್ಧ

5 years ago

ಕರ್ನಾಟಕದ ಓಟಿಟಿ ಪ್ಲಾಟ್‌ಫಾರ್ಮ್ ಕಟ್ಟೆಯು ಕನ್ನಡದ ಜೊತೆಗೆ ತುಳು, ಕೊಡವ, ಕೊಂಕಣಿ, ಹವ್ಯಕ, ಉತ್ತರ ಕರ್ನಾಟಕ, ಹಳೆಯ ಮೈಸೂರು ಪ್ರದೇಶದ ಉಪಭಾಷೆಗಳಿಗೆ ಆದ್ಯತೆ ನೀಡಿದೆ.

ಬಹುದಿನದ ಈ ಕಲ್ಪನೆಯನ್ನು ವಾಸ್ತವಕ್ಕೆ ತರುವಲ್ಲಿ ಪ್ರಸಿದ್ಧ ಹಾಸ್ಯನಟ ನರಸಿಂಹರಾಜು ಅವರ ಮೊಮ್ಮಕ್ಕಳ ಪ್ರಯತ್ನವಿದೆ.

ಬೆಂಗಳೂರು:  ಜುಗಾರಿ ಬ್ರದರ್ಸ್ ಎಂದೇ ಜನಪ್ರಿಯವಾಗಿರುವ ಅರವಿಂದ ಮತ್ತು ಅವಿನಾಶ್ (ಮೊದಲ ಚಿತ್ರ ಜುಗಾರಿಯಿಂದ), ಕರ್ನಾಟಕದ ಮತ್ತು ಜಗತ್ತಿನಾದ್ಯಂತ ಹರಡಿಕೊಂಡಿರುವ ಕನ್ನಡಿಗರಿಗಾಗಿ ‘ಕಟ್ಟೆ’ಎಂಬ ಓಟಿಟಿ ವೇದಿಕೆಯನ್ನು (OTT ಪ್ಲಾಟ್‌ಫಾರ್ಮ್) ನಿರ್ಮಿಸುವ ಸಾಹಸ ಮಾಡಿದ್ದಾರೆ.

ಕಟ್ಟೆಯ ಹಿಂದೆ ಹಾಸ್ಯನಟ ನರಸಿಂಹರಾಜು ಅವರ ಮೊಮ್ಮಕ್ಕಳ ಸೃಜನಶೀಲ ಮನಸ್ಸು ಕೆಲಸ ಮಾಡಿರುವುದು ಗಮನಾರ್ಹ. ‘ಕಟ್ಟೆ’ಕರ್ನಾಟಕದ ಜನರ ಮನರಂಜನಾ ಅಗತ್ಯಗಳನ್ನು ಪೂರೈಸುವ ಗುರಿ ಹೊಂದಿದೆ. ಕೊರೋನಾ ಸಾಂಕ್ರಾಮಿಕದಿಂದಾಗಿ ಕಳೆದ ಒಂದು ವರ್ಷದಿಂದ ಓಟಿಟಿ ಮಾರುಕಟ್ಟೆ ಹೊಸ ಭರವಸೆಯಾಗಿ ಬೆಳೆಯುತ್ತಿದೆ. ಈ ವೇದಿಕೆಗೆ ಕನ್ನಡದ ಗಂಧ ತುಂಬಲು ಜುಗಾರಿ ಬ್ರದರ್ಸ್ ಕಾರ್ಯಪ್ರವೃತ್ತರಾಗಿದ್ದಾರೆ.

ಮನೋರಂಜನಾ ಕ್ಷೇತ್ರದಲ್ಲಿ ಭಾರಿ ಅಂತರವಿದ್ದು, ಅದನ್ನು ತುಂಬಬೇಕಾದ ಅಗತ್ಯವಿದೆ. ಸ್ಥಳೀಯ ಕಲಾವಿದರನ್ನು ಉತ್ತೇಜಿಸುವ, ಕರ್ನಾಟಕದ ಮನರಂಜನಾ ಕ್ಷೇತ್ರದ ಅಗತ್ಯಗಳನ್ನು ಪ್ರತ್ಯೇಕವಾಗಿ ಪೂರೈಸುವ ಓಟಿಟಿ ಪ್ಲಾಟ್‌ಫಾರ್ಮ್‌ನ ಬಹುಕಾಲದ ಅಗತ್ಯ ಇದೀಗ ಈಡೇರಿದಂತಾಗಿದೆ” ಎಂದು ಕಟ್ಟೆ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಡಿ.ಅರವಿಂದ ಹೇಳಿದರು.

ಜನರು ಇನ್ನು ಮುಂದೆ ಸ್ಥಳೀಯ ಭಾವನೆಗಳು ಮತ್ತು ಸಂಸ್ಕೃತಿಯೊಂದಿಗೆ ತಾಳೆ ಆಗದ ಡಬ್ ಕಾರ್ಯಕ್ರಮಗಳು ಅಥವಾ ಶೋಗಳನ್ನು ನೋಡುವುದನ್ನು ಬಹುತೇಕ ಕೈಬಿಡುತ್ತಾರೆ. ಸ್ಥಳೀಯ ಸಂಸ್ಕೃತಿ ಮತ್ತು ಕಥೆಗಳಿಂದ ಬೆಳೆಯುವ ಅನೇಕ ಇನ್‌ಹೌಸ್‌ ನಿರ್ಮಾಣಗಳನ್ನು ಹೊಂದಿರುವ ಕಟ್ಟೆಯು ಖಂಡಿತವಾಗಿಯೂ ಆ ಅಂತರವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಕಟ್ಟೆ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವಿನಾಶ್ ಅಭಿಪ್ರಾಯಪಟ್ಟರು.

ಕಟ್ಟೆ: ಕಟ್ಟೆ ಎಂಬುದು ಓಟಿಟಿ ಪ್ಲಾಟ್‌ಫಾರ್ಮ್ ಆಗಿದ್ದು, ಅದು ಕರ್ನಾಟಕದ ಮನೋರಂಜನಾ ಕ್ಷೇತ್ರದಲ್ಲಿನ ಅಂತರವನ್ನು ತುಂಬಲು ಪ್ರಯತ್ನಿಸುತ್ತದೆ. ಈ ವೇದಿಕೆಯು ಕರ್ನಾಟಕದ ಎಲ್ಲಾ ಉಪಭಾಷೆಗಳ ಮನರಂಜನಾ ಅಗತ್ಯಗಳನ್ನು ಪ್ರತ್ಯೇಕವಾಗಿ ಪೂರೈಸುವ ಗುರಿಯನ್ನು ಹೊಂದಿದೆ.

ಕಟ್ಟೆ ಆಡಿಯೋ: ಆಡಿಯೋ ಸಮಗ್ರ ವೇದಿಕೆಯಾಗುವ ಉದ್ದೇಶ ಹೊಂದಿರುವ ಕಟ್ಟೆ, ಗಾಯಕರು, ಸಂಯೋಜಕರು ಮತ್ತು ಸಂಗೀತಗಾರರಿಗೆ ವೇದಿಕೆ ಒದಗಿಸುವ ಗುರಿ ಹೊಂದಿದೆ. ಕಟ್ಟೆ ಆಡಿಯೋ ಮೂಲ ಸಂಯೋಜನೆಗಳೊಂದಿಗೆ ವಿಶೇಷವಾದ ಆನ್‌ಲೈನ್ ಮ್ಯೂಸಿಕ್ ಸ್ಟ್ರೀಮಿಂಗ್ ಸಿಸ್ಟಮ್ ಅನ್ನು ಒದಗಿಸುತ್ತದೆ.

ಹೊಸದಾಗಿ ಬಿಡುಗಡೆಯಾದ ಚಲನಚಿತ್ರ ಗೀತೆಗಳನ್ನು ಸ್ಟ್ರೀಮಿಂಗ್ ಮಾಡುವುದರ ಜೊತೆಗೆ, ಸ್ಥಳೀಯ ಜಾನಪದ ಮತ್ತು ಪ್ರಾದೇಶಿಕ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲ ಸಂಗೀತವನ್ನು ತಯಾರಿಸಲು ಕಟ್ಟೆ ಆಡಿಯೋ ಉದ್ದೇಶಿಸಿದೆ.

ಬೆಳೆಯುತ್ತಿರುವ ಮಾರುಕಟ್ಟೆ

ಭಾರತದ ‘ಓವರ್-ದಿ-ಟಾಪ್’ (OTT) ಸ್ಟ್ರೀಮಿಂಗ್, ಯಾವುದೇ ಆನ್‌ಲೈನ್ ವಿಷಯ ಪೂರೈಕೆ ಮಾಧ್ಯಮ ಸೇವೆಯಾಗಿದ್ದು ಅದು ಸ್ಟ್ರೀಮಿಂಗ್ ಮಾಧ್ಯಮವನ್ನು ಸ್ವತಂತ್ರ ಉತ್ಪನ್ನವಾಗಿ ನೀಡುತ್ತದೆ. ಇದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಕಳೆದ ಹನ್ನೆರಡು ತಿಂಗಳುಗಳಲ್ಲಿ, ಕೋವಿಡ್ -19 ಹಾಗೂ ಲಾಕ್‌ಡೌನ್‌ನಿಂದ ಉತ್ತೇಜನ ಪಡೆದ ಈ ಮಾರುಕಟ್ಟೆ 181 ಬಿಲಿಯನ್ ನಿಮಿಷಗಳಿಂದ 204 ಬಿಲಿಯನ್ (ಒಟ್ಟು ದೇಶೀಯ ಒಟಿಟಿ ಬಳಕೆ) ನಿಮಿಷಗಳಿಗೆ ಹೆಚ್ಚಾಗಿದೆ.

ವಿಶ್ಲೇಷಕ ಸಂಸ್ಥೆ ರೆಡ್‌ಸೀರ್ ಕನ್ಸಲ್ಟಿಂಗ್ ಪ್ರಕಾರ, ಮಾಸಿಕ ಒಟಿಟಿ ಬಳಕೆಯು ಹನ್ನೆರಡು ತಿಂಗಳುಗಳಲ್ಲಿ ಅಪಾರ ವ್ಯತ್ಯಾಸವನ್ನು ಕಂಡಿದೆ. ಬಳಕೆಯ ಮಾದರಿಗಳು ಸರ್ಕಾರ ವಿಧಿಸಿರುವ ಲಾಕ್‌ಡೌನ್‌ನಿಂದ ಪ್ರಭಾವಿತಗೊಂಡಿದ್ದು; ಜೂನ್‌ನಲ್ಲಿ 195 ಬಿಲಿಯನ್ ನಿಮಿಷಗಳ ಓಟಿಟಿ ಬಳಕೆ, ನಂತರ ಅಕ್ಟೋಬರ್‌ನಲ್ಲಿ 231 ಬಿಲಿಯನ್ ನಿಮಿಷಗಳಿಗೆ ಸಾಕ್ಷಿಯಾಗಿದೆ.

ರೆಡ್‌ಸೀರ್ ಅಧ್ಯಯನದಿಂದ ತಿಳಿದು ಬಂದ ಮತ್ತೊಂದು ಅಂಶವೆಂದರೆ, ನಾಲ್ಕನೇ ತ್ರೈಮಾಸಿಕದ ಬಳಕೆಯು ಹಲವಾರು ಪ್ರಮುಖ ಓಟಿಟಿ ಬಿಡುಗಡೆಗಳಿಂದ ಉತ್ತೇಜಿತಗೊಂಡಿದೆ. ಇದರಲ್ಲಿ ಕ್ರೀಡಾಕೂಟಗಳು, ಹೊಸ ಚಲನಚಿತ್ರಗಳು ಮತ್ತು ನೆಟ್‌ಫ್ಲಿಕ್ಸ್‌ನ ಅಭಿಯಾನವು ಭಾರತದಲ್ಲಿ ಅದರ ಅನುಸರಣೆಯನ್ನು ಹೆಚ್ಚಿಸಲು ಕಾರಣವಾಗಿವೆ.

ಅಂತರರಾಷ್ಟ್ರೀಯ ಓಟಿಟಿ ಪ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜೀ5, ಡಿಸ್ನಿ ಹಾಟ್‌ಸ್ಟಾರ್ ಮತ್ತು ಭಾರತೀಯ ಪ್ಲ್ಯಾಟ್‌ಫಾರ್ಮ್‌ಗಳಾದ ಉಲ್ಲು, ಎಂಎಕ್ಸ್ ಪ್ಲೇಯರ್, ಜಿಯೋ, ಸನ್ ಇತ್ಯಾದಿಗಳು ಮೂಲ ಮತ್ತು ವೆಬ್ ಸರಣಿ ಚಲನಚಿತ್ರಗಳನ್ನು ಪ್ರದರ್ಶಿಸುತ್ತವೆ.

ಅಸ್ತಿತ್ವದಲ್ಲಿರುವ ಈ ಯಾವುದೇ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಇಂದು ಮೂಲ ಕನ್ನಡ ವೆಬ್ ಸರಣಿಗಳಿಲ್ಲ. ಅಲ್ಲದೆ, ಕರ್ನಾಟಕದ ವಿವಿಧ ಭಾಗಗಳ ಅಗತ್ಯತೆಗಳನ್ನು ಪೂರೈಸುವ ಯಾವುದೇ ಪ್ರಾದೇಶಿಕ ಉಪಭಾಷೆಗಳಲ್ಲಿಯೂ ಮನರಂಜನೆ ಲಭ್ಯವಿಲ್ಲ. ವೀಕ್ಷಕರು ತಮ್ಮನ್ನು ತಾವು ಕನೆಕ್ಟ್‌ ಮಾಡಿಕೊಳ್ಳುವಂತಹ ಯಾವುದೇ ವೈಯಕ್ತಿಕ ವಿಷಯಗಳೂ ಇಲ್ಲ. ಈ ಕೊರತೆಯನ್ನು ನೀಗಿಸಲು ಕಟ್ಟೆ ಸಂಪೂರ್ಣ ಮನರಂಜನಾ ವೇದಿಕೆಯಾಗಲಿದ್ದು, ಇದು ಕರ್ನಾಟಕದ ಜನ, ಸಂಸ್ಕೃತಿ, ಕಲೆ, ಕಲಾವಿದರು ಮತ್ತು ಸ್ಥಳಗಳ ವಿಶೇಷ ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಹೊರಹೊಮ್ಮಲಿದೆ.

‌ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

Sharvani Prakash – 97410 71014 | sharvanip@sharvanigroup.com

Sarin Venugopal – 99729 06418 | sarin@katteott.com

Leave a Reply