ಮೈಸೂರು: ಮೈಸೂರು ಮಹಾನಗರ ಪಾಲಿಕೆ ನೂತನ ಮೇಯರ್ ಚುನಾವಣೆಯನ್ನು ದಿನಾಂಕ ಜೂನ್ 11 ರಂದು ಮಧ್ಯಾಹ್ನ 12 ಗಂಟೆಗೆ ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆಯಲಿದೆ.
ಕರ್ನಾಟಕ ಮುನ್ಸಿಪಲ್ ಕಾರ್ಪೊರೇರೇಷನ್ (ಚುನಾವಣೆ) (ತಿದ್ದುಪಡಿ) ನಿಯಮಗಳು 1995ರ ನಿಯಮ 72, ನಮೂನೆ 27ರಲ್ಲಿ ನಾಮ ನಿರ್ದೇಶನ ಪತ್ರವನ್ನು ಮೈಸೂರು ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರು ಜೂನ್ 3 ರಿಂದ 10 ರವರೆಗೆ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಕಚೇರಿ ವೇಳೆಯಲ್ಲಿ ಹಾಗೂ ಜೂನ್ 3 ರಂದು ಚುನಾವಣೆ ಸಭೆ ಪ್ರಾರಂಭವಾಗುವ ಎರಡು ಗಂಟೆಗಳ ಮುಂಚಿತವಾಗಿ, ಜೂನ್ 11ರ ಬೆಳಿಗ್ಗೆ 8 ಗಂಟೆಯಿಂದ 10ಗಂಟೆಯವರೆಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಅಧಿಕೃತಗೊಳಿಸಲಾದ ಮೈಸೂರು ಮಹಾನಗರ ಪಾಲಿಕೆಯ ಜಯಚಾಮರಾಜ ಒಡೆಯರ್ ಸಭಾಂಗಣದಲ್ಲಿ ಸಲ್ಲಿಸಬಹುದು.
ದಿನಾಂಕ 11 ರಂದು ಮಧ್ಯಾಹ್ನ 12 ಗಂಟೆಗೆ ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಸಭೆಯು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ.



