ವಿಚಿತ್ರ ಟೊಮ್ಯಾಟೋ ಸ್ಪರ್ಧೆ

5 years ago

ಮ್ಯಾಡ್ರಿಡ್: ಸ್ಪೇನ್‌ ಎಂದರೆ ಯುವ ಜನಾಂಗಕ್ಕೆ ನೆನಪಾಗುವುದು ‘ಲಾ ಟೊಮ್ಯಾಟಿನೊ ಉತ್ಸವ’. ಪರಸ್ಪರ ಟೊಮ್ಯಾಟೊ ಎರಚಿ, ಊರಿಗೆ ಊರೇ ಟೊಮ್ಯಾಟೊ ರಸದಲ್ಲಿ ಮುಳುಗಿ ಏಳುವ ವಿಚಿತ್ರ ಆಚರಣೆ ಸ್ಪೇನ್ ನಲ್ಲಿ ನಡೆಯುತ್ತದೆ. ಗೂಳಿ ಕಾಳಗದಷ್ಟೇ ಈ ಆಟ ಕೂಡ ಪ್ರಸಿದ್ಧವಾಗಿದೆ.

ಈ ಬಾರಿ ಸ್ಪೇನ್‌ ರೈತರು “ವಿಕೃತವಾಗಿ ಕಾಣುವ ಟೊಮ್ಯಾಟೊ” ಎಂಬ ಸ್ಪರ್ಧೆ ಆಯೋಜಿಸುವ ಮೂಲಕ ಸ್ಪೇನಿಗರು ಸುದ್ದಿಯಲ್ಲಿದ್ದಾರೆ. ಮರ್ಮಂಡಿ ತಳಿಯ ವಿಚಿತ್ರ ಆಕಾರದ ಟೊಮ್ಯಾಟೊಗಳ ಸ್ಪರ್ಧೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಸ್ಪರ್ಧೆಯಲ್ಲಿ ಗೆದ್ದಿರುವ ಮರಿಸೊಲ್‌ ಮತ್ತು ವಿನ್‌ಸೆಂಟಿ ಮಾರ್ಟಿನೆಜ್‌ ಪ್ರಕಾರ, ಟೊಮ್ಯಾಟೊ ವಿಕಾರ ಆಕೃತಿಗೆ ತಿರುಗಲು ಕಾರಣ ಅವುಗಳ ಬೀಜಗಳನ್ನು ದುಂಬಿಗಳು ಹೊತ್ತೊಯ್ಯುವ ಸಮಯದಲ್ಲಿ ಆಗುವ ವ್ಯತ್ಯಾಸವಂತೆ. ಟೊಮ್ಯಾಟೊಗಳ ಆಕಾರ ವಿರೂಪ ಹೊಂದುವುದು ತೀರಾ ವಿರಳ. ಆದರೂ ವಿಚಿತ್ರ ಟೊಮ್ಯಾಟೋಗಳ ಸ್ಪರ್ಧೆ ನಡೆದು ಬಹುಮಾನವನ್ನು ಕೂಡ ವಿತರಿಸಲಾಗಿದೆ.

Leave a Reply