ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣ ಆರೋಪ ಪ್ರಕರಣ ಇದೀಗ ಸಿಎಂ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ಸದಸ್ಯರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಮುಡಾದ ಬದಲಿ ನಿವೇಶನಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ ಸೇರಿ ಆರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ದೂರು ನೀಡಿದ್ದಾರೆ.
ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಇವರ ಸಹೋದರ ಬಿ.ಎಂ.ಮಲ್ಲಿಕಾರ್ಜುನಸ್ವಾಮಿ ಮುಡಾದ ಮಾಜಿ ಅಧ್ಯಕ್ಷ ಬಸವನಗೌಡ, ಹೆಚ್.ವಿ.ರಾಜೀವ್ ಹಾಗೂ ಆಯುಕ್ತರಾಗಿದ್ದ ಡಿ.ಬಿ. ನಟೇಶ್ ವಿರುದ್ಧ ಅಧಿಕಾರ ದುರುಪಯೋಗ, ವಂಚನೆ ಹಾಗೂ ಭ್ರಷ್ಟಾಚಾರ ಆರೋಪದಡಿ ದೂರು ದಾಖಲಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಪ್ರಭಾವದಿಂದ ತಮ್ಮ ಪತ್ನಿಯ ಹೆಸರಿಗೆ ಕಾನೂನು ಬಾಹಿರವಾಗಿ ಬದಲಿ ನಿವೇಶನ ಪಡೆದು ಈ ಮೂಲಕ 40 ಕೋಟಿಗಿಂತ ಹೆಚ್ಚು ಹಣ ಸರ್ಕಾರದ ನಷ್ಟಕ್ಕೆ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
1997ರಲ್ಲಿ ದೇವನೂರು 3ನೇ ಹಂತದಲ್ಲಿ ಬಡಾವಣೆ ಅಭಿವೃದ್ಧಿಪಡಿಸಲು ಕೆಸರೆ ಗ್ರಾಮದ ಸುತ್ತಮುತ್ತ ನೂರಾರು ಎಕರೆ ಜಮೀನನ್ನ ಮೂಡಾ ಭೂಸ್ವಾಧೀನ ಮಾಡಿಕೊಂಡಿತ್ತು.
ಸಿಎಂ ಪತ್ನಿ ಹೆಸರಿನಲ್ಲಿರುವ 3.16 ಎಕರೆ ಸ್ವಾಧೀನಪಡಿಸಿಕೊಂಡು ಬಳಿಕ 1998ರಲ್ಲಿ ಭೂಸ್ವಾಧೀನದಿಂದ ಕೈ ಬಿಟ್ಟಿತ್ತು. 2005ರಲ್ಲಿ ವ್ಯವಸಾಯ ಭೂಮಿಯಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಯಾಗಿತ್ತು. ಸಿದ್ದರಾಮಯ್ಯ ಭಾವಮೈದುನ ಮಲ್ಲಿಕಾರ್ಜುನಸ್ವಾಮಿ ಹೆಸರಿನಲ್ಲಿದ್ದ ಭೂಮಿಯನ್ನ ಸಹೋದರಿ ಪಾರ್ವತಿಗೆ ಭೂ ದಾನ ಮಾಡಿದ್ದರು.
ದಾನಪತ್ರದ ಮೂಲಕ ತಮಗೆ ದೇವನೂರಿನ 3ನೇ ಹಂತದಲ್ಲಿರುವ ಸ್ವತ್ತಿಗೆ ಬದಲಿ ನಿವೇಶನ ನೀಡುವಂತೆ ಪಾರ್ವತಿ ಅವರು 2014ರಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿದ ಮುಡಾ ಅಭಿವೃದ್ಧಿಪಡಿಸಿದ್ದ ವಿಜಯನಗರದಲ್ಲಿ 38.284 ಅಡಿ ವಿಸ್ತೀರ್ಣ ಜಾಗವನ್ನ ಶೇ.50:50ರಷ್ಟು ಅನುಪಾತದಲ್ಲಿ ನಿವೇಶನ ರೂಪದಲ್ಲಿ ನೀಡಿತ್ತು.
ಎನ್ ಆರ್ ರಮೇಶ್ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ:
“ತಮ್ಮ ರಾಜಕೀಯ ಪ್ರಭಾವದಿಂದ ತಮ್ಮ ಪತ್ನಿಯ ಹೆಸರಿಗೆ ಕಾನೂನು ಬಾಹಿರವಾದ ಬದಲಿ ನಿವೇಶನಗಳ ಹಂಚಿಕೆಯ ಕಾರ್ಯದಲ್ಲಿ 40 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತಿತವರ ಕುಟುಂಬದವರ
ಬೃಹತ್ ಭೂ ಹಗರಣ”
ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (MUDA) ವು ತನ್ನ “ದೇವನೂರು 3ನೇ ಹಂತದ ಬಡಾವಣೆ” ನಿರ್ಮಾಣಕ್ಕೆಂದು 31/10/1997 ರಂದು ಮೈಸೂರು ತಾಲ್ಲೂಕು, ಕಸಬಾ ಹೋಬಳಿಯ ಕೆಸರೆ ಗ್ರಾಮ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ನೂರಾರು ಎಕರೆ ಜಮೀನುಗಳನ್ನು ಭೂಸ್ವಾಧೀನ (Notification) ಮಾಡಿಕೊಂಡಿರುತ್ತದೆ. ಇದರ ಪೈಕಿ ಕೆಸರೆ ಗ್ರಾಮದ ಸರ್ವೆ ನಂ: 464 ರ 3.16 ಎಕರೆ ಜಾಗವನ್ನು ಅದರ ಮಾಲೀಕ ನಿಂಗ ಬಿನ್ ಜವರ ಅವರಿಂದ ಭೂಸ್ವಾಧೀನ ಪಡಿಸಿಕೊಂಡು, ಪರಿಹಾರದ ರೂಪದಲ್ಲಿ ₹. 3,24,700/- (ಮೂರು ಲಕ್ಷದ ಇಪ್ಪತ್ತನಾಲ್ಕು ಸಾವಿರದ ಏಳು ನೂರು) ಗಳನ್ನು ಸದರಿ ಮಾಲೀಕರಿಗೆ ಬಿಡುಗಡೆ ಮಾಡಿರುತ್ತದೆ.
ಅದಾದ ನಂತರ 18/05/1998 ರಂದು ನಗರಾಭಿವೃದ್ಧಿ ಇಲಾಖೆಯು ಸದರಿ ಕೆಸರೆ ಗ್ರಾಮದ ಸರ್ವೆ ನಂ: 464 ರ 3.16 ಎಕರೆ ವಿಸ್ತೀರ್ಣದ ಜಾಗವನ್ನು “ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ (De – notification) ಆದೇಶ”ವನ್ನು ಹೊರಡಿಸುತ್ತದೆ.
ಈ ಸಂದರ್ಭದಲ್ಲಿ ಸಿದ್ಧರಾಮಯ್ಯ ನವರ ಅತ್ಯಾಪ್ತರಾಗಿರುವ ಬಸವೇಗೌಡ ಅವರು MUDA ಅಧ್ಯಕ್ಷರಾಗಿರುತ್ತಾರೆ.
ಇದೇ 1997-98 ರ ಅವಧಿಯಲ್ಲಿ ಸಿದ್ಧರಾಮಯ್ಯನವರು ಅಂದಿನ ಮುಖ್ಯಮಂತ್ರಿ J. H. ಪಟೇಲ್ ಅವರ ಸಚಿವ ಸಂಪುಟದಲ್ಲಿ “ಉಪ ಮುಖ್ಯಮಂತ್ರಿ”ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು.
2003 ರಲ್ಲಿ ಸದರಿ ಕೆಸರೆ ಗ್ರಾಮದ ಸರ್ವೆ ನಂ: 464 ರ ಜಮೀನು ಸೇರಿದಂತೆ MUDA ಸ್ವಾಧೀನಪಡಿಸಿಕೊಂಡಿದ್ದ ಪ್ರದೇಶವನ್ನು L & T ಸಂಸ್ಥೆಯ ಮೂಲಕ ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಿ, ನಿವೇಶನಗಳನ್ನು ಅರ್ಜಿದಾರರಿಗೆ ಹಂಚಿಕೆ ಮಾಡಿ “ದೇವನೂರು 3ನೇ ಹಂತದ ಬಡಾವಣೆ”ಯನ್ನು MUDA ನಿರ್ಮಿಸಿತ್ತು.
ಇದಾದ ನಂತರ, ಕೆಸರೆ ಗ್ರಾಮದ ಸರ್ವೆ ನಂ: 464 ರ 3.16 ಎಕರೆ ವಿಸ್ತಿರ್ಣದ ಸ್ವತ್ತಿನ ಮಾಲೀಕರಾದ ನಿಂಗ ಬಿನ್ ಜವರ ಎಂಬುವವರ ಮಗನಾದ J. ದೇವರಾಜು ಅವರಿಂದ ದಿನಾಂಕ 25/08/2004 ರಂದು ಸಿದ್ಧರಾಮಯ್ಯನವರ ಭಾವಮೈದುನ (ಪತ್ನಿಯ ಸಹೋದರ) B. M. ಮಲ್ಲಿಕಾರ್ಜುನ ಸ್ವಾಮಿ ಬಿನ್ ಮರಿಲಿಂಗಯ್ಯ ನವರು ಕ್ರಯಕ್ಕೆ ಪಡೆದು ತಮ್ಮ ಹೆಸರಿಗೆ ನೊಂದಣಿ ಮಾಡಿಸಿಕೊಳ್ಳುತ್ತಾರೆ ಹಾಗೂ 15/07/2005 ರಂದು ಸದರಿ ಜಮೀನನ್ನು “ವ್ಯವಸಾಯ ಪ್ರದೇಶ”ದಿಂದ “ವಸತಿ ಉದ್ದೇಶ”ಕ್ಕಾಗಿ ಭೂ ಪರಿವರ್ತನೆ (Conversion of Land) ಮಾಡಿಸಿಕೊಳ್ಳಲಾಗುತ್ತದೆ !!!
ಈ ಅವಧಿಯಲ್ಲಿ ಸಿದ್ಧರಾಮಯ್ಯನವರು (2004 ರಿಂದ 2006) ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಸಚಿವ ಸಂಪುಟದಲ್ಲಿ “ಉಪ ಮುಖ್ಯಮಂತ್ರಿ”ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ದಿನಾಂಕ 06/08/2010 ರಂದು ಸಿದ್ಧರಾಮಯ್ಯನವರ ಭಾವಮೈದುನ B. M. ಮಲ್ಲಿಕಾರ್ಜುನ ಸ್ವಾಮಿ ಯವರು ಸದರಿ ಸ್ವತ್ತನ್ನು ತಮ್ಮ ಸಹೋದರಿ ಶ್ರೀಮತಿ. B. M. ಪಾರ್ವತಿ (ಸಿದ್ಧರಾಮಯ್ಯನವರ ಧರ್ಮಪತ್ನಿ) ಯವರ ಹೆಸರಿಗೆ “ದಾನ ಪತ್ರ” (Gift Deed) ದ ಮೂಲಕ ದಾನವಾಗಿ ನೀಡುತ್ತಾರೆ.
ತಮಗೆ “ದಾನ ಪತ್ರ”ದ ಮೂಲಕ “ದೇವನೂರು 3ನೇ ಹಂತದ ಬಡಾವಣೆ”ಯಲ್ಲಿ ಬಂದಿದ್ದ ಸ್ವತ್ತಿಗೆ ಬದಲಾಗಿ, ಈಗಾಗಲೇ ಅಭಿವೃದ್ಧಿಯಾಗಿರುವ MUDA ದ ಇನ್ನೊಂದು ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ಮಂಜೂರು ಮಾಡುವಂತೆ 2014 ರಲ್ಲಿ ಶ್ರೀಮತಿ. B. M. ಪಾರ್ವತಿಯವರು ಅರ್ಜಿ ಸಲ್ಲಿಸುತ್ತಾರೆ.
ಸಿದ್ಧರಾಮಯ್ಯನವರ ಧರ್ಮಪತ್ನಿ ಶ್ರೀಮತಿ. B. M. ಪಾರ್ವತಿಯವರ ಅರ್ಜಿಯನ್ನು ಪುರಸ್ಕರಿಸಿದ ನಗರಾಭಿವೃದ್ಧಿ ಇಲಾಖೆಯು ಬದಲಿ ನಿವೇಶನಗಳನ್ನು ಮಂಜೂರು ಮಾಡುವ ಬಗ್ಗೆ ಅನುಮೋದನೆ ನೀಡಿ “ಸರ್ಕಾರಿ ಆದೇಶ”ವನ್ನು ಹೊರಡಿಸುತ್ತದೆ (ಸರ್ಕಾರಿ ಆದೇಶದ ಸಂಖ್ಯೆ: UDD/08/TTP/2014 dt: 11-02-2015).
ಶೇ% 50:50 ರ ಅನುಪಾತದಲ್ಲಿ (ಸ್ವತ್ತಿನ ಮಾಲೀಕರಿಗೆ 1/2 ಭಾಗ ಮತ್ತು MUDA ಗೆ 1/2 ಭಾಗ) ಶ್ರೀಮತಿ. ಪಾರ್ವತಿ ಕೋಂ ಸಿದ್ಧರಾಮಯ್ಯನವರಿಗೆ “ದೇವನೂರು 3ನೇ ಹಂತದ ಬಡಾವಣೆ”ಯ ಬದಲಾಗಿ MUDA ಮಾಲೀಕತ್ವದ ಬೇರೊಂದು ಬಡಾವಣೆಯಲ್ಲಿ ಒಟ್ಟು 38,284 ಚ. ಅಡಿ ವಿಸ್ತೀರ್ಣದ ಸ್ವತ್ತನ್ನು “ಬದಲಿ ನಿವೇಶನ”ದ ಹೆಸರಿನಲ್ಲಿ ಮಂಜೂರು ಮಾಡುವ ಬಗ್ಗೆ MUDA ದ ಅಧಿಕಾರಿಗಳು ನಿರ್ಣಯವನ್ನು ಅನುಮೋದಿಸಿದ್ದರು. ದಿನಾಂಕ 30/12/2017 ರಂದು MUDA ದಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ (ವಿಷಯದ ಸಂಖ್ಯೆ – 30) ಅರ್ಜಿದಾರರಿಗೆ ಈಗಾಗಲೇ ಅಭಿವೃದ್ಧಿ ಪಡಿಸಿರುವ ಬಡಾವಣೆಯಲ್ಲಿ 38,284 ಚ. ಅಡಿ ವಿಸ್ತೀರ್ಣದ ಸ್ವತ್ತುಗಳನ್ನು “ನಿವೇಶನಗಳ ರೂಪ”ದಲ್ಲಿ ಮಂಜೂರು ಮಾಡುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು.
ಈ ಅವಧಿಯಲ್ಲಿ (2013 ರಿಂದ 2018) ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಇದೇ ಸಿದ್ಧರಾಮಯ್ಯನವರು !!!
2021-22 ರಲ್ಲಿ MUDA ದ ಅಧ್ಯಕ್ಷರಾಗಿದ್ದ H. V. ರಾಜೀವ್ (ಮೊ: 9538884748) ಮತ್ತು ಆಯುಕ್ತರಾಗಿದ್ದ D. B. ನಟೇಶ್ (ಮೊ: 9900003232) ರವರು ಸಿದ್ಧರಾಮಯ್ಯನವರ ಧರ್ಮಪತ್ನಿ ಶ್ರೀಮತಿ. B. M. ಪಾರ್ವತಿ ಅವರ ಹೆಸರಿಗೆ ಮೈಸೂರಿನ ಅತ್ಯಂತ ಪ್ರತಿಷ್ಠಿತ ವಿಜಯನಗರ ಬಡಾವಣೆ 03ನೇ ಹಂತ ಮತ್ತು 04ನೇ ಹಂತದ ಪ್ರದೇಶಗಳಲ್ಲಿ 1) 50 X 80 ಅಳತೆಯ 05 ನಿವೇಶನಗಳು 2) 40 X 60 ಅಳತೆಯ 05 ನಿವೇಶನಗಳು 3) 30 X 50 ಅಳತೆಯ 02 ನಿವೇಶನಗಳು ಮತ್ತು 4) 30 X 40 ಅಳತೆಯ 02 ನಿವೇಶನಗಳು ಸೇರಿದಂತೆ ಒಟ್ಟು 14 ನಿವೇಶನಗಳನ್ನು ಹಂಚಿಕೆ ಮಾಡಿ ನೋಂದಣಿ ಮಾಡಿಕೊಡುತ್ತಾರೆ.
ಶ್ರೀಮತಿ. ಪಾರ್ವತಿ ಅವರಿಗೆ ಹಂಚಿಕೆ ಮಾಡಿರುವ ಬದಲಿ ನಿವೇಶನಗಳ ವಿವರ ಈ ರೀತಿ ಇದೆ:-
ಕ್ರಮ ಸಂಖ್ಯೆ – 01
ಬದಲಿ ನಿವೇಶನ ಹಂಚಿಕೆ ಮಾಡಿರುವ ಬಡಾವಣೆ –
ವಿಜಯನಗರ 03ನೇ ಹಂತ `ಸಿ’ ಬ್ಲಾಕ್
ನಿವೇಶನದ ಸಂಖ್ಯೆ – 25
ನಿವೇಶನದ ಅಳತೆ – 50 X 80
ಕ್ರಮ ಸಂಖ್ಯೆ – 02
ಬದಲಿ ನಿವೇಶನ ಹಂಚಿಕೆ ಮಾಡಿರುವ ಬಡಾವಣೆ –
ವಿಜಯನಗರ 03ನೇ ಹಂತ `ಡಿ’ ಬ್ಲಾಕ್
ನಿವೇಶನದ ಸಂಖ್ಯೆ – 331
ನಿವೇಶನದ ಅಳತೆ – 40 X 60
ಕ್ರಮ ಸಂಖ್ಯೆ – 03
ಬದಲಿ ನಿವೇಶನ ಹಂಚಿಕೆ ಮಾಡಿರುವ ಬಡಾವಣೆ –
ವಿಜಯನಗರ 03ನೇ ಹಂತ `ಡಿ’ ಬ್ಲಾಕ್
ನಿವೇಶನದ ಸಂಖ್ಯೆ – 332
ನಿವೇಶನದ ಅಳತೆ – 40 X 60
ಕ್ರಮ ಸಂಖ್ಯೆ – 04
ಬದಲಿ ನಿವೇಶನ ಹಂಚಿಕೆ ಮಾಡಿರುವ ಬಡಾವಣೆ –
ವಿಜಯನಗರ 03ನೇ ಹಂತ `ಇ’ ಬ್ಲಾಕ್
ನಿವೇಶನದ ಸಂಖ್ಯೆ – 213
ನಿವೇಶನದ ಅಳತೆ – 50 X 80
ಕ್ರಮ ಸಂಖ್ಯೆ – 05
ಬದಲಿ ನಿವೇಶನ ಹಂಚಿಕೆ ಮಾಡಿರುವ ಬಡಾವಣೆ –
ವಿಜಯನಗರ 03ನೇ ಹಂತ `ಇ’ ಬ್ಲಾಕ್
ನಿವೇಶನದ ಸಂಖ್ಯೆ – 214
ನಿವೇಶನದ ಅಳತೆ – 50 X 80
ಕ್ರಮ ಸಂಖ್ಯೆ – 06
ವಿಜಯನಗರ 03ನೇ ಹಂತ `ಇ’ ಬ್ಲಾಕ್
ನಿವೇಶನದ ಸಂಖ್ಯೆ – 215
ನಿವೇಶನದ ಅಳತೆ – 50 X 80
ಕ್ರಮ ಸಂಖ್ಯೆ – 07
ಬದಲಿ ನಿವೇಶನ ಹಂಚಿಕೆ ಮಾಡಿರುವ ಬಡಾವಣೆ –
ವಿಜಯನಗರ 03ನೇ ಹಂತ `ಇ’ ಬ್ಲಾಕ್
ನಿವೇಶನದ ಸಂಖ್ಯೆ – 216
ನಿವೇಶನದ ಅಳತೆ – 50 X 80
ಕ್ರಮ ಸಂಖ್ಯೆ – 08
ಬದಲಿ ನಿವೇಶನ ಹಂಚಿಕೆ ಮಾಡಿರುವ ಬಡಾವಣೆ –
ವಿಜಯನಗರ 03ನೇ ಹಂತ `ಜಿ’ ಬ್ಲಾಕ್
ನಿವೇಶನದ ಸಂಖ್ಯೆ – 05
ನಿವೇಶನದ ಅಳತೆ – 40 X 60
ಕ್ರಮ ಸಂಖ್ಯೆ – 09
ಬದಲಿ ನಿವೇಶನ ಹಂಚಿಕೆ ಮಾಡಿರುವ ಬಡಾವಣೆ –
ವಿಜಯನಗರ 04ನೇ ಹಂತ 2ನೇ ಬ್ಲಾಕ್
ನಿವೇಶನದ ಸಂಖ್ಯೆ – 11,189
ನಿವೇಶನದ ಅಳತೆ – 40 X 60
ಕ್ರಮ ಸಂಖ್ಯೆ – 10
ಬದಲಿ ನಿವೇಶನ ಹಂಚಿಕೆ ಮಾಡಿರುವ ಬಡಾವಣೆ –
ವಿಜಯನಗರ 04ನೇ ಹಂತ 2ನೇ ಬ್ಲಾಕ್
ನಿವೇಶನದ ಸಂಖ್ಯೆ – 10,855
ನಿವೇಶನದ ಅಳತೆ – 40 X 60
ಕ್ರಮ ಸಂಖ್ಯೆ – 11
ಬದಲಿ ನಿವೇಶನ ಹಂಚಿಕೆ ಮಾಡಿರುವ ಬಡಾವಣೆ –
ವಿಜಯನಗರ 04ನೇ ಹಂತ 2ನೇ ಬ್ಲಾಕ್
ನಿವೇಶನದ ಸಂಖ್ಯೆ – 5,108
ನಿವೇಶನದ ಅಳತೆ – 30 X 40
ಕ್ರಮ ಸಂಖ್ಯೆ – 12
ಬದಲಿ ನಿವೇಶನ ಹಂಚಿಕೆ ಮಾಡಿರುವ ಬಡಾವಣೆ –
ವಿಜಯನಗರ 04ನೇ ಹಂತ 2ನೇ ಬ್ಲಾಕ್
ನಿವೇಶನದ ಸಂಖ್ಯೆ – 5,085
ನಿವೇಶನದ ಅಳತೆ – 30 X 40
ಕ್ರಮ ಸಂಖ್ಯೆ – 13
ಬದಲಿ ನಿವೇಶನ ಹಂಚಿಕೆ ಮಾಡಿರುವ ಬಡಾವಣೆ –
ವಿಜಯನಗರ 04ನೇ ಹಂತ 2ನೇ ಬ್ಲಾಕ್
ನಿವೇಶನದ ಸಂಖ್ಯೆ – 12,065
ನಿವೇಶನದ ಅಳತೆ – 30 X 50
ಕ್ರಮ ಸಂಖ್ಯೆ – 14
ಬದಲಿ ನಿವೇಶನ ಹಂಚಿಕೆ ಮಾಡಿರುವ ಬಡಾವಣೆ –
ವಿಜಯನಗರ 04ನೇ ಹಂತ 2ನೇ ಬ್ಲಾಕ್
ನಿವೇಶನದ ಸಂಖ್ಯೆ – 12,068
ನಿವೇಶನದ ಅಳತೆ – 30 X 50
ಮಾರುಕಟ್ಟೆ ಬೆಲೆ ಪ್ರತಿ ಚ. ಅಡಿಗೆ ₹. 5,000/- ಗಳಷ್ಟು ಇರುವ ಮೈಸೂರಿನ “ದೇವನೂರು 3ನೇ ಹಂತದ ಬಡಾವಣೆ” ಯಲ್ಲಿನ ನಿವೇಶನಗಳ ಬದಲಾಗಿ ಪ್ರತಿ ಚ. ಅಡಿಗೆ ₹. 12,000/- ಗಳಿಗಿಂತಲೂ ಹೆಚ್ಚಿರುವ ಮೈಸೂರಿನ ಅತ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ “ವಿಜಯನಗರ 03 ಮತ್ತು 04ನೇ ಹಂತದ ಬಡಾವಣೆ”ಗಳಲ್ಲಿ ಒಟ್ಟು 38,284 ಚ. ಅಡಿ ವಿಸ್ತೀರ್ಣದ 14 ನಿವೇಶನಗಳನ್ನು “ಬದಲಿ ನಿವೇಶನ”ದ ಹೆಸರಿನಲ್ಲಿ ಶ್ರೀಮತಿ. B. M. ಪಾರ್ವತಿ ಯವರ ಹೆಸರಿಗೆ 2021-2022 ರಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನು ಮೀರಿ ಹಂಚಿಕೆ ಮಾಡಲಾಗಿದೆ.
“ನಗರಾಭಿವೃದ್ಧಿ ಇಲಾಖೆ”ಯ ನಿಯಮಗಳನ್ವಯ – “ಯಾವ ಬಡಾವಣೆಯ ನಿರ್ಮಾಣಕ್ಕೆಂದು ಪ್ರಾಧಿಕಾರವು ಸ್ಥಳೀಯರ ಸ್ವತ್ತುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳುತ್ತದೆಯೋ, ಅಂತಹ ಸ್ವತ್ತುಗಳ ಮಾಲೀಕರಿಗೆ ಅದೇ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಬೇಕು ಅಥವಾ ಆ ಬಡಾವಣೆಯ ನಂತರ ಪ್ರಾಧಿಕಾರವು ಅಭಿವೃದ್ಧಿ ಪಡಿಸುವ ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಬಹುದಾಗಿರುತ್ತದೆ. ಆದರೆ, ಎಂತಹ ಸಂದರ್ಭದಲ್ಲಿಯೂ ಸಹ ಉದ್ದೇಶಿತ ಬಡಾವಣೆಯ ನಿವೇಶನಗಳಿಗೆ ಬದಲಾಗಿ, ಆ ಬಡಾವಣೆಗಿಂತಲೂ ಮುಂಚಿತವಾಗಿ ಅಭಿವೃದ್ಧಿ ಪಡಿಸಿರುವ ಬಡಾವಣೆಗಳಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡುವುದು ಅಪರಾಧವಾಗಿರುತ್ತದೆ.”
ಆದರೆ, ಈ ಪ್ರಕರಣದಲ್ಲಿ – ಶ್ರೀಮತಿ. B. M. ಪಾರ್ವತಿಯವರಿಗೆ ವಾಸ್ತವವಾಗಿ “ದೇವನೂರು 3ನೇ ಹಂತದ ಬಡಾವಣೆ”ಯಲ್ಲಿ ಹಂಚಿಕೆಯಾಗಿದ್ದ ನಿವೇಶನಗಳಿಗೆ ಬದಲಾಗಿ, ಅದಕ್ಕಿಂತಲೂ ಹತ್ತಾರು ವರ್ಷಗಳ ಹಿಂದೆಯೇ MUDA ಅಭಿವೃದ್ಧಿ ಪಡಿಸಿರುವ “ವಿಜಯನಗರ 3 ಮತ್ತು 4ನೇ ಹಂತದ ಬಡಾವಣೆ”ಗಳಲ್ಲಿನ ಅತ್ಯಂತ ಆಯಕಟ್ಟಿನ ಸ್ಥಳಗಳಲ್ಲಿರುವ ದುಬಾರಿ ನಿವೇಶನಗಳನ್ನು “ಬದಲಿ ನಿವೇಶನ”ದ ಹೆಸರಿನಲ್ಲಿ ಹಂಚಿಕೆ ಮಾಡಲಾಗಿದೆ.
ಈ ಅವಧಿಯಲ್ಲಿ ರಾಜ್ಯದ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ಧರಾಮಯ್ಯನವರ ರಾಜಕೀಯ ಪ್ರಭಾವಗಳಿಗೆ ಒಳಗಾಗಿ MUDA ದ ಅಧ್ಯಕ್ಷರಾಗಿದ್ದ H. V. ರಾಜೀವ್ ಮತ್ತು ಆಯುಕ್ತರಾಗಿದ್ದ D. B. ನಟೇಶ್ ರವರು ಈ ಕಾನೂನುಬಾಹಿರ ಕಾರ್ಯವನ್ನು ಎಸಗಿರುತ್ತಾರೆ.
ಪ್ರಸ್ತುತ MUDA ದ “ದೇವನೂರು 03ನೇ ಹಂತದ ಬಡಾವಣೆ”ಯಲ್ಲಿ 38,284 ಚ. ಅಡಿ ವಿಸ್ತೀರ್ಣದ ಸ್ವತ್ತಿನ ಮಾರುಕಟ್ಟೆ ಬೆಲೆ ಸುಮಾರು ₹. 19,00,00,000/- (ಹತ್ತೊಂಬತ್ತು ಕೋಟಿ) ಗಳಷ್ಟಿದ್ದರೆ, “ವಿಜಯನಗರ 3 ಮತ್ತು 4ನೇ ಹಂತದ ಬಡಾವಣೆ”ಯಲ್ಲಿ ಅದೇ ಅಳತೆಯ ಸ್ವತ್ತಿನ ಬೆಲೆ ಸುಮಾರು ₹. 46,00,00,000/- (ನಲವತ್ತಾರು ಕೋಟಿ) ಗಳಿಗೂ ಹೆಚ್ಚು ಇರುತ್ತದೆ.
MUDA ದ ಈ ಕಾರ್ಯದಿಂದಾಗಿ ಸರ್ಕಾರದ ಖಜಾನೆಗೆ ಸುಮಾರು ₹. 27,00,00,000/- (ಇಪ್ಪತ್ತೇಳು ಕೋಟಿ) ಗೂ ಹೆಚ್ಚು ಮೊತ್ತ ನಷ್ಟವಾಗಿರುತ್ತದೆ.
ಸಿದ್ಧರಾಮಯ್ಯನವರು ಅತ್ಯಂತ ಪ್ರಭಾವಶಾಲಿ ಹುದ್ದೆಗಳಲ್ಲಿದ್ದ (1997-98, 2004-05, 2014-15 ಮತ್ತು 2021-22) ಪ್ರತೀ ಹಂತದಲ್ಲಿ ತಮ್ಮ ಪ್ರಭಾಗಳನ್ನು ಬಳಸಿ, ಕಾನೂನು ಬಾಹಿರ ಕಾರ್ಯಗಳ ಮೂಲಕ ಇಂತಹ ಬೃಹತ್ ವಂಚನೆಯ ಕಾರ್ಯವನ್ನು ಭ್ರಷ್ಟ ಅಧಿಕಾರಿಗಳ ಮೂಲಕ ಮಾಡಿಸಲು ಯಶಸ್ವಿಯಾಗಿರುತ್ತಾರೆ !!!
ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನಿಯಮಬಾಹಿರವಾಗಿ “ಬದಲಿ ನಿವೇಶನಗಳ ಹಂಚಿಕೆ” ಹೆಸರಿನಲ್ಲಿ MUDA ಸಂಸ್ಥೆಗೆ ನಷ್ಟ ಉಂಟು ಮಾಡಿರುವ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಶ್ರೀಮತಿ. B. M. ಪಾರ್ವತಿ, B. M. ಮಲ್ಲಿಕಾರ್ಜುನ ಸ್ವಾಮಿ, ಬಸವೇಗೌಡ, H. V. ರಾಜೀವ್ತ್ತು ಮತ್ತು D. B. ನಟೇಶ್ ರವರುಗಳ ವಿರುದ್ಧ ಅಧಿಕಾರ ದುರುಪಯೋಗ, ವಂಚನೆ ಹಾಗೂ ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ 383 ಪುಟಗಳ ಸಂಪೂರ್ಣ ದಾಖಲೆಗಳ ಸಹಿತ ಲೋಕಾಯುಕ್ತದಲ್ಲಿ ದೂರು ಸಲ್ಲಿಸಲಾಗಿದೆ.
– ರಮೇಶ್ ಎನ್. ಆರ್.
ಆಡಳಿತ ಪಕ್ಷದ ಮಾಜಿ ನಾಯಕ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಅಧ್ಯಕ್ಷರು, ಭ್ರಷ್ಟಾಚಾರ ವಿರೋಧಿ ವೇದಿಕೆ (ರಿ)
“ಮುಖ್ಯಾಂಶಗಳು”
• ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಮತ್ತೊಂದು ಪ್ರಕರಣ ದಾಖಲು
• ಸಿದ್ಧರಾಮಯ್ಯನವರ ಪತ್ನಿ ಶ್ರೀಮತಿ. ಬಿ. ಎಂ. ಪಾರ್ವತಿ, ಬಾವಮೈದುನ ಬಿ. ಎಂ. ಮಲ್ಲಿಕಾರ್ಜುನ ಸ್ವಾಮಿ, MUDA ಮಾಜಿ ಅಧ್ಯಕ್ಷರುಗಳಾದ ಬಸವೇಗೌಡ, ಹೆಚ್. ವಿ. ರಾಜೀವ್ ಮತ್ತು ಆಯುಕ್ತರಾಗಿದ್ದ ಡಿ. ಬಿ. ನಟೇಶ್ ರವರುಗಳ ವಿರುದ್ಧವೂ ಸಹ ದೂರು ದಾಖಲು.
• ಅಧಿಕಾರ ದುರುಪಯೋಗ, ವಂಚನೆ ಮತ್ತು ಭ್ರಷ್ಟಾಚಾರ ಪ್ರಕರಣಗಳು ದಾಖಲು
• ದೂರು ದಾಖಲಿಸಿರುವ N. R. ರಮೇಶ್
• ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (MUDA) ದಲ್ಲಿ ಬದಲಿ ನಿವೇಶನಗಳ ಹೆಸರಿನಲ್ಲಿ ನಡೆದಿರುವ ಬೃಹತ್ ಹಗರಣ
• ತಮ್ಮ ರಾಜಕೀಯ ಪ್ರಭಾವದಿಂದ ತಮ್ಮ ಪತ್ನಿಯ ಹೆಸರಿಗೆ ಕಾನೂನು ಬಾಹಿರವಾದ ಬದಲಿ ನಿವೇಶನಗಳ ಹಂಚಿಕೆಯ ಕಾರ್ಯದಲ್ಲಿ 40 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತಿತವರ ಕುಟುಂಬದವರ ಬೃಹತ್ ಭೂ ಹಗರಣ
• MUDA ವು ತನ್ನ “ದೇವನೂರು 3ನೇ ಹಂತದ ಬಡಾವಣೆ” ನಿರ್ಮಾಣಕ್ಕೆಂದು 31/10/1997 ರಂದು ಮೈಸೂರು ತಾಲ್ಲೂಕು, ಕಸಬಾ ಹೋಬಳಿಯ ಕೆಸರೆ ಗ್ರಾಮ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ನೂರಾರು ಎಕರೆ ಜಮೀನುಗಳನ್ನು ಭೂಸ್ವಾಧೀನ (Notification) ಮಾಡಿಕೊಂಡಿರುತ್ತದೆ.
• ಇದರ ಪೈಕಿ ಕೆಸರೆ ಗ್ರಾಮದ ಸರ್ವೆ ನಂ: 464 ರ 3.16 ಎಕರೆ ಜಾಗವನ್ನು ಅದರ ಮಾಲೀಕ ನಿಂಗ ಬಿನ್ ಜವರ ಅವರಿಂದ ಭೂಸ್ವಾಧೀನ ಪಡಿಸಿಕೊಂಡು, ಪರಿಹಾರದ ರೂಪದಲ್ಲಿ ₹. 3,24,700/- (ಮೂರು ಲಕ್ಷದ ಇಪ್ಪತ್ತನಾಲ್ಕು ಸಾವಿರದ ಏಳು ನೂರು) ಗಳನ್ನು ಸದರಿ ಮಾಲೀಕರಿಗೆ ಬಿಡುಗಡೆ ಮಾಡಿರುತ್ತದೆ.
• ಅದಾದ ನಂತರ 18/05/1998 ರಂದು ನಗರಾಭಿವೃದ್ಧಿ ಇಲಾಖೆಯು ಸದರಿ ಕೆಸರೆ ಗ್ರಾಮದ ಸರ್ವೆ ನಂ: 464 ರ 3.16 ಎಕರೆ ವಿಸ್ತೀರ್ಣದ ಜಾಗವನ್ನು “ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ (De – notification) ಆದೇಶ”ವನ್ನು ಹೊರಡಿಸುತ್ತದೆ.
• ಈ ಅವಧಿಯಲ್ಲಿ ಸಿದ್ಧರಾಮಯ್ಯನವರು ಅಂದಿನ ಮುಖ್ಯಮಂತ್ರಿ J. H. ಪಟೇಲ್ ಅವರ ಸಚಿವ ಸಂಪುಟದಲ್ಲಿ “ಉಪ ಮುಖ್ಯಮಂತ್ರಿ”ಗಳಾಗಿರುತ್ತಾರೆ ಹಾಗೂ ಅವರ ಅತ್ಯಾಪ್ತರಾಗಿರುವ ಬಸವೇಗೌಡ ಅವರು MUDA ಅಧ್ಯಕ್ಷರಾಗಿರುತ್ತಾರೆ.
• ದಿನಾಂಕ 25/08/2004 ರಂದು ಕೆಸರೆ ಗ್ರಾಮದ ಸರ್ವೆ ನಂ: 464 ರ 3.16 ಎಕರೆ ವಿಸ್ತಿರ್ಣದ ಸ್ವತ್ತಿನ ಮಾಲೀಕರಾದ ನಿಂಗ ಬಿನ್ ಜವರ ಎಂಬುವವರ ಮಗನಾದ J. ದೇವರಾಜು ಅವರಿಂದ ಸಿದ್ಧರಾಮಯ್ಯನವರ ಭಾವಮೈದುನ (ಪತ್ನಿಯ ಸಹೋದರ) B. M. ಮಲ್ಲಿಕಾರ್ಜುನ ಸ್ವಾಮಿ ಬಿನ್ ಮರಿಲಿಂಗಯ್ಯ ನವರು ಕ್ರಯಕ್ಕೆ ಪಡೆದು ತಮ್ಮ ಹೆಸರಿಗೆ ನೊಂದಣಿ ಮಾಡಿಸಿಕೊಳ್ಳುತ್ತಾರೆ.
• 15/07/2005 ರಂದು ಸದರಿ ಜಮೀನನ್ನು “ವ್ಯವಸಾಯ ಪ್ರದೇಶ”ದಿಂದ “ವಸತಿ ಉದ್ದೇಶ”ಕ್ಕಾಗಿ ಭೂ ಪರಿವರ್ತನೆ (Conversion of Land) ಮಾಡಿಸಿಕೊಳ್ಳಲಾಗುತ್ತದೆ
• ಆದರೆ, ಸದರಿ ಜಮೀನಿನ ಮಾಲೀಕರಾದ ನಿಂಗ ಬಿನ್ ಜವರ ರವರು ಮರಣ ಹೊಂದಿದ್ದರೂ ಸಹ ಅವರ ಹೆಸರಿನಲ್ಲಿಯೇ ಜಿಲ್ಲಾಧಿಕಾರಿಗಳ ಕಛೇರಿಯಿಂದ ಭೂ ಪರಿವರ್ತನೆ ಮಾಡಲಾಗಿರುತ್ತದೆ.
• ಈ ಅವಧಿಯಲ್ಲಿ ಸಿದ್ಧರಾಮಯ್ಯನವರು (2004 ರಿಂದ 2006) ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಸಚಿವ ಸಂಪುಟದಲ್ಲಿ “ಉಪ ಮುಖ್ಯಮಂತ್ರಿ”ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು.
• ದಿನಾಂಕ 06/08/2010 ರಂದು ಸಿದ್ಧರಾಮಯ್ಯನವರ ಭಾವಮೈದುನ B. M. ಮಲ್ಲಿಕಾರ್ಜುನ ಸ್ವಾಮಿ ಯವರು ಸದರಿ ಸ್ವತ್ತನ್ನು ತಮ್ಮ ಸಹೋದರಿ ಶ್ರೀಮತಿ. B. M. ಪಾರ್ವತಿ (ಸಿದ್ಧರಾಮಯ್ಯನವರ ಧರ್ಮಪತ್ನಿ) ಯವರ ಹೆಸರಿಗೆ “ದಾನ ಪತ್ರ” (Gift Deed) ದ ಮೂಲಕ ದಾನವಾಗಿ ನೀಡುತ್ತಾರೆ.
• “ದಾನ ಪತ್ರ”ದ ಮೂಲಕ “ದೇವನೂರು 3ನೇ ಹಂತದ ಬಡಾವಣೆ”ಯಲ್ಲಿ ಬಂದಿದ್ದ ಸ್ವತ್ತಿಗೆ ಬದಲಾಗಿ, ಈಗಾಗಲೇ ಅಭಿವೃದ್ಧಿಯಾಗಿರುವ MUDA ದ ಇನ್ನೊಂದು ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ಮಂಜೂರು ಮಾಡುವಂತೆ 2014 ರಲ್ಲಿ ಶ್ರೀಮತಿ. B. M. ಪಾರ್ವತಿಯವರು ಅರ್ಜಿ ಸಲ್ಲಿಸುತ್ತಾರೆ.
• ಶ್ರೀಮತಿ. B. M. ಪಾರ್ವತಿಯವರ ಅರ್ಜಿಯನ್ನು ಪುರಸ್ಕರಿಸಿದ ನಗರಾಭಿವೃದ್ಧಿ ಇಲಾಖೆಯು ಬದಲಿ ನಿವೇಶನಗಳನ್ನು ಮಂಜೂರು ಮಾಡುವ ಬಗ್ಗೆ ಅನುಮೋದನೆ ನೀಡಿ “ಸರ್ಕಾರಿ ಆದೇಶ”ವನ್ನು ಹೊರಡಿಸುತ್ತದೆ
• ದಿನಾಂಕ 30/12/2017 ರಂದು MUDA ದಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ (ವಿಷಯದ ಸಂಖ್ಯೆ – 30) ಅರ್ಜಿದಾರರಿಗೆ ಈಗಾಗಲೇ ಅಭಿವೃದ್ಧಿ ಪಡಿಸಿರುವ ಬಡಾವಣೆಯಲ್ಲಿ 38,284 ಚ. ಅಡಿ ವಿಸ್ತೀರ್ಣದ ಸ್ವತ್ತುಗಳನ್ನು “ನಿವೇಶನಗಳ ರೂಪ”ದಲ್ಲಿ ಮಂಜೂರು ಮಾಡುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು.
• ಶೇ 50:50 ರ ಅನುಪಾತದಲ್ಲಿ (ಸ್ವತ್ತಿನ ಮಾಲೀಕರಿಗೆ 1/2 ಭಾಗ ಮತ್ತು MUDA ಗೆ 1/2 ಭಾಗ) ಶ್ರೀಮತಿ. ಪಾರ್ವತಿ ಕೋಂ ಸಿದ್ಧರಾಮಯ್ಯನವರಿಗೆ “ದೇವನೂರು 3ನೇ ಹಂತದ ಬಡಾವಣೆ”ಯ ಬದಲಾಗಿ MUDA ಮಾಲೀಕತ್ವದ ಬೇರೊಂದು ಬಡಾವಣೆಯಲ್ಲಿ ಒಟ್ಟು 38,284 ಚ. ಅಡಿ ವಿಸ್ತೀರ್ಣದ ಸ್ವತ್ತನ್ನು “ಬದಲಿ ನಿವೇಶನ”ದ ಹೆಸರಿನಲ್ಲಿ ಮಂಜೂರು ಮಾಡುವ ಬಗ್ಗೆ MUDA ದ ಅಧಿಕಾರಿಗಳು ನಿರ್ಣಯವನ್ನು ಅನುಮೋದಿಸಿದ್ದರು.
• ಮಾರುಕಟ್ಟೆ ಬೆಲೆ ಪ್ರತಿ ಚ. ಅಡಿಗೆ ₹. 5,000/- ಗಳಷ್ಟು ಇರುವ ಮೈಸೂರಿನ “ದೇವನೂರು 3ನೇ ಹಂತದ ಬಡಾವಣೆ” ಯಲ್ಲಿನ ನಿವೇಶನಗಳ ಬದಲಾಗಿ ಪ್ರತಿ ಚ. ಅಡಿಗೆ ₹. 12,000/- ಗಳಿಗಿಂತಲೂ ಹೆಚ್ಚಿರುವ ಮೈಸೂರಿನ ಅತ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ “ವಿಜಯನಗರ 03 ಮತ್ತು 04ನೇ ಹಂತದ ಬಡಾವಣೆ”ಗಳಲ್ಲಿ ಒಟ್ಟು 38,284 ಚ. ಅಡಿ ವಿಸ್ತೀರ್ಣದ 14 ನಿವೇಶನಗಳನ್ನು “ಬದಲಿ ನಿವೇಶನ”ದ ಹೆಸರಿನಲ್ಲಿ ಶ್ರೀಮತಿ. B. M. ಪಾರ್ವತಿಯವರ ಹೆಸರಿಗೆ 2021-2022 ರಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನು ಮೀರಿ ಹಂಚಿಕೆ ಮಾಡಲಾಗಿದೆ.
• 2021-22 ರಲ್ಲಿ MUDA ದ ಅಧ್ಯಕ್ಷರಾಗಿದ್ದ H. V. ರಾಜೀವ್ ಮತ್ತು ಆಯುಕ್ತರಾಗಿದ್ದ D. B. ನಟೇಶ್ ರವರು ಸಿದ್ಧರಾಮಯ್ಯನವರ ಧರ್ಮಪತ್ನಿ ಶ್ರೀಮತಿ. B. M. ಪಾರ್ವತಿ ಅವರ ಹೆಸರಿಗೆ ಮೈಸೂರಿನ ಅತ್ಯಂತ ಪ್ರತಿಷ್ಠಿತ ವಿಜಯನಗರ ಬಡಾವಣೆ 03ನೇ ಹಂತ ಮತ್ತು 04ನೇ ಹಂತದ ಪ್ರದೇಶಗಳಲ್ಲಿ 1) 50 X 80 ಅಳತೆಯ 05 ನಿವೇಶನಗಳು 2) 40 X 60 ಅಳತೆಯ 05 ನಿವೇಶನಗಳು 3) 30 X 50 ಅಳತೆಯ 02 ನಿವೇಶನಗಳು ಮತ್ತು 4) 30 X 40 ಅಳತೆಯ 02 ನಿವೇಶನಗಳು ಸೇರಿದಂತೆ ಒಟ್ಟು 14 ನಿವೇಶನಗಳನ್ನು ಹಂಚಿಕೆ ಮಾಡಿ ನೋಂದಣಿ ಮಾಡಿಕೊಡುತ್ತಾರೆ.
• “ನಗರಾಭಿವೃದ್ಧಿ ಇಲಾಖೆ”ಯ ನಿಯಮಗಳನ್ವಯ – “ಯಾವ ಬಡಾವಣೆಯ ನಿರ್ಮಾಣಕ್ಕೆಂದು ಪ್ರಾಧಿಕಾರವು ಸ್ಥಳೀಯರ ಸ್ವತ್ತುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳುತ್ತದೆಯೋ, ಅಂತಹ ಸ್ವತ್ತುಗಳ ಮಾಲೀಕರಿಗೆ ಅದೇ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಬೇಕು ಅಥವಾ ಆ ಬಡಾವಣೆಯ ನಂತರ ಪ್ರಾಧಿಕಾರವು ಅಭಿವೃದ್ಧಿ ಪಡಿಸುವ ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಬಹುದಾಗಿರುತ್ತದೆ. ಆದರೆ, ಎಂತಹ ಸಂದರ್ಭದಲ್ಲಿಯೂ ಸಹ ಉದ್ದೇಶಿತ ಬಡಾವಣೆಯ ನಿವೇಶನಗಳಿಗೆ ಬದಲಾಗಿ, ಆ ಬಡಾವಣೆಗಿಂತಲೂ ಮುಂಚಿತವಾಗಿ ಅಭಿವೃದ್ಧಿ ಪಡಿಸಿರುವ ಬಡಾವಣೆಗಳಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡುವುದು ಅಪರಾಧವಾಗಿರುತ್ತದೆ.”
• ಆದರೆ, ಈ ಪ್ರಕರಣದಲ್ಲಿ – ಶ್ರೀಮತಿ. B. M. ಪಾರ್ವತಿಯವರಿಗೆ ವಾಸ್ತವವಾಗಿ “ದೇವನೂರು 3ನೇ ಹಂತದ ಬಡಾವಣೆ”ಯಲ್ಲಿ ಹಂಚಿಕೆಯಾಗಿದ್ದ ನಿವೇಶನಗಳಿಗೆ ಬದಲಾಗಿ, ಅದಕ್ಕಿಂತಲೂ ಹತ್ತಾರು ವರ್ಷಗಳ ಹಿಂದೆಯೇ MUDA ಅಭಿವೃದ್ಧಿ ಪಡಿಸಿರುವ “ವಿಜಯನಗರ 3 ಮತ್ತು 4ನೇ ಹಂತದ ಬಡಾವಣೆ”ಗಳಲ್ಲಿನ ಅತ್ಯಂತ ಆಯಕಟ್ಟಿನ ಸ್ಥಳಗಳಲ್ಲಿರುವ ದುಬಾರಿ ನಿವೇಶನಗಳನ್ನು “ಬದಲಿ ನಿವೇಶನ”ದ ಹೆಸರಿನಲ್ಲಿ ಹಂಚಿಕೆ ಮಾಡಲಾಗಿದೆ.
• ರಾಜ್ಯದ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ಧರಾಮಯ್ಯನವರ ರಾಜಕೀಯ ಪ್ರಭಾವಗಳಿಗೆ ಒಳಗಾಗಿ MUDA ದ ಅಧ್ಯಕ್ಷರಾಗಿದ್ದ H. V. ರಾಜೀವ್ ಮತ್ತು ಆಯುಕ್ತರಾಗಿದ್ದ D. B. ನಟೇಶ್ ರವರು ಈ ಕಾನೂನುಬಾಹಿರ ಕಾರ್ಯವನ್ನು ಎಸಗಿರುತ್ತಾರೆ.
• ಪ್ರಸ್ತುತ MUDA ದ “ದೇವನೂರು 03ನೇ ಹಂತದ ಬಡಾವಣೆ”ಯಲ್ಲಿ 38,284 ಚ. ಅಡಿ ವಿಸ್ತೀರ್ಣದ ಸ್ವತ್ತಿನ ಮಾರುಕಟ್ಟೆ ಬೆಲೆ ಸುಮಾರು ₹. 19,00,00,000/- (ಹತ್ತೊಂಬತ್ತು ಕೋಟಿ) ಗಳಷ್ಟಿದ್ದರೆ, “ವಿಜಯನಗರ 3 ಮತ್ತು 4ನೇ ಹಂತದ ಬಡಾವಣೆ”ಯಲ್ಲಿ ಅದೇ ಅಳತೆಯ ಸ್ವತ್ತಿನ ಬೆಲೆ ಸುಮಾರು ₹. 46,00,00,000/- (ನಲವತ್ತಾರು ಕೋಟಿ) ಗಳಿಗೂ ಹೆಚ್ಚು ಇರುತ್ತದೆ.
• MUDA ದ ಈ ಕಾರ್ಯದಿಂದಾಗಿ ಸರ್ಕಾರದ ಖಜಾನೆಗೆ ಸುಮಾರು ₹. 27,00,00,000/- (ಇಪ್ಪತ್ತೇಳು ಕೋಟಿ) ಗೂ ಹೆಚ್ಚು ಮೊತ್ತ ನಷ್ಟವಾಗಿರುತ್ತದೆ.
• ಸಿದ್ಧರಾಮಯ್ಯನವರು ಅತ್ಯಂತ ಪ್ರಭಾವಶಾಲಿ ಹುದ್ದೆಗಳಲ್ಲಿದ್ದ (1997-98, 2004-05, 2014-15 ಮತ್ತು 2021-22) ಪ್ರತೀ ಹಂತದಲ್ಲಿ ತಮ್ಮ ಪ್ರಭಾಗಳನ್ನು ಬಳಸಿ, ಕಾನೂನು ಬಾಹಿರ ಕಾರ್ಯಗಳ ಮೂಲಕ ಇಂತಹ ಬೃಹತ್ ವಂಚನೆಯ ಕಾರ್ಯವನ್ನು ಭ್ರಷ್ಟ ಅಧಿಕಾರಿಗಳ ಮೂಲಕ ಮಾಡಿಸಲು ಯಶಸ್ವಿಯಾಗಿರುತ್ತಾರೆ ಎಂಬ ಗಂಭೀರ ಆರೋಪ
• ಪತ್ರಿಕಾಗೋಷ್ಠಿಯಲ್ಲಿ ಈ ಬೃಹತ್ ಹಗರಣಕ್ಕೆ ಸಂಬಂಧಿಸಿದ 383 ಪುಟಗಳ ಸಂಪೂರ್ಣ ದಾಖಲೆಗಳನ್ನು ಬಿಡುಗಡೆ ಮಾಡಿದ N. R. ರಮೇಶ್
ಎನ್ ಆರ್ ರಮೇಶ್ ಅವರ ಪ್ರಕಾರ ಪ್ರಸ್ತುತ ಆರೋಪಿಗಳಾಗಿರುವವರ ವಿವರ:
1. ಶ್ರೀ. ಸಿದ್ಧರಾಮಯ್ಯ
ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ರಾಜ್ಯ ಸರ್ಕಾರ,
ವಿಧಾನಸೌಧ, ಬೆಂಗಳೂರು
2. ಶ್ರೀಮತಿ. B, M. ಪಾರ್ವತಿ
#206, 16ನೇ ಅಡ್ಡರಸ್ತೆ,
ಎಂ. ಸಿ. ಬಡಾವಣೆ, ವಿಜಯನಗರ,
ಬೆಂಗಳೂರು – 560 040
3. B. M. ಮಲ್ಲಿಕಾರ್ಜುನ ಸ್ವಾಮಿ
ನಂ: 1245, 3ನೇ ಮುಖ್ಯರಸ್ತೆ,
ಕಾಂತರಾಜ ಅರಸು ರಸ್ತೆ,
ತೊಣಚಿ ಕೊಪ್ಪಲು, ಮೈಸೂರು
ಅಥವಾ
ಸಿದ್ಧರಾಮಯ್ಯನ ಹುಂಡಿ ಗ್ರಾಮ,
ವರುಣಾ ಹೋಬಳಿ, ಮೈಸೂರು ತಾಲ್ಲೂಕು
4. ಬಸವೇಗೌಡ
ಮಾಜಿ ಅಧ್ಯಕ್ಷರು,
ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (MUDA)
5. H. V. ರಾಜೀವ್
#966/F7, 2ನೇ ಮುಖ್ಯರಸ್ತೆ,
2ನೇ ಅಡ್ಡರಸ್ತೆ, ವಾರ್ಡ್ ನಂಬರ್ 55,
ವಿದ್ಯಾರಣ್ಯಪುರಂ, ಮೈಸೂರು
6. D. B. ನಟೇಶ್
KAS ಅಧಿಕಾರಿ




