ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ಹೇಳಿಕೊಂಡು ಚಿನ್ನಾಭರಣ ವ್ಯಾಪಾರಿಗಳು ಸೇರಿದಂತೆ ಹಲವರನ್ನು ವಂಚಿಸಿದ ಆರೋಪದಲ್ಲಿ ಸಿಲುಕಿರುವ ಐಶ್ವರ್ಯ ಗೌಡ, ಅಷ್ಟೇ ಅಲ್ಲದೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪತ್ನಿ ಅನಿತಾ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿಯವರ ಹತ್ತಿರದ ಸಂಬಂಧಿಗಳು ಎಂದು ಹೇಳಿಕೊಂಡಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
- ಹೈಕಮಾಂಡ್ಗೆ ಕೊಡಲು ಹಣವಿದೆ, ರೈತರಿಗೆ ಕೊಡಲು ಹಣವಿಲ್ಲ: ಆರ್.ಅಶೋಕ
- ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಕುರಿತು ಡಿ ಕೆ ಶಿವಕುಮಾರ್ ಹೇಳಿದ್ದೇನು?
- ಬರ ಘೋಷಣೆಗಿರುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಲಿ: ಡಾ. ಜಿ. ಪರಮೇಶ್ವರ್
- ಧನುಷ್ ನಟನೆಯ ‘OM’ ಬಿಡುಗಡೆ ದಿನಾಂಕ ಮುಂದೂಡಿಕೆ!
ಡಿ.ಕೆ.ಸುರೇಶ್ ತಂಗಿ ಎಂದು ಹೇಳಿಕೊಂಡು ಚಿನ್ನದ ವ್ಯಾಪಾರಿಯಿಂದ 9 ಕೋಟಿ ರೂಪಾಯಿ ಮೊತ್ತದ ಚಿನ್ನ ಪಡೆದು ವಂಚಿಸಿದ ಐಶ್ವರ್ಯಗೌಡ ಮಂಡ್ಯದ ಪೂರ್ಣಿಮಾ ಎಂಬುವರಿಗೂ ವಂಚಿಸಿದ್ದಾಳೆ.
ಅವರಿಂದ 100 ಗ್ರಾಂ ಚಿನ್ನದ ಜೊತೆಗೆ 15 ಲಕ್ಷ ಹಣ ಪಡೆದು ಇಂದು ನಾಳೆ ವಾಪಸ್ಸು ಕೊಡುವೆ ಎಂದು ಸತಾಯಿಸಿದ್ದಾಳೆ. ಅಲ್ಲದೇ ಹಣ ಪಡೆಯುವ ಮುನ್ನ ನಾನು ಡಿ.ಕೆ.ಸುರೇಶ್ ತಂಗಿ ಎಂದು ಐಶ್ವರ್ಯ ಪರಿಚಯ ಮಾಡಿಕೊಂಡ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜೊತೆಗೆ ತನಗೆ ಹೆಚ್‌ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿಯೂ ಬಹಳಷ್ಟು ಪರಿಚಿತರು ಎಂದು ಕೂಡ ನಂಬಿಕೆ ಗಳಿಸಿಕೊಂಡಿದ್ದಾಳೆ. ಈ ಕುರಿತು ಐಶ್ವರ್ಯಗೌಡ ವಿರುದ್ಧ ಮಂಡ್ಯ ಪೂರ್ವ ಠಾಣೆಯಲ್ಲಿ ರವಿಕುಮಾರ್ ಹಾಗೂ ಪೂರ್ಣಿಮಾ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅನಿತಾ ಕುಮಾರಸ್ವಾಮಿ, ನಿಖಿಲ್ ಇಬ್ಬರೂ ಬಹಳಷ್ಟು ಪರಿಚಿತರು. ನಿಮಗೆ ಅವರ ಕಡೆಯಿಂದ ಸಹಾಯ ಬೇಕಿದ್ದರೆ ನನಗೆ ಹೇಳಿ. ನಾನು ಸಹಾಯ ಮಾಡುವೆ ಎಂದು ಐಶ್ವರ್ಯಗೌಡ ಹೇಳಿ ನಮ್ಮನ್ನ ನಂಬಿಸಿ ನಮ್ಮ ಬಳಿ ಹಂತ ಹಂತವಾಗಿ 40 ಲಕ್ಷ ರೂ. ಹಾಗೂ ಪೂರ್ಣಿಮಾ ಬಳಿಯೂ ಹಣ, ಚಿನ್ನ ಪಡೆದಿದ್ದಳು. ಈಗ ಹಣ ವಾಪಸ್ಸು ನೀಡದೇ ಮೋಸ ಮಾಡಿದ್ದಾಳೆ ಎಂದು ದೂರಿದ್ದಾರೆ.
ಈ ನಡುವೆ ಮಹಿಳೆಯೊಬ್ಬರಿಗೆ 3.25 ಕೋಟಿ ರೂ ವಂಚಿಸಿರುವ ಪ್ರಕರಣದ ತನಿಖೆ ತೀವ್ರಗೊಳಿಸಿರುವ ರಾಜರಾಜೇಶ್ವರಿನಗರ ಪೊಲೀಸರು, ಸರ್ಚ್ ವಾರೆಂಟ್ ಪಡೆದು ಆರೋಪಿ ಐಶ್ವರ್ಯ ಗೌಡ ಮನೆಗೆ ತೆರಳಿ ಪರಿಶೀಲಿಸಿದ್ದಾರೆ.




