ಮಾಜಿ ಲೈಂಗಿಕ ಕಾರ್ಯಕರ್ತೆ ನಳಿನಿ ಜಮೀಲಗೆ ಸಿನಿಮಾ ಪ್ರಶಸ್ತಿ

5 years ago

ತಿರುವನಂತಪುರ: ಲೈಂಗಿಕ ಕಾರ್ಯಕರ್ತೆಯಾಗಿದ್ದ ಸಮಯದಲ್ಲಿ ಅನುಭವಿಸಿದ ಯಾತನೆಗಳನ್ನು ಬರಹ ರೂಪಕ್ಕೆ ಇಳಿಸಿ ಪ್ರಸಿದ್ಧವಾಗಿರುವ ನಳಿನಿ ಜಮೀಲ ಅವರಿಗೆ ಕೇರಳದ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿ ಲಭಿಸಿದೆ. 69 ವರ್ಷದ ನಳಿನಿ ಯೌವನದಲ್ಲಿ ಹೊಟ್ಟೆಪಾಡಿಗಾಗಿ ಲೈಂಗಿಕ ಕಾರ್ಯಕರ್ತೆಯಾಗಿ ದುಡಿದಿದ್ದರು. ಆಗಿನ ನೋವು-ನಲಿವುಗಳಿಗೆ ಕೃತಿ ರೂಪ ನೀಡಿದ್ದರು. ಆಟೊ ಬಯಾಗ್ರಫಿ ಆಫ್ ಎ ಸೆಕ್ಸ್ ವರ್ಕರ್ (2005) ಮತ್ತು ರೊಮ್ಯಾಂಟಿಕ್ ಎನ್ಕೌಂಟರ್ ಆಫ್ ಎ ಸೆಕ್ಸ್ ವರ್ಕರ್ (2018) ಇವರ ಪ್ರಸಿದ್ಧ ಕೃತಿಗಳು. ಈ ಕೃತಿಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದವಾಗಿವೆ.

ಮಣಿಲಾಲ್ ನಿರ್ದೇಶನದ ಭರತ್ಪುಳ ಚಿತ್ರದಲ್ಲಿ ವಸ್ತ್ರವಿನ್ಯಾಸಕಿಯಾಗಿದ್ದ ನಳಿನಿ ಜಮೀಲ ಅವರನ್ನು ಕೇರಳ ಚಲನಚಿತ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಬಂದ ಕುರಿತು ಪ್ರತಿಕ್ರಿಯಿಸಿರುವ ನಳಿನಿ ಜಮೀಲ, ಲೈಂಗಿಕ ಕಾರ್ಯಕರ್ತೆಯಾಗಿ ನಾನು ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಇದರ ಮಧ್ಯೆ ನನಗೆ ಚಲನಚಿತ್ರ ಪ್ರಶಸ್ತಿ ಬರಲಿದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇದು ನನ್ನ ಜೀವಮಾನದ ಸಾಧನೆ ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ.

Leave a Reply