ಒಮ್ಮೆ ಸಂಪೂರ್ಣ ಸೂರ್ಯಗ್ರಹಣ ನೋಡಬೇಕು ಎನ್ನುವುದು ನನ್ನ ತೀರದ ಆಸೆ. ಈ ಸಮಯದಲ್ಲಿ ನಾನು ಅಮೆರಿಕದಲ್ಲೇನಾದರೂ ಇದ್ದಿದ್ದರೆ ಸಾವಿರಾರು ಮೈಲು ಪ್ರಯಾಣ ಮಾಡಿಯಾದರೂ ಹಾಡುಹಗಲಿನಲ್ಲಿ ಕೆಲವು ನಿಮಿಷಗಳ ಕಾಲ ಸಂಪೂರ್ಣ ಕತ್ತಲು/ರಾತ್ರಿ ಆಗುವ ಪ್ರಕೃತಿಯ ಈ ಮಹಾನ್ ವಿಸ್ಮಯವನ್ನು ತಪ್ಪಿಸದೆ ಅನುಭವಿಸುತ್ತಿದ್ದೆ.
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
ಇದೇ ಸೋಮವಾರದಂದು (08-04-2024) ಕೆನಡಾ, ಅಮೆರಿಕ ಮತ್ತು ಮೆಕ್ಸಿಕೋ ದೇಶಗಳ ಕೆಲವು ಭಾಗದಲ್ಲಿ ಸಂಪೂರ್ಣ ಸೂರ್ಯಗ್ರಹಣ ಆಗುತ್ತಿದೆ. ಗ್ರಹಣ ಆಗುವ ಹಾದಿಯಲ್ಲಿ ಸುಮಾರು ನಾಲ್ಕು ನಿಮಿಷಗಳ ಕಾಲ ಸಂಪೂರ್ಣ ಕತ್ತಲು ಆವರಿಸಿ ಮತ್ತೆ ಬೆಳಕು ಮೂಡಲಿದೆ. ಅಮೆರಿಕದ ಸುಮಾರು 3 ಕೋಟಿಗೂ ಅಧಿಕ ಸಂಖ್ಯೆಯ ಜನರಿಗೆ ಈ ಸಂಪೂರ್ಣ ಸೂರ್ಯಗ್ರಹಣ ವೀಕ್ಷಿಸುವ, ಅನುಭವಿಸುವ ಅವಕಾಶ ಸಿಗಲಿದೆ.
2008ರ ಅಕ್ಟೋಬರ್ ತಿಂಗಳಿನಲ್ಲಿ ನಾನು ಬರೆದಿದ್ದ “ವಿಜ್ಞಾನವೇ, ದೇವರನ್ನು ಹುಡುಕಿಕೊಡು” ಎನ್ನುವ ಲೇಖನದಲ್ಲಿ ಹೀಗೆ ಬರೆದಿದ್ದೆ: “ಈ ವೈಜ್ಞಾನಿಕ ಸಾಧನೆ ಮತ್ತು ಆಲೋಚನೆಗಳನ್ನು ಬಿಟ್ಟು ನಾನು ಸ್ವಲ್ಪ ಸಾಮಾನ್ಯ ಮಾನವ ಸಹಜ ಕುತೂಹಲದಿಂದ ಆಲೋಚಿಸುತ್ತೇನೆ. ಸೂರ್ಯ ಎನ್ನುವ ಬೆಂಕಿ ಉಂಡೆಯ ನಕ್ಷತ್ರ. ಅದನ್ನು ಎಂಟೊ-ಒಂಬತ್ತೊ ಗ್ರಹಗಳು ಸುತ್ತುತ್ತವೆ. ಅವುಗಳಲ್ಲಿ ಕೆಲವು ಗ್ರಹಗಳನ್ನು ಅವಕ್ಕಿಂತ ಸಣ್ಣ ಗ್ರಹಗಳು ಸುತ್ತುತ್ತವೆ. ನಮ್ಮದೆ ಭೂಮಿ ಸೂರ್ಯನೆಂಬ ನಕ್ಷತ್ರವನ್ನೂ, ಚಂದ್ರ ಎಂಬ ಉಪಗ್ರಹ ನಮ್ಮ ಭೂಮಿಯನ್ನೂ ಸುತ್ತುತ್ತದೆ. ಇವೆಲ್ಲ ಎಷ್ಟು ಕರಾರುವಾಕ್ಕಾಗಿ ಒಂದಕ್ಕಿಂತ ಒಂದು ದೂರದಲ್ಲಿ ಇದೆಯೆಂದರೆ, ಭೂಮಿಗೂ ಸೂರ್ಯನಿಗೂ ಮಧ್ಯೆ ಈ ಚಂದ್ರ ಬಂದರೆ ಅದು ಸಂಪೂರ್ಣವಾಗಿ ಸೂರ್ಯನನ್ನು ಮರೆಮಾಡುತ್ತದೆ. ಚಂದ್ರನ ಆಕಾರ ಮತ್ತು ಅಂತರ ಸರಿಯಾಗಿ ಸೂರ್ಯನನ್ನು ನಮ್ಮಿಂದ ಮರೆ ಮಾಡುವಷ್ಟು ಮಾತ್ರ ಇದೆ. ಸ್ವಲ್ಪವೂ ಹೆಚ್ಚಿಲ್ಲ, ಕಮ್ಮಿಯಿಲ್ಲ. ಅದೇ ರೀತಿ, ಸೂರ್ಯನಿಗೂ ಚಂದ್ರನಿಗೂ ಮಧ್ಯೆ ಭೂಮಿ ಬಂದರೆ, ಭೂಮಿಯ ಆಕಾರ ಮತ್ತು ಅದು ಸೂರ್ಯನಿಗಿಂತ ದೂರ ಇರುವ ಅಂತರ, ಒಂದೆ ಒಂದು ಸೂರ್ಯ ಕಿರಣವೂ ಚಂದ್ರನನ್ನು ನೇರವಾಗಿ ಮುಟ್ಟದಷ್ಟು ಕರಾರುವಾಕ್ಕಾಗಿದೆ. ಅಲ್ಲಾ, ಇದೆಲ್ಲ ಹೇಗಾಯಿತು? ಇದು ತನ್ನಷ್ಟಕ್ಕೆ ತಾನು ಆಗಿರುವುದು, ಯಾರೂ ನಿರ್ದಿಷ್ಟ ಉದ್ದೇಶದಿಂದ ಮಾಡಿದ್ದಲ್ಲ ಎಂದುಕೊಳ್ಳಲು ಸಾಧ್ಯವೆ?”
- ರವಿಕೃಷ್ಣಾರೆಡ್ಡಿ, ಅಧ್ಯಕ್ಷರು, ಕರ್ನಾಟಕ ರಾಷ್ಟ್ರ ಸಮಿತಿ




