‘ಹೆಬ್ಬುಲಿ ಕಟ್’ ಅನ್ನು ಸ್ವಾಗತಿಸಿ, ಪ್ರೀತಿಯಿಂದ ಅಪ್ಪಿಕೊಳ್ಳಿ!

1 year ago

ಪ್ರೀತಿಯ ಕನ್ನಡಿಗ ಬಂಧುಗಳೇ,

ಹೊಸ ವರ್ಷಕ್ಕೆ ಕಾಲಿಡುವ ಈ ಶುಭಗಳಿಗೆಯಲ್ಲಿ ಶುಭಸಮಾಚಾರವೊಂದನ್ನು ನಿಮಗೆಲ್ಲಾ ತಿಳಿಸುವ ಹರ್ಷ ನನಗೆ. ಅತ್ಯಂತ ಖುಷಿ ಮತ್ತು ಹೆಮ್ಮೆಯಿಂದ ‘ಹೆಬ್ಬುಲಿ ಕಟ್’ ಎಂಬ ಹೊಸ ಕನ್ನಡ ಚಿತ್ರವನ್ನು ನಾನು ನಿಮಗೆ ಅರ್ಪಿಸುತ್ತಿದ್ದೇನೆ. ಶುದ್ಧ ಹಾಸ್ಯ ಮತ್ತು ಪರಿಶುದ್ಧ ಪ್ರೀತಿಯ ಮಿಶ್ರಣವಾಗಿರುವ ಈ ಭಾವನಾತ್ಮಕ ಕಥೆ ನಿಮ್ಮ ತುಟಿಯಂಚಲ್ಲಿ ನಗು, ಕಣ್ಣಂಚಲ್ಲಿ ಒಂದು ಹನಿ ನೀರು ತರಿಸುತ್ತದೆ ಎಂಬ ಭರವಸೆ ನನಗಿದೆ.

ಸಾಮಾಜಿಕ ಅಸಮಾನತೆಯ ತಳಹದಿಯಲ್ಲಿ ಪ್ರೀತಿ, ದ್ವೇಷ ಮತ್ತು ಸಂಬಂಧಗಳನ್ನು ಅನ್ವೇಷಿಸುವ ಪ್ರಾಮಾಣಿಕ ಪ್ರಯತ್ನವೇ ಈ ‘ಹೆಬ್ಬುಲಿ ಕಟ್’. ಪ್ರತಿಭಾನ್ವಿತ ತಾರಾಗಣ, ಸುಂದರ ಛಾಯಾಗ್ರಹಣ, ಮರೆಯಲಾಗದ ಸಂಗೀತದ ಸಮ್ಮಿಲನವಾಗಿರುವ ಹೆಬ್ಬುಲಿ ಕಟ್ ನಿಮ್ಮನ್ನು ಭಾವನಾತ್ಮಕ ಪಯಣವೊಂದರಲ್ಲಿ ಭಾಗಿಯಾಗಿಸುತ್ತದೆ ಎಂದು ಖಚಿತವಾಗಿ ಹೇಳಬಲ್ಲೆ. ಒಬ್ಬ ಶಾಲಾ ಹುಡುಗನ ಮುಗ್ಧತೆ ನಿಮ್ಮಲ್ಲಿ ಮುಗುಳ್ನಗು ಹುಟ್ಟಿಸಿದರೆ ಅವನಿರುವ ಸಮಾಜದ ವರ್ತನೆ ನಿಮ್ಮ ಗಂಟಲು ಬಿಗಿಯಾಗಿಸುತ್ತದೆ. ಉತ್ತರ ಕರ್ನಾಟಕದ ಈ ಕಥೆ ಹುಟ್ಟಿಸುವ ಪ್ರಶ್ನೆಗಳು ನಮ್ಮೆಲ್ಲರನ್ನೂ ಆತ್ಮಾವಲೋಕನಕ್ಕೆ ಒಡ್ಡುತ್ತವೆ.

ನಮ್ಮ ಈ ಅವಿಸ್ಮರಣೀಯ ಪಯಣದಲ್ಲಿ ನೀವೂ ಹೆಮ್ಮೆಯಿಂದ ಜೊತೆಯಾಗಿ! ‘ಹೆಬ್ಬುಲಿ ಕಟ್’ ನ ಝಲಕ್ ಅನ್ನು ನೋಡಿ, ಇಷ್ಟವಾದರೆ ನಿಮ್ಮ ಸ್ನೇಹಿತರಿಗೆ ಮತ್ತು ಬಂಧುಗಳಿಗೆ ಇದರ ಬಗ್ಗೆ ತಿಳಿಸಿ.

ಬಿಡುಗಡೆ: 2025 ರ ಮಾರ್ಚ್ ನಲ್ಲಿ ಚಿತ್ರಮಂದಿರಗಳಲ್ಲಿ

ನನ್ನ ಹೃದಯಕ್ಕೆ ಅತ್ಯಂತ ಹತ್ತಿರಾಗಿರುವ ‘ಹೆಬ್ಬುಲಿ ಕಟ್’ ಚಿತ್ರವನ್ನು ನಾಡಿನ ಜನತೆಗೆ ಅರ್ಪಿಸಲು ಅತ್ಯಂತ ಖುಷಿ ಮತ್ತು ಹೆಮ್ಮೆಯಿದೆ. ಭೀಮರಾವ್ ಪಿ ಅವರ ನಿರ್ದೇಶನದ ಈ ಚಿತ್ರ ನನ್ನ ಕಡೆಯಿಂದ ಕನ್ನಡಿಗರಿಗೆ ಹೊಸ ವರ್ಷದ ಕಾಣಿಕೆ ಮತ್ತು ಬದ್ಧತೆ. 2025 ರ ಮೊದಲ ದಿನದಂದೇ ಇದರ ಮೊದಲ ನೋಟವನ್ನು ನಿಮ್ಮೆದುರು ಇಡುತ್ತಿದ್ದೇವೆ.

‘ಹೆಬ್ಬುಲಿ ಕಟ್’ ಅನ್ನು ಸ್ವಾಗತಿಸಿ, ಪ್ರೀತಿಯಿಂದ ಅಪ್ಪಿಕೊಳ್ಳಿ!

ಶುಭ ಹಾರೈಕೆಗಳೊಂದಿಗೆ,
ಸತೀಶ್ ನೀನಾಸಂ, ನಟ

Leave a Reply