ಜಿಮ್ ನಲ್ಲಿ ಹೊಸ ಯಂತ್ರ ಅಳವಡಿಕೆಗೆ ಕೇರಳ ನಿರ್ಧಾರ

4 years ago

ತಿರುವನಂತಪುರ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನಾನಂತರ ಜಿಮ್ ನಲ್ಲಿ ವರ್ಕ್ ಔಟ್ ಮಾಡುವ ವಿಷಯದ ಕುರಿತು ಅನೇಕ ಊಹಾಪೋಗಳು ಎದ್ದಿವೆ. ಜಿಮ್ನಲ್ಲಿ ಹೆಚ್ಚು ಸಮಯ ವರ್ಕ್ಔಟ್ ಮಾಡಿದವರು ಹಾಗೂ ಅಲ್ಲಿ ನೀಡುವ ಪಾನೀಯಗಳನ್ನು ಕುಡಿದ ಪರಿಣಾಮದಿಂದ ಕೆಲವರು ಬಲಿಯಾಗಿರುವ ಸಂಭವದ ಕುರಿತು ತಜ್ಞರು ತಮ್ಮ ನಿಲುವ ಹಂಚಿಕೊಂಡಿದ್ದಾರೆ.
ಇವೆಲ್ಲ ಬೆಳವಣಿಗೆಗಳ ನಡುವೆ ಕೇರಳ ಸರ್ಕಾರ, ಜಿಮ್ಗಳಲ್ಲಿ ಎಇಡಿ ಉಪಕರಣ ಕಡ್ಡಾಯ ಮಾಡುವಂತೆ ಆದೇಶಹೊರಡಿಸಿದೆ. ಈ ಮೂಲಕ ಜಿಮ್ಗಳಲ್ಲಿ ಆಕಸ್ಮಿಕವಾಗಿ ಹೃದಯದ ತೊಂದರೆಯಾದರೆ ಗುರುತಿಸಲು ಅವಕಾಶವಾಗಲಿದೆ. ಜಿಮ್ನಲ್ಲಿ ದೈಹಿಕ ಕಸರತ್ತು ನಡೆಸುವ ವೇಳೆ ಇದ್ದಕ್ಕಿದ್ದಂತೆ ಹೃದಯ ಬಡಿತ ನಿಂತರೆ ಅಥವಾ ಹೃದಯ ಸಂಬಂಧೀ ಸಮಸ್ಯೆಯಾರೆ ತಕ್ಷಣ ಉಪಚಾರ ಮಾಡಲು ಈ ಉಪಕರಣ ನೆರವಾಗಲಿದೆ.

Leave a Reply