ಬೆಂಗಳೂರು: ಚಿಕ್ಕಪೇಟೆಯ ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಾಜಿ ಸಚಿವ ಮೂಲೂರು ಎನ್.ಕೃಷ್ಣಯ್ಯ ಶೆಟ್ಟಿ ನೇತೃತ್ವದಲ್ಲಿ ಮಹಾಶಿವರಾತ್ರಿ ಹಬ್ಬ ಮತ್ತು ಮಹಾಕುಂಭಮೇಳದ ಪ್ರಯುಕ್ತ ರಾಜ್ಯದಲ್ಲಿರುವ 3800 ಶಿವ ದೇವಾಲಯಗಳಿಗೆ ಪವಿತ್ರ ಗಂಗಾ ಜಲ ಮತ್ತು ಪ್ರಯಾಗ್ ರಾಜ್ ತ್ರಿವೇಣಿ ಸಂಗಮ ಪವಿತ್ರ ಜಲ ಸಾರ್ವಜನಿಕರಿಗೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಕಾಶಿ ವಿಶ್ವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪವಿತ್ರ ಜಲ ಟ್ಯಾಂಕರ್ ಗಳಿಗೆ ಪೂಜೆ ಸಲ್ಲಿಸಿ ಚಾಲನೆಯನ್ನು ಮೂಲೂರು ಎಸ್.ಎನ್.ಕೃಷ್ಣಯ್ಯ ಶೆಟ್ಟಿ ನೀಡಿದರು.
ಮಾಜಿ ಶಾಸಕ ಪಿ.ಎಸ್.ಪ್ರಕಾಶ್ , ದೇವಸ್ಥಾನದ ಅಗಮ ಪಂಡಿತರು, ಅರ್ಚಕರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಶಿವನಿಗೆ ಭಸ್ಮ ಮತ್ತು ಜಲಭಿಷೇಕ ಮಾಡಿದರು ಸಾಕು ಒಲಿಯುತ್ತಾನೆ ಎಂದು ಹಿಂದೂ ಧರ್ಮದಲ್ಲಿ ನಂಬಿಕೆ. ನಮ್ಮೆಲ್ಲರ ಜೀವನದಲ್ಲಿ ಶಿವನ ಅನುಗ್ರಹದಿಂದ ಮಾತ್ರ ಜೀವನದಲ್ಲಿ ಯಶ್ವಸಿಯಾಗಲು ಸಾಧ್ಯ ಎಂದರು.
ರಾಜ್ಯ ಸರ್ಕಾರದಲ್ಲಿ ನಾನು ಮಂತ್ರಿಯಾಗಿದ್ದ ಸಂದರ್ಭದಿಂದ ಹಿಡಿದು ಅಂದರೆ 18 ವರ್ಷದಿಂದ ಗಂಗಾಜಲವನ್ನು ರಾಜ್ಯಾದ್ಯಂತ ಇರುವ ಶಿವನ 3800ದೇವಸ್ಥಾನಗಳಿಗೆ ಪವಿತ್ರ ಗಂಗಾಜಲ ಭಕ್ತಾದಿಗಳಿಗೆ ಶಿವರಾತ್ರಿ ಹಬ್ಬದಂದು ತೀರ್ಥ ನೀಡುವ ಮತ್ತು ಶಿವನಿಗೆ ಜಲಾಭಿಷೇಕ ಮಾಡಲು ಅಂದಿನಿಂದ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
ಮಹಾಕುಂಭ ಮೇಳದಲ್ಲಿ 50 ಕೋಟಿಗೂ ಹೆಚ್ಚು ಜನರು ಪ್ರಯಾಗ್ ರಾಜ್ ತ್ರಿವೇಣಿ ಸಂಗಮದಲ್ಲಿ ತೀರ್ಥ ಸ್ನಾನ ಮಾಡಿದ್ದಾರೆ. ಹೋಗದೆ ಇರುವವರು, ಬಡವರು, ವಯಸ್ಸಾದವರ ಅನುಕೂಲಕ್ಕೆ ಗಂಗಾಜಲ ಮತ್ತು ತ್ರಿವೇಣಿ ಸಂಗಮದ ಜಲ ನೀಡಲಾಗುತ್ತಿದೆ. ನಾಡಿನ ಸಮಸ್ತ ಜನರಿಗೆ ಮಹಾಶಿವರಾತ್ರಿ ಹಬ್ಬದ ಶುಭಾ ಸಂದರ್ಭದಲ್ಲಿ ಎಲ್ಲರಿಗೂ ಸುಖ, ಶಾಂತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.




