ಗಗನಮುಖಿಯಾದ ಇಂಧನ ದರ: ಗೋಳು ಕೇಳುವ ದೊರೆ ಎಲ್ಲಿ?

4 years ago

ದೆಹಲಿ: ಸತತ 4ನೇ ದಿವೂ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಿದೆ. ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ದರ 120ರ ಗಡಿ ದಾಟಿದೆ. ಮಧ್ಯಪ್ರದೇಶದ ಪನ್ನಾ, ಸಾತ್ನಾ, ರೇವಾ, ಶಾದೂಲ್, ಛಿಂದ್ವಾರ ಹಾಗೂ ಬಾಲಾಘಾಟ್ಗಳಲ್ಲಿ ಲೀಟರ್ ಪೆಟ್ರೋಲ್ ದರ 120 ರೂ. ದಾಟಿಬಿಟ್ಟಿದೆ.

ರಾಜಸ್ಥಾನದ ಗಂಗಾನಗರ ಹಾಗೂ ಹನುಮಾನ್ಗಡ ಪಟ್ಟಣಗಳಲ್ಲಿ ಪೆಟ್ರೋಲ್ ದರ 121.52 ಹಾಗೂ ಡೀಸೆಲ್ ದರ 112.44 ರೂ.ಗೆ ಏರಿಕೆಯಾಗಿದೆ. ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 109.34 ರೂ. ಮತ್ತು ಡೀಸೆಲ್ ದರ 98.07 ರೂ.ಗೆ ಏರಿದೆ. ಮುಂಬೈನಲ್ಲಿ ಪೆಟ್ರೋಲ್ ದ 115.15 ರೂ. ಮತ್ತು ಡೀಸೆಲ್ ದರ 106.23ಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದ್ದು, ಮಧ್ಯಮ ಮತ್ತು ಬಡ ಕುಟುಂಬಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆಡಳಿತಾರೂಢ ಪಕ್ಷ ಬೆಲೆ ನಿಯಂತ್ರಿಸುವಲ್ಲಿ ವಿಫಲವಾಗಿದ್ದರೆ, ಅದನ್ನು ಬೆಂಬಲಿಸುವ ಸಂಘ ಪರಿವಾರ ಮತ್ತು ಅದರ ಸಹ ಸಂಸ್ಥೆಗಳು ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ, ಭಾರತದಲ್ಲಿ ಮತಾಂತರ ಮೊದಲಾದ ವಿಚಾರಗಳನ್ನು ಕುರಿತು ಚರ್ಚೆ, ಪ್ರತಿಭಟನೆ ನಡೆಸುತ್ತಿವೆ. ಇವೆಲ್ಲವುಗಳ ನಡುವೆ ಬಡವರ ಬದುಕು ಹೈರಾಣಾಗಿದೆ.

Leave a Reply