ನಲ್ಲನಿಗೆ ನಲ್ಲೆ ಹೇಳಿದ ಆ ಸವಿನುಡಿ ಯಾವುದು…? ಅವನಿಗೆ ಮಾತಲ್ಲೇ ನೀಡಿದ ಹೊಸ ಹರುಷ ಯಾವುದು…? ನಲ್ಲ ನಲ್ಲೆಯರ ಆಂಗಿಕ ಅಭಿನಯವೇ ವಿಷಯವೇನೆಂದು ಹೇಳುತ್ತಿದೆ.. ತನ್ನ ಪ್ರೀತಿಯ ಮಡದಿಯಿಂದ ತಾನು ಅಪ್ಪನಾಗುತ್ತಿರುವ ಸುದ್ದಿ ಕೇಳಿದ ನಲ್ಲನ ಬದುಕಲ್ಲಿ ಸಡಗರ ತುಂಬಿದೆ. ಆ ಸಡಗರ ಒಬ್ಬರಿಗೊಬ್ಬರ ಅನುರಾಗದಿಂದ ಕೂಡಿ ತಂದುಕೊಂಡದ್ದು. ತನ್ನವಳನ್ನು ಮೆಲ್ಲಗೆ ನಡೆಯುವಂತೆ ಅಭಿನಯಿಸಿ ತೋರಿಸುತ್ತಾರಲ್ಲ ರಾಜ್ಕುಮಾರ್ ಎಸ್ಟೊಂದು ಮುದ್ದಾಗಿದೆ ಆ ದೃಶ್ಯ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಇಬ್ಬರ ಪ್ರೇಮದ ಫಲ ಅವಳ ಹೊಟ್ಟೆಯಲ್ಲಿ ಹೂವಾಗಿ ಬೆಳೆಯುತ್ತಿದೆ. ಮುಂದೆ ತಾಯಿಯಾಗುತ್ತಾಳೆ ಮಡದಿ. ಮಗುವಿಗೊಂದು ನಾಮಕರಣವೂ ಆಗಿ ಮುಗಿಯುತ್ತದೆ. ಇಬ್ಬರದೂ ಸಾರ್ಥಕ ಭಾವ. ಹುಟ್ಟುವ ಮಕ್ಕಳು ಕೇವಲ ಅಪ್ಪ ಅಮ್ಮನ ಕಾಮದ ಫಲವಾಗಿರುವುದಿಲ್ಲ. ಎರಡು ಮನಸುಗಳ ಒಲುಮೆಯ ಕುಲುಮೆಯ ಚಿಲುಮೆಯಾಗಿತ್ತದೆ. ಮುಂದೆ ಅವನಿಗೆ ಆತಂಕ… ಮಗನಿರುವ ಸಡಗರದಲ್ಲಿ ಹೆಂಡತಿ ನನ್ನನ್ನು ಮರೆತು ಬಿಟ್ಟಾಳೆಂಬ ದುಗುಡ. ಇದು ಎಲ್ಲ ಗಂಡಸರಿಗೂ ಇರುವ ಪೊಸೆಸಿವ್ನೆಸ್… ಆದರೆ ಹಾಗಾಗುತ್ತಾ? ಬಹುಷಃ ಇಬ್ಬರ ನಡುವಿನ ದಾಂಪತ್ಯದ ಬಂಧ ಮತ್ತೂ ಬಿಗಿಯಾಗುತ್ತದೆ.
ಇಂತದ್ದೊಂದು ಬದುಕು ಇಂತದ್ದೊಂದು ಕೊಡುಗೆ ಪರಸ್ಪರ ಕೊಟ್ಟುಕೊಂಡ ಇಬ್ಬರ ಕಣ್ಣುಗಳೂ ಒಬ್ಬರಿಗೊಬ್ಬರಿಗೆ ಕೃತಜ್ಞತೆಯನ್ನು ಮಿಡಿಯುತ್ತವೆ. ಪ್ರೇಮ ಪ್ರಣಯವಾಗಿ ಪ್ರಣಯವು ಹೊಸದೊಂದು ಜೀವಕೆ ಕಾರಣವಾಗಿ ಆ ಕಾರಣವು ಮತ್ತೊಂದು ಬಗೆಯ ಭಾವ ಬಂಧಕ್ಕೆ ಪ್ರೇರಣೆಯಾಗಿ ಮತ್ತೆ ಪ್ರಣಯದತ್ತ ಹೊರಳುವ ಪ್ರೇಮದ ದಿವ್ಯ ಸಮಾಧಿಗೆ ಸೆಳೆಯುವ ಈ ಹಾಡುವ ನವಿರಾದ ಭಾವಗಳ ಮೂಲಕ ಮೂಡಿಸಿದೆ.
ಇಂತಾ ಹಾಡುಗಳನ್ನ ನಾವು ಈಗ ಕೇಳುವ ಅವಶ್ಯಕತೆ ತುಂಬಾ ಇದೆ. ಮನುಷ್ಯನಿಗೆ ದೊರೆತ ಅತಿಯಾದ ಸ್ವೇಚ್ಚಾಚಾರದ ಅವಕಾಶಗಳು ಅವನನ್ನು ಒಂದು ಸುಂದರ ದಾಂಪತ್ಯದ ಬದುಕಿನಿಂದ ದೂರ ಒಯ್ದು ಅನಾಥನನ್ನಾಗಿಸಿವೆ. ಸಂಸಾರಗಳು ಹರಿದು ಚಿಂದಿಯಾಗಿ ಬೀದಿಯಲ್ಲಿ ಬಿದ್ದು ನರಳಾಡುತ್ತಿವೆ. ಪ್ರೇಮ ಸಹನೆ ಮಮತೆ ಮಾಧುರ್ಯ ಸೌಂದರ್ಯ ಇರಬೇಕಾದ ಕುಟುಂಬಗಳು ದಾಂಪತ್ಯದ ಸಂಬಂಧಗಳು ಸ್ವಾರ್ಥಕ್ಕೆ ಪ್ರತಿಷ್ಟೆಗೆ ಸಿಕ್ಕು ಧೂಳೀಪಟವಾಗಿವೆ. ಈ ನಮ್ಮ ಸಮಾಜವನ್ನು ಅದರಲ್ಲು ಗಾಳಿಗೋಪುರವಾಗಿರುವ ದಾಂಪತ್ಯದ ಬದುಕನ್ನು ಸಹನೀಯವಾಗಿಸು ಆ ಮೂಲಕ ಸಮಾಜವನ್ನು ಉಳಿಸಲು ಇಂತಹ ಹಾಡು ಸಾಹಿತ್ಯಗಳನ್ನು ಓದುವ ಕೇಳುವ ಸವಿಯುವ ಸವಿದು ಬದುಕಿಗೆ ಸತ್ವವಾಗಿಸಿಕೊಳ್ಳುವ ಅಗತ್ಯ ತುಂಬಾ ಇದೆ.
ದ್ರುವತಾರೆ ಚಿತ್ರದ ಮೂಲಕ ಇಂತದ್ದೊಂದು ಮಧುರ ಗೀತೆ ಕೊಟ್ಟಿದ್ದು ಚಿ. ಉದಯಶಂಕರ್ ಅವರು. ಅಷ್ಟೇ ಇಂಪಾದ ಸಂಗೀತ ನುಡಿಸಿದ್ದು ಉಪೇಂದ್ರಕುಮಾರ್ ಅವರು. ಹಾಡಿ ಜೀವ ತುಂಬಿದ್ದು ಡಾ. ರಾಜ್ ಕುಮಾರ್ ಮತ್ತು ವಾಣಿ ಜಯರಾಂ. ಜೀವಕ್ಕೆ ಭಾವತುಂಬಿದ್ದು ಡಾ. ರಾಜ್ಜುಮಾರ್ ಮತ್ತು ನನ್ನ ಪ್ರಿಯತಮೆ ಕನಸಿನ ರಾಣಿ ಗೀತಾ…
– ಸುರೇಶ ಎನ್ ಶಿಕಾರಿಪುರ, ಚಿಂತಕರು




