ಶಿವಮೊಗ್ಗ: ಅರ್ಜಿದಾರರಾದ ಎಸ್. ಪ್ರೇಮ ಎಂಬುವವರು ಹೆಚ್.ಡಿ.ಎಫ್.ಸಿ. ಸ್ಟ್ಯಾಂಡರ್ಡ್ ಲೈಫ್ ಇನ್ಸೂರೆನ್ಸ್ ಕಂ.ಲಿ., ಮುಂಬೈ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅರ್ಜಿದಾರರಿಗೆ ವಿಮಾ ಪರಿಹಾರ ಪಾವತಿಸುವಂತೆ ಎದುರುದಾರರಿಗೆ ಆದೇಶಿಸಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಎಸ್.ಪ್ರೇಮ ಎಂಬುವವರ ಪತಿಯು ಎಕ್ಸೈಡ್ ಲೈಫ್ ಸ್ಮಾರ್ಟ್ ಟರ್ಮ್ ಪ್ಲ್ಯಾನ್ ವಿಮಾ ಪಾಲಿಸಿಯನ್ನು ಪಡೆದಿದ್ದು, ವಾರ್ಷಿಕ ರೂ. 12,752/- ನ ಕಂತು ಪಾವತಿಸಿರುತ್ತಾರೆ. ಇವರು ದಿ: 19/07/2021 ರಂದು ಹೃದಯಸ್ಥಂಭನದಿಂದ ಮೃತಪಟ್ಟಿರುತ್ತಾರೆ. ಈ ಸಂಬಂಧ ಮೃತರ ಪತ್ನಿ ಹೆಚ್.ಡಿ.ಎಫ್.ಸಿ. ಸ್ಟ್ಯಾಂಡರ್ಡ್ ಲೈಫ್ ಇನ್ಸೂರೆನ್ಸ್ ಕಂ.ಲಿ., ಮುಂಬೈ ಇವರನ್ನು ಸಂಪರ್ಕಿಸಿ ಸೂಕ್ತ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಿ ಪಾಲಿಸಿಗನುಗುಣವಾಗಿ ವಿಮಾ ಪರಿಹಾರ ಮೊತ್ತ ಸಂದಾಯ ಮಾಡುವಂತೆ ಕೋರಿದ್ದರು.
ಆದರೆ ಕಂಪನಿಯವರು ಅರ್ಜಿದಾರರ ಪತಿಯು ಪಾಲಿಸಿಯನ್ನು ಪಡೆಯುವ ಪೂರ್ವದಲ್ಲಿ ಬೇರೆ ಪಾಲಿಸಿಗಳನ್ನು ಹೊಂದಿರುವ ವಿಚಾರವನ್ನು ಮರೆಮಾಚಿರುತ್ತಾರೆ. ಮತ್ತುಈ ಸಂಗತಿಯು ವಿಮಾ ಪಾಲಿಸಿಯ ನಿಬಂಧನೆಯ ಉಲ್ಲಂಘನೆಯಾಗಿರುವುದರಿಂದ ವಿಮಾ ಪರಿಹಾರ ಪಡೆಯಲು ಅರ್ಹರಾಗಿರುವುದಿಲ್ಲ ಎಂಬ ಕಾರಣ ನೀಡಿ ಪರಿಹಾರ ಮೊತ್ತ ನೀಡಲು ನಿರಾಕರಿಸಿದರು.
ಆಯೋಗ ಪ್ರಕರಣದ ಅಂಶಗಳು, ಪಿರ್ಯಾದಿದಾರರು ಹಾರುಪಡಿಸಿದ ದಾಖಲೆಗಳು ಮತ್ತು ವಿಮಾ ಪಾಲಿಸಿಯ ಷರತ್ತು ಮತ್ತು ನಿಬಂಧನೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ವಿಮಾ ಕಂಪೆನಿಯು ಪರಿಹಾರವನ್ನು ಪಾವತಿಸದೆ ಸೇವಾ ನ್ಯೂನತೆ ಎಸಗಿದ್ದಾರೆಂದು ನಿರ್ಣಯಿಸಿ, ವಿಮಾ ಕಂಪನಿಗೆ ನೋಟಿಸ್ ಜಾರಿ ಮಾಡಿದರೂ, ಆಯೋಗದ ಮುಂದೆ ಗೈರುಹಾಜರಾಗಿರುವುದರಿಂದ ಪ್ರಕರಣವನ್ನು ಏಕ-ಪಕ್ಷೀಯವೆಂದು ಪರಿಗಣಿಸಿ ಅರ್ಜಿದಾರರು ವಿಮಾ ಪರಿಹಾರವನ್ನು ಪಡೆಯಲು ಅರ್ಹರಾಗಿರುತ್ತಾರೆಂದು ಪರಿಗಣಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿದೆ.
ಈ ಪ್ರಕಾರ ಎದುರುದಾರು ಅರ್ಜಿದಾರರಿಗೆ ಪಾಲಿಸಿಗೆ ಅನುಗುಣವಾಗಿ ಪಾಲಿಸಿ ಪರಿಹಾರ ಮೊತ್ತ ರೂ. 24.00 ಲಕ್ಷಗಳನ್ನು ಪಾವತಿಸುವುದು. ಹಾಗೂ ತಮ್ಮ ಸೇವಾ ನ್ಯೂನತೆಯಿಂದಾಗಿ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ ಪರಿಹಾರ ಹಾಗೂ ರೂ.15000 ಗಳನ್ನು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತಾಗಿ ರೂ. 10,000/-ಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಬಾಂಡ್ಯ ಇವರ ಪೀಠ ಆದೇಶಿಸಿದೆ.




