ಕೂ ಸಂಸ್ಥೆಯಲ್ಲಿ ಉದ್ಯೋಗವಕಾಶ ಸೃಷ್ಟಿ

5 years ago

ದೆಹಲಿ: ದೇಶೀಯ ಸಾಮಾಜಿಕ ಮಾಧ್ಯಮ ಸಂಸ್ಥೆ ಕೂ ಮುಂದಿನ ವರ್ಷದಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು 500ಕ್ಕೆ ಏರಿಸಲಿದೆ ಎಂದು ಕೂ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಸಿಹಿ ಸುದ್ದಿ ನೀಡಿದ್ದಾರೆ.

ಕೂ ಸದ್ಯಕ್ಕೆ 200 ಜನರಿಗೆ ಉದ್ಯೋಗವಕಾಶ ನೀಡಿದೆ. ಎಂಜಿನಿಯರಿಂಗ್, ನಿರ್ಮಾಣ ಮತ್ತು ಕಮ್ಯೂನಿಟಿ ಮ್ಯಾನೇಜ್ಮೆಂಟ್ ವಿಭಾಗಗಳಲ್ಲಿ ಹೊಸ ಹುದ್ದೆಗಳಿಗೆ ನೇಮಕ ನಡೆಯಲಿದೆ. ಮುಂದಿನ 1 ವರ್ಷದಲ್ಲಿ ನಮ್ಮ ಉದ್ಯೋಗಿಗಳ ಸಂಖ್ಯೆ 500ಕ್ಕೆ ತಲುಪಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೂ ಕಂಪನಿ ಕೂಡ ಮಾರ್ಕೆಟಿಂಗ್, ಬ್ರಾಂಡ್ ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಅತ್ಯುತ್ತಮವಾಗಿ ಕೆಲಸ ನಿರ್ವಹಿಸುವ ಹಾಗೂ ಭಾರತದ ತಂತ್ರಜ್ಞಾನವನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಬಲ್ಲ ಅತ್ಯುತ್ತಮ ಪ್ರತಿಭೆಗಳು ನಮಗೆ ಬೇಕೆಂದು ಅಗತ್ಯ ಎಂದು ಅವರು ಹೇಳಿದ್ದಾರೆ.

ಸಾಮಾಜಿ ಕ ಮಾಧ್ಯಮಗಳ ಪೈಕಿ ಟ್ವಿಟರ್‌ನ ಪ್ರಮುಖ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಕೂ, ಮಾರುಕಟ್ಟೆಗೆ ಪರಿಚಯವಾದ ಕೆಲವೇ ದಿನಗಳಲ್ಲಿ 10 ಮಿಲಿಯನ್ ಬಳಕೆದಾರರನ್ನು ಹೊಂದುವ ಮೂಲಕ ದಾಖಲೆಗೆ ಪಾತ್ರವಾಗಿದೆ. ವರ್ಷದ ಹಿಂದೆ ಪರಿಚಯಿಸಲ್ಪಟ್ಟ ಕೂ ಸದ್ಯಕ್ಕೆ ಹಿಂದಿ, ತೆಲುಗು, ಬಂಗಾಳಿ ಮೊದಲಾದ ಭಾಷೆಗಳಲ್ಲಿ ಸಕ್ರಿಯವಾಗಿದೆ. ಕೇಂದ್ರ ರೂಪಿಸಿರುವ ಹೊಸ ಐಟಿ ನಿಯಮಗಳ ಪ್ರಕಾರ ಕಂಪ್ಲೈಯನ್ಸ್ ರಿಪೋರ್ಟ್ ಸಲ್ಲಿಸಿರುವ ಮೊದಲ ಸಾಮಾಜಿಕ ಮಾಧ್ಯಮ ವೇದಿಕೆ ಎಂಬ ಶ್ರೇಯಕ್ಕೆ ಕೂ ಕಂಪನಿ ಪಾತ್ರವಾಗಿದೆ.

Leave a Reply