ಇತ್ತೀಚೆಗೆ ಹಲವಾರು ಗೆಳೆಯರು ನಿರಂತರವಾಗಿ ಸಾಮಾಜಿಕ ತಾಣಗಳಲ್ಲಿ ಫೋಟೊ ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ಬರೆದ ಕಾರಣದಿಂದ ನಿನ್ನೆ ಸಂಜೆ ಗೆಳೆಯರೊಂದಿಗೆ ಹೋಗಿ ಸಿನಿಮಾ ನೋಡಿಬಂದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ನಿರ್ದೇಶಕ ಉತ್ಸವ್ ಗೋನಾವರ ಅವರಿಗೆ ಕಥೆ ಹೇಳುವ ಶ್ರದ್ಧೆ ಇದೆ. ಅದನ್ನು ಹೇಗೆ ಮತ್ತು ಯಾವ ಯಾವ ಆಯಾಮಗಳಲ್ಲಿ ಅಭಿವ್ಯಕ್ತಿಗೊಳಿಸಬೇಕು ಎಂಬುದು ಗೊತ್ತಿಲ್ಲ.ತಾಂತ್ರಿಕ ಅಂಶಗಳಿಗೆ ಆದ್ಯತೆ ನೀಡದಿರುವುದು ಸಿನಿಮಾದ ಬಹು ದೊಡ್ಡ ಕೊರತೆ. ಲೈಟಿಂಗ್ ವ್ಯವಸ್ಥೆ ಇಲ್ಲದೆ ಒಳಾಂಗಣದ ಚಿತ್ರಣ ಮಾಡಿರುವುದು ನೋಡುಗರಿಗೆ ಹಿಂಸೆಯಾಗುತ್ತದೆ.
ಬಹುಶಃ ಸಾಕ್ಷ್ಯಚಿತ್ರ ಮಾಡಲು ಹೊರಟಿದ್ದ ಅವರು ನಂತರ ಈ ಸಿನಿಮಾವನ್ನು 93 ನಿಮಿಷಗಳವರೆಗೆ ಹಿಗ್ಗಿಸಿದ್ದಾರೆ. ಅನೇಕ ದೃಶ್ಯಗಳು ಸ್ಥಿರ ಚಿತ್ರದಂತೆ ಭಾಸವಾಗುತ್ತವೆ. ಜೊತೆಗೆ ಛಾಯಾಗ್ರಹಣ ಮಾಡುವಾಗ ಹ್ಯಾಂಡಿ ಕ್ಯಾಮರಾ ಬಳಸಿದ ಕಾರಣ ಆರಂಭದ ಹತ್ತು ನಿಮಿಷಗಳ ಹಳ್ಳಿಯ ದೃಶ್ಯಗಳು 70 ಎಂ.ಎಂ. ಹಿಗ್ಗಿಸಿದಾಗ ಸ್ಪಷ್ಟತೆ ಇಲ್ಲದೆ ಮಸುಕಾಗಿವೆ. ಆನಂತರ ಬೆಂಗಳೂರು ದೃಶ್ಯಗಳಿಗೆ ಬಂದ ನಂತರ ಸುಧಾರಿಸುತ್ತದೆ.
ಇಡೀ ಸಿನಿಮಾ ಹಿನ್ನಲೆ ಸಂಗೀತವಿಲ್ಲದೆ ಸಾಗಿರುವುದು ಬಹುದೊಡ್ಡ ಕೊರತೆ. ಎಷ್ಟೋ ವೇಳೆ ಮಾತುಗಳಲ್ಲಿ ಹೇಳಲಾಗದನ್ನು ದೃಶ್ಯಗಳ ಮೂಲಕ ಮತ್ತು ಸಂಗೀತದ ಮೂಲಕವೂ ಹೇಳಬಹುದು ಎಂಬುದನ್ನು ಉತ್ಸಾಹಿ ಯುವಕ ಗೋನಾವರ ಕಲಿಯಬೇಕಿದೆ. ಉತ್ತರ ಕರ್ನಾಟಕದ ಜಾನಪದ ಮತ್ತು ತತ್ವಪದಗಳನ್ನು ಹಿನ್ನಲೆಯಾಗಿ ಬಳಸಿಕೊಳ್ಳಬಹುದಿತ್ತು.
ಕೊರೊನಾ ಕಥೆಯನ್ನು ಸಶಕ್ತವಾಗಿ ಹೇಳಿದ್ದರೂ ಸಹ ಇನ್ನಷ್ಟು ಕಥನವನ್ನು ಸೇರಿಸಬಹುದಾಗಿತ್ತು. ಉದಾಹರಣೆಗೆ ಶವವನ್ನು ಯಾರೂ ಮುಟ್ಟದೆ ಇದ್ದ ಸ್ಥಿತಿ, ಕುಟುಂಬದವರು ಶವ ತ್ಯಜಿಸಿ ಹೋದ ಪ್ರಕರಣ, ಇತರೆ ಸಮುದಾಯದ ಜನ ವಿಶೇಷವಾಗಿ ಮುಸ್ಲಿಮರು ಅಂತ್ಯಕ್ರಿಯೆ ನೆರವೇರಿಸಿದ ಘಟನೆಗಳನ್ನು ಸೇರಿಸಿಕೊಂಡಿದ್ದರೆ ಸಿನಿಮಾವನ್ನು ಮೌನವಾಗಿ ಹಿಗ್ಗಿಸುವುದು ತಪ್ಪುತ್ತಿತ್ತು.
ಕೊನೆಯ ಹತ್ತು ನಿಮಿಷಗಳಲ್ಲಿ ಸಿನಿಮಾ ಪಡೆದುಕೊಂಡಿರುವ ಲವಲವಿಕೆ ಆರಂಭದಿಂದಲೂ ಇದ್ದಿದ್ದರೆ ಇಡೀ ಸಿನಿಮಾ ದೃಶ್ಯ ಕಾವ್ಯವಾಗುತ್ತಿತ್ತು. ಇಂದಿನ ಡಬ್ಬಾ ಸಿನಿಮಾ ಹಾವಳಿಗಳ ನಡುವೆ ಈ ಯುವಕರ ಪ್ರಾಮಾಣಿಕ ಪ್ರಯತ್ನ ಮತ್ತು ಶ್ರದ್ಧೆಯಿಂದ ಕಥೆ ಹೇಳುವ ಪ್ರಯತ್ನಕ್ಕೆ ನಾವು ಮೆಚ್ಚಲೇಬೇಕು.
ಧಾರವಾಡದ ಯುವ ಮಿತ್ರ ಮಹಾದೇವ ಹಡಪದ, ಜಹಾಂಗೀರ್ ಮತ್ತು ಸಂಧ್ಯಾ ಅರಕೆರೆ ಇವರ ಅಭಿನಯ ಮನದಲ್ಲಿ ನಿಲ್ಲುತ್ತದೆ. ಕನ್ನಡ ಚಿತ್ರರಂಗ ಮಹಾದೇವ ಹಡಪದನ ಪ್ರತಿಭೆಯನ್ನು ಬಳಸಿಕೊಳ್ಳಬೇಕಿದೆ.
ಒಟ್ಟಾರೆ ಪೋಟೋ ಸಿನಿಮಾದಿಂದ ಈ ಯುವಕರ ಬಗ್ಗೆ ನಾವು ಒಳ್ಳೆಯ ಭರವಸೆ ಇಟ್ಟುಕೊಳ್ಖಬಹುದು. ಇವರಿಗೆ ಒಳ್ಳೆಯ ನಿರ್ಮಾಪಕರು ಅಥವಾ ಆರ್ಥಿಕ ಸಹಾಯ ದೊರೆತರೆ ತುಕ್ಕು ಹಿಡಿದಿರುವ ಕನ್ನಡ ಸಿನಿಮಾರಂಗಕ್ಕೆ ಹೊಸ ಅಧ್ಯಾಯ ಬರೆಯಬಲ್ಲರು ಎಂಬ ಭರವಸೆ ಮೂಡಿಸಿದ್ದಾರೆ.
ಸಿನಿಮಾ ಕುರಿತಾಗಿ ಈ ಯುವಕರಲ್ಲಿ ಶ್ರದ್ಧೆ ಇದೆ. ಪ್ರಾಮಾಣಿಕತೆ ಇದೆ. ಇದನ್ನು ನಾವು ಬಳಸಿಕೊಂಡು ಪ್ರೋತ್ಸಾಹಿಸಬೇಕಿದೆ. ಚಿತ್ರತಂಡಕ್ಕೆ ಶುಭ ಹಾರೈಕೆಗಳು
- ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




