ಮುಂಬೈ: ನಟಿ ನೀನಾ ಗುಪ್ತಾ ವೈದ್ಯರು ಹಾಗೂ ಟೈಲರ್ ನಿಂದ ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ ಎಂದಿದ್ದಾರೆ. ಆತ್ಮಕಥೆ ‘ಸಚ್ ಕಹುನ್ ತೋ’ದಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, ವೈದ್ಯರು ಹಾಗೂ ಟೈಲರ್ ತನ್ನ ದೇಹದ ಅಂಗಗಳನ್ನು ಸ್ಪರ್ಶಿಸಿ ಕಿರುಕುಳ ನೀಡಿದ್ದ ಕುರಿತು ಬರೆದಿದ್ದಾರೆ.
ಲೈಂಗಿಕ ವಿಷಯಕ್ಕೆ ಸಂಬಂಧಿಸಿದಂತೆ ಎಷ್ಟು ಅಸಹ್ಯಪಟ್ಟಿದ್ದೇನೆ ಎಂದು ವಿವರಿಸಿರುವ ಅವರು, ಕಣ್ಣಿನ ಪರೀಕ್ಷೆಗೆ ವೈದ್ಯರ ಬಳಿಗೆ ತೆರಳಿದ್ದೆ. ವೈದ್ಯರು ಕಣ್ಣನ್ನು ಪರೀಕ್ಷಿಸಿದ ನಂತರ ಇತರ ಅಂಗಗಳನ್ನೂ ಪರೀಕ್ಷಿಸಿದರು. ಈ ವೇಳೆ ನಾನು ತುಂಬಾ ಹೆದರಿದ್ದೆ. ಮನೆ ತಲುಪವವರೆಗೆ ವೈದ್ಯರ ಕೃತ್ಯ ಅಸಹ್ಯ ಮೂಡಿಸಿತ್ತು ಎಂದು ದಾಖಲಿಸಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಬ್ಬಂಟಿಯಾಗಿದ್ದಾಗ ಘಟನೆ ನೆನೆದು ಕಣ್ಣೀರು ಹಾಕುತ್ತಿದ್ದೆ. ತಾಯಿ ಬಳಿ ಈ ಕುರಿತು ಹೇಳಲು ಭಯ ಪಡುತ್ತಿದ್ದೆ. ಈ ವಿಚಾರ ಹೇಳಿದರೆ ನನ್ನನ್ನು ಪ್ರಶ್ನಿಸುತ್ತಾರೆ ಎಂಬ ಭಯ ಕಾಡುತ್ತಿತ್ತು. ಒಬ್ಬ ವೈದ್ಯರು ಮಾತ್ರವಲ್ಲ; ಅನೇಕ ಬಾರಿ ಇಂತಹ ಘಟನೆ ಸಂಭವಿಸಿವೆ ಎಂದು ಅವರು ಹೇಳಿಕೊಂಡಿದ್ದಾರೆ.
ಟೈಲರ್‌ಗಳ ಬಳಿ ಕೂಡ ಕೆಟ್ಟ ಅನುಭವವಾಗಿದೆ. ಸುಂದರವಾಗಿ ಇರುವುದನ್ನು ಹಲವು ಬಾರಿ ಟೈಲರ್ ದುರುಪಯೋಗ ಪಡಿಸಿಕೊಂಡಿದ್ದಾರೆ. ಅಳತೆ ತೆಗೆದುಕೊಳ್ಳುವ ವೇಳೆ ಅಂಗಾಂಗಗಳನ್ನು ಸ್ಪರ್ಶಿಸುವ ವಿಷಯವನ್ನು ಅವರು ದಾಖಲಿಸಿದ್ದಾರೆ.
