ಮೌಲ್ಯಗಳ ಸರದಾರ ಡಾ.ರಾಜ್ ಕುಮಾರ್ ಪ್ರಶಸ್ತಿ ಪ್ರದಾನ
ಬೆಂಗಳೂರು: ನಗರದ ಬಸವನಗುಡಿಯ ಅಶ್ವತ್ಥ ಕಲಾಭವನದಲ್ಲಿ ಸ್ನೇಹ ಬುಕ್ ಹೌಸ್ ನ 555ನೇ ಕೃತಿ ಮೌಲ್ಯಗಳ ಸರದಾರ ಡಾ.ರಾಜ್ ಕುಮಾರ್ ಡಾ.ರಾಜ್ ಕುಮಾರ್ ಚಿತ್ರಗಳಲ್ಲಿ ಸಾಮಾಜಿಕ ಮೌಲ್ಯಗಳು ಕೃತಿಯ ಲೋಕಾರ್ಪಣೆ ಸಮಾರಂಭ ನಡೆಯಿತು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ವರನಟ ಡಾ.ರಾಜ್ ಕುಮಾರ್ ಪುತ್ರಿ ಪೂರ್ಣಿಮಾ ರಾಮ್ ಕುಮಾರ್, ಡಾ.ಅರುಳು ಮಲ್ಲಿಗೆ ಪಾರ್ಥಸಾರಥಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಸೋಮಶೇಖರ್, ಡಾ.ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಅಧ್ಯಕ್ಷ ಎನ್.ಆರ್.ರಮೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ, ಲೇಖಕ ಡಾ.ಕೆ.ನಟರಾಜ್, ಪ್ರಕಾಶಕರಾದ ಕೆ.ಬಿ.ಪರಶಿವಪ್ಪ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಸಿ, ಕೃತಿಯ ಲೋಕಾರ್ಪಣೆ ಮಾಡಿದರು.
ಡಾ.ಅರುಳು ಮಲ್ಲಿಗೆ ಪಾರ್ಥಸಾರಥಿ ಮಾತನಾಡಿ, ಘನತೆ, ಗಾಂಭೀರ್ಯ, ಶತಮಾನದ ಸಾಧಕರು ಡಾ.ರಾಜ್ ಕುಮಾರ್ ರವರು ಎಷ್ಟೆ ಎತ್ತರಕ್ಕೆ ಏರಿದರು ಸರಳವಾಗಿ ಬದುಕಿದರು. ಚಲನಚಿತ್ರ ರಂಗಕ್ಕೆ ಹಾಗೂ ಅವರು ನಟಿಸಿದ ಪಾತ್ರಗಳಿಗೆ ನ್ಯಾಯ ಒದಗಿಸಿ ಮಾರ್ಯಾದ ಪುರುಷೋತ್ತಮರಾದರು. ಡಾ.ರಾಜ್ ಕುಮಾರ್ ಹಿಂದಿ ಚಲನಚಿತ್ರರಂಗದಲ್ಲಿ ಇದ್ದಿದರೆ ನಾವು ಇರುತ್ತಿರಲಿಲ್ಲ ಎಂದು ಅಮಿತಾಬ್ ಬಚ್ಚನ್ ರವರು ಹೇಳಿದರು. ಸಮಾಜವಾಗಿ ಜೀವಂತವಾಗಿರಬೇಕು ಎಂದರೆ ಮಹಾನ್ ಸಾಧಕರ ಪುಸ್ತಕ ಮುಂದಿನ ಪೀಳಿಗೆಗೆ ಲಭಿಸುವಂತೆ ಮಾಡಬೇಕು ಎಂದರು.
ಗುರುರಾಯರು, ಭಕ್ತ ಕನಕದಾಸ ಅನೇಕ ದೇವರುಗಳನ್ನು ಚಿತ್ರ ಮಾಡಿ ದೇವರುಗಳನ್ನು ಜೀವಂತವಾಗಿ ನೋಡುವಂತೆ ಮಾಡಿದರು. ಕೆನಡಾದ ಚರ್ಚ್ ನಲ್ಲಿ ಡಾ.ರಾಜ್ ಕುಮಾರ್ ಕನ್ನಡನಾಡು, ಕನ್ನಡಿಗರಿಗೆ ಸುಖ, ಶಾಂತಿ ಲಭಿಸಲಿ ಎಂದು ಮೊಂಬತ್ತಿ ಬೆಳಗಿಸಿ ಬೇಡಿಕೊಂಡರು ಎಂದರು.
ಪೂರ್ಣಿಮಾ ರಾಮ್ ಕುಮಾರ್ ಮಾತನಾಡಿ, ನಾಡಿನ ಸಮಸ್ತ ಅಭಿಮಾನಿ ದೇವರುಗಳಿಗೆ ನಮಸ್ಕಾರಗಳು. ನಮ್ಮ ತಂದೆ, ತಾಯಿಯವರು ಗಳಿಸಿದ ಕೀರ್ತಿ, ಖ್ಯಾತಿಯನ್ನು ಕನ್ನಡಿಗರಿಗೆ ಧಾರೆ ಎರೆಯುತ್ತೇನೆ. ಡಾ.ರಾಜ್ ಕುಮಾರ್ ರವರನ್ನು ನೋಡಿ ಇನ್ನೂ ಕಲಿಯಬೇಕಾದದ್ದು ಬಹಳ ಇದೆ ಎಂದರು.
ಎನ್.ಆರ್.ರಮೇಶ್ ಮಾತನಾಡಿ, ಭಾರತ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ರವರು ವೈವಿಧ್ಯಮಯ, ಸಾಮಾಜಿಕ ಮೌಲ್ಯಗಳುವುಳ್ಳ ಚಿತ್ರಗಳಲ್ಲಿ ನಟಿಸಿದರು. 174 ಕೃತಿಗಳು ಡಾ.ರಾಜ್ ಕುಮಾರ್ ರವರ ಬಗ್ಗೆ ಪುಸ್ತಕಗಳು ಪ್ರಕಟನೆಯಾಗಿದೆ. ಇದು ಒಂದು ದಾಖಲೆಯಾಗಿದೆ. ಪಾತ್ರಗಳ ಮೂಲಕ ಸಾಮಾಜಿಕ ಪಿಡುಗುಗಳ ವಿರುದ್ಧ ಸಮರ ಸಾರಿದರು, ಸಮಾಜದಲ್ಲಿ ಬದಲಾವಣೆ ತಂದರು. ಕಸ್ತೂರಿ ನಿವಾಸ, ಜೀವನಚೈತ್ರ ಚಿತ್ರಗಳು ಯುವಕರಿಗೆ ಸ್ಪೂರ್ತಿಯಾಯಿತು. ಡಾ.ರಾಜ್ ಕುಮಾರ್ ನಟಿಸಿದ ಚಿತ್ರಗಳು ಸಂಪೂರ್ಣ ಕುಟುಂಬ ಸಮೇತ ನೋಡಬಹುದಾದ ಚಿತ್ರಗಳಾಗಿದ್ದವು, ಅವರ ಕುಟುಂಬದ ಸ್ನೇಹ ಸಿಕ್ಕಿರುವುದು ನಮ್ಮ ಸೌಭಾಗ್ಯ ಎಂದರು.
ಸಿ.ಸೋಮಶೇಖರ್ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅನುಸರಿಸಿದ ಮಹಾನ್ ವ್ಯಕ್ತಿತ್ವ ಡಾ.ರಾಜ್ ಕುಮಾರ್ ರವರ ಮೌಲ್ಯಗಳ ಸರದಾರ ಪುಸ್ತಕ ಹೊರಬಂದಿರುವುದು ಸಂತೋಷ ಸಂಗತಿಯಾಗಿದೆ. ಡಾ.ರಾಜ್ ಕುಮಾರ್ ರವರ ಚಲನಚಿತ್ರಗಳಲ್ಲಿ ಉತ್ತಮ ಸಾಮಾಜಿಕ ಮೌಲ್ಯಗಳು ಇರುತ್ತಿತ್ತು. ನೈತಿಕ ಮೌಲ್ಯ, ಶುದ್ಧತೆ ನಿಷ್ಟೆ, ಕಾಯಕ ಎಲ್ಲವು ಅವರಲ್ಲಿ ಇತ್ತು, ಎಲ್ಲ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿ ನಟ ಸೌರ್ವಭೌಮರಾದರು ಎಂದರು.
ಮಹೇಶ್ ಜೋಷಿ ಮಾತನಾಡಿ, ಕನ್ನಡ ಚಲನಚತ್ರರಂಗಕ್ಕೆ ಹೊಸ ಸಂಚಲನ ಮೂಡಿಸಿದರು, ಪಾತ್ರಕ್ಕೆ ಜೀವ ತುಂಬಿದರು. ಡಾ.ರಾಜ್ ಕುಮಾರ್ ರವರಿಗೆ ದಾದ ಸಾಹೇಬ ಪಾಲ್ಕ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಸುಸಂದರ್ಭದಲ್ಲಿ ಡಾ.ರಾಜ್ ಕುಮಾರ್ ರವರ ಉತ್ತಮ ಒಡನಾಟ ಸಿಕ್ಕಿತ್ತು. ಮಂತ್ರಾಲಯ ಮಹಾತ್ಮೆ ಗುರುರಾಯರ ಪಾತ್ರ ಮಾಡಿರುವುದು ಅತ್ತುತ್ಯಮ ಚಿತ್ರವಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಸ್ವಾಭಿಮಾನದ ಸಂಸ್ಥೆ ಎಂದು ಡಾ.ರಾಜ್ ರವರು ಹೇಳಿದರು ಎಂದರು.
ಇದೇ ವೇಳೆ ಮೌಲ್ಯಗಳ ಸರದಾರ ಡಾ.ರಾಜ್ ಕುಮಾರ್ ಗೌರವ ಪುರಸ್ಕಾರವನ್ನು ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ, ಹಾಲುಜೇನು ರಾಮ್ ಕುಮಾರ್, ಲೇಖಕ ಕೆ.ವಿ.ಲಕ್ಷ್ಮಣಮೂರ್ತಿ, ಸಮಾಜ ಸೇವಕ ರಂಗಸ್ವಾಮಿ ರವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.







