ಇನ್ನೊವೇಟಿವ್ ಫಿಲಂ ಅಕಾಡೆಮಿಯ ಇನ್ನೋವೇಟಿವ್ ಫಿಲಂ ಫೆಸ್ಟಿವವಲ್ ಉದ್ಘಾಟನಾ ಸಮಾರಂಭ
30 ದೇಶಗಳ 45 ಭಾಷೆಯ, 108 ಸಿನಿಮಾಗಳು ನಾಲ್ಕನೇ ಚಿತ್ರೋತ್ಸವದಲ್ಲಿ ಅನಾವರಣವಾಗಲಿವೆ
ಬೆಂಗಳೂರು: ಭಾರತದ ಪ್ರತಿಷ್ಠಿತ ಫಿಲಂ ಅಧ್ಯಯನ ಸಂಸ್ಥೆಗಳಲ್ಲಿ ಒಂದಾದ ಇನ್ನೋವೇಟಿವ್ ಫಿಲಂ ಅಕಾಡೆಮಿ‘ ಇನ್ನೋವೇಟಿವ್ ಚಿತ್ರೋತ್ಸವ-2021’ರ ಉದ್ಘಾಟನಾ ಸಮಾರಂಭ ಬೆಂಗಳೂರಿನ ಮಾರತ್ ಹಳ್ಳಿಯ ಮಲ್ಟಿಪ್ಲಕ್ಸ್‌ನಲ್ಲಿ ಇಂದು ನಡೆದಿದೆ. ಇದು ನಾಲ್ಕನೇ ಆವೃತ್ತಿಯಾಗಿದ್ದು, ನಾಲ್ಕು ದಿನ ನಡೆಯುವ ಈ ಚಿತ್ರೋತ್ಸವದಲ್ಲಿ 30 ದೇಶಗಳ, 45 ಭಾಷೆಯ 108 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ರೆಡ್ಕಾರ್ಪೆಟ್ ಸಂಭ್ರಮದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಜೆಕ್ ರಿಪಬ್ಲಿಕ್, ಪೆರು, ಬ್ರೆಜಿಲ್, ಇಸ್ರೇಲ್, ಸೌತ್ ಕೋರಿಯಾ, ನೆದರ್‌ಲ್ಯ್ಸಾಂಡ್ಸ್, ಜಪಾನ್, ಮಲೇಷ್ಯಾ, ಪೊಲ್ಯಾಂಡ್, ದೇಶದ ಪ್ರತಿನಿಧಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಬಗ್ಗೆ ಮಾತನಾಡಿದ ಇನ್ನೋವೇಟಿವ್ ಫಿಲಂ ಅಕಾಡೆಮಿ ನಿರ್ದೇಶಕ ಸರವಣ ಪ್ರಸಾದ್ ‘ಭಾರತೀಯ ಚಿತ್ರರಂಗಕ್ಕಾಗಿ ನಾವು ಇನ್ನೋವೇಟಿವ್ ಇಂಟರ್ ನ್ಯಾಷನಲ್ ಫಿಲಂ-ಫೆಸ್ಟಿವಲ್-20121ನ್ನು ಏರ್ಪಡಿಸಿರುವುದು ಖುಷಿಯ ವಿಚಾರ. ಈ ಚಿತ್ರೋತ್ಸವದಿಂದ ವಿದೇಶಿ ಸಿನಿಮಾಗಳ ಮಾರುಕಟ್ಟೆಯ ಕುರಿತು ತಿಳಿದುಕೊಳ್ಳಲು ಅನುಕೂಲವಾಗಿದೆ ಎಂದರು.

ಜತೆಗೆ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಮತ್ತು ಬೇರೆಬೇರೆ ದೇಶಗಳ ಪ್ರತಿಭೆಗಳನ್ನು ಗುರುತಿಸಲು ಸಹಯಾವಾಗುತ್ತದೆ. ವಿವಿಧ ಸಂಸ್ಕೃತಿಯಿರುವ 30 ದೇಶಗಳ 108 ಸಿನಿಮಾಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನವಾಗುತ್ತಿವೆ. ಈ ಚಿತ್ರೋತ್ಸವ ಸಿನಿರಸಿಕರಿಗೆ ಅದ್ಭುತವಾದ ಅನುಭವ ನೀಡುತ್ತದೆ. ಮತ್ತು ಸಿನಿಮಾ ಮಂದಿಗೆ ಉತ್ತಮವಾದ ಪ್ರೋತ್ಸಾಹದಾಯಕವಾಗಿದೆ’ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅತಿಥಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು. ಉದ್ಘಾಟನೆಯ ದಿನ ಏಷ್ಯಾ ಖಂಡದ ಸಿನಿಮಾಗಳನ್ನು ಪ್ರದರ್ಶನ ಮಾಡಲಾಯಿತು. ಇಸ್ರೇಲ್ ನ ಸಿನಿಮಾವನ್ನು ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶಿಸಲಾಯಿತು.

ರವಿಚಂದ್ರನ್ ನಟನೆಯ ‘ಕನ್ನಡಿಗ’ ಸಿನಿಮಾವನ್ನು ಇದೇ ಚಿತ್ರೋತ್ಸವದಲ್ಲಿ ಪ್ರೀಮಿಯರ್ ಶೋ ಮಾಡಲಾಯಿತು. ಈ ಚಿತ್ರೋತ್ಸವದಲ್ಲಿ ಹಲವು ವರ್ಕ್ ಶಾಪ್‌ಗಳು, ಪ್ಯಾನಲ್ ಡಿಸ್ಕಷನ್‌ಗಳು ನಡೆಯಲಿವೆ. ಹಲವು ಸಿನಿಮಾ ತಂತ್ರಜ್ಞರು ಯಂಗ್ ಫಿಲಂಮೇಕರ್ಸ್‌ಗಳಿಗೆ ತಮ್ಮ ಮಾತುಗಳಿಂದ ಸ್ಫೂರ್ತಿನೀಡಲಿದ್ದಾರೆ.
ಇದೆಲ್ಲದನ್ನುಹೊರತುಪಡಿಸಿದಂತೆ ಈ ಅಂತಾರಾಷ್ಟ್ರೀಯ ಚಿತ್ರೋತ್ಸವವು ಉತ್ತಮ ಸಿನಿಮಾಗಳನ್ನು ಗುರುತಿಸಿ ಪ್ರಶಸ್ತಿಗಳನ್ನುನೀಡುತ್ತಿದೆ. ಈ ಅದ್ಭುತವಾದ ಚಿತ್ರೋತ್ಸವ ಅಕ್ಟೋಬರ್ 15 ರಿಂದ 17ರವರೆಗೂ ಸಾರ್ವಜನಿಕರಿಗೆ ಸಿನಿಮಾ ನೋಡಲು ಅವಕಾಶ ನೀಡಲಾಗಿದೆ.
