ಬೆಂಗಳೂರು: ಕರ್ನಾಟಕ ಬಂಜಾರ ಚಲನಚಿತ್ರ ಮಂಡಳಿ (ರಿ) ಉದ್ಘಾಟನಾ ಸಮಾರಂಭದ ಪೂರ್ವಭಾವಿ ಸಭೆ ಹಾಗೂ ವಿಚಾರ ಸಂಕೀರ್ಣ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಕರ್ನಾಟಕ ಬಂಜಾರ ಚಲನಚಿತ್ರ ಮಂಡಳಿಯನ್ನು ಉದ್ಘಾಟಿಸಿ ಬಂಜಾರ ಭಾಷಾ ಅಕಾಡೆಮಿ ಅಧ್ಯಕ್ಷರು ಡಾ. ಎ. ಆರ್. ಗೋವಿಂದಸ್ವಾಮಿ ಮಾತನಾಡಿ, ಹೊಸದಾಗಿ ಜಾರಿಯಲ್ಲಿ ಬರುತ್ತಿರುವ ಕರ್ನಾಟಕ ಬಂಜಾರ ಚಲನಚಿತ್ರ ಮಂಡಳಿಗೆ ಶುಭಾಶಯ ಕೋರಿದರು.
ಕರ್ನಾಟಕ ಬಂಜಾರ ಸಿನಿಮಾ ಹಾಗೂ ಸಾಹಿತ್ಯ ಬರವಣಿಗೆಗೆ ಅದ್ಭುತವಾದ ಅವಕಾಶವಿದ್ದು ಎಲ್ಲಾ ಕಲಾವಿದರು ಈ ಅವಕಾಶ ಉಪಯೋಗಿಸಿಕೊಂಡು ಸಾಂಸ್ಕೃತಿಕ ರಾಯಭಾರಿಗಳಾಗಬೇಕಾಗಿ ಕರೆ ನೀಡಿದರು.
ಇಂದಿನ ಯುಗ ಎಲೆಕ್ಟ್ರಾನಿಕ್ ಯುಗವಾಗಿದ್ದು ಸಾಮಾಜಿಕ ಮಾಧ್ಯಮದ ಯುಗವಾಗಿದ್ದು ಈ ಅವಕಾಶವನ್ನು ಬಳಸಿಕೊಂಡು ಸಂಸ್ಕೃತಿಕಾವಾಗಿ ಹಾಗೂ ಆರ್ಥಿಕವಾಗಿ ಪ್ರಬಲವಾಗಿ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.









