ಕೆಲವೇ ಕ್ಷಣಗಳ ಹಿಂದೆ ನಡೆದ ಘಟನೆ. ಬಿಜೆಪಿಯ ನೂತನ ಸಂಸದೆ, ಮಾಜಿ ನಟಿ ಕಂಗನಾ ರಣಾವತ್ ದಿಲ್ಲಿಗೆ ಫ್ಲೈಟ್ ಹತ್ತಲು ಚಂಡೀಗಢ ಏರ್ ಪೋರ್ಟಿಗೆ ಹೋಗಿದ್ದಾಗ ಅಲ್ಲಿನ ಸಿ ಐ ಎಸ್ ಎಫ್ ಮಹಿಳಾ ಭದ್ರತಾ ಸಿಬ್ಬಂದಿಯಾದ ಕುಲ್ವಿಂದರ್ ಕೌರ್, ಸಂಸದೆಯ ಕೆನ್ನೆಗೆ ಬಾರಿಸಿದ್ದಾರೆ. ದಿಲ್ಲಿಯಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದಾಗ ಮೋದಿಯ ಪರ ವಕಾಲತ್ತು ವಹಿಸುವ ಭರಾಟೆಯಲ್ಲಿ ರೈತರನ್ನು ಖಲಿಸ್ತಾನಿ ಉಗ್ರರು ಎಂದು ಹಗುರವಾಗಿ ಮಾತಾಡಿದ್ದಕ್ಕಾಗಿ ತಾನು ಆ ನಟಿಯ ಕೆನ್ನೆಗೆ ಬಾರಿಸಿದ್ದೇನೆ ಎಂದು ಆಕೆ ಹೇಳಿಕೊಂಡಿರುವ ವರದಿಗಳು ಕೇಳಿಬರುತ್ತಿವೆ.
- ಪೌರ ಕಾರ್ಮಿಕರ ದಿರಿಸಿನಲ್ಲಿ ಡಿ ಕೆ ಶಿವಕುಮಾರ್
- ಹಾಸನದಲ್ಲಿ ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಸಮಾವೇಶ
- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 25 ಸೀಟು ಕೂಡ ಬರುವುದಿಲ್ಲ: ಆರ್.ಅಶೋಕ
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
- ಹೈಕಮಾಂಡ್ಗೆ ಕೊಡಲು ಹಣವಿದೆ, ರೈತರಿಗೆ ಕೊಡಲು ಹಣವಿಲ್ಲ: ಆರ್.ಅಶೋಕ
ಈ ಇಡೀ ಘಟನೆಯಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಕೆಲವೇ ದಿನಗಳ ಹಿಂದೆ ಬಿಜೆಪಿಯವರ ವಿರುದ್ಧ, ಅದರಲ್ಲೂ ಮೋದಿಯ ವಿರುದ್ಧ ಮಾತಾಡುವುದಕ್ಕೂ ಹೆದರಿಕೊಳ್ಳುತ್ತಿದ್ದ ಜನರಲ್ಲಿ; ನ್ಯಾಯಯುತ ಪ್ರತಿಭಟನೆ ದಾಖಲಿಸುವುದಕ್ಕೂ ಭಯಪಡುತ್ತಿದ್ದ ಜನರಲ್ಲಿ, ಈ ಫಲಿತಾಂಶದ ನಂತರ ಸಣ್ಣ ಧೈರ್ಯ ಹೊಮ್ಮುತ್ತಿದೆ. ಸರ್ವಾಧಿಕಾರಿಯ ಬಿಗಿಹಿಡಿತ ಸಡಿಲಗೊಂಡು ನನ್ನ ದೇಶ ಮತ್ತೆ ಪ್ರಜಾಪ್ರಭುತ್ವದ ಹಿತಗಾಳಿಗೆ ತೆರೆದುಕೊಳ್ಳುತ್ತಿದೆ ಎಂಬ ವಿಶ್ವಾಸವೇ ಜನರಲ್ಲಿ ಈ ಧೈರ್ಯ ಮೂಡಲು ಕಾರಣ ಎನ್ನಬಹುದು. ಜನರ ಆಕ್ರೋಶಗಳನ್ನು ಬಹಳ ದಿನ ಅದುಮಿಡಲು ಸಾಧ್ಯವಿಲ್ಲ.
ಆ ಮಹಿಳಾ ಸಿಬ್ಬಂದಿ ಹಲ್ಲೆ ಮಾಡಿದ್ದನ್ನು ಯಾವ ಕಾರಣಕ್ಕೂ ಸಮರ್ಥಿಸಿಕೊಳ್ಳಲಾಗದು. ಆದರೆ, ಭೀತಿಯ ಕಾರ್ಮೋಡ ಸರಿದು ದೇಶದ ಜನರಲ್ಲಿ ಮತ್ತೆ ಮೊಳಕೆಯೊಡುತ್ತಿರುವ ಹೊಸ ಸಂಚಲನಕ್ಕೆ ಆಕೆ ಸಾಕ್ಷಿಯಾಗಿದ್ದಾಳೆ ಅನ್ನಿಸುತ್ತೆ. ಇದು ಬಿಜೆಪಿಯ ಬಾಲಬಡುಕರಿಗೆ, ಕೇಸರಿ ಮೀಡಿಯಾ ಕಿರಾತಕರಿಗೆ ಎಚ್ಚರಿಕೆಯ ಗಂಟೆ ಎಂದರೂ ತಪ್ಪಲ್ಲ.
ಹೊಸಗಾಳಿಗೆ ಮುಖವೊಡ್ಡುವ ಖುಷಿಯೇ ಚೆಂದ.
- ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು




