ಮೇ ೩,೨೦೧೫
ನಾಳೆ ಮೇ ಮೂರು, ಲಿಂಗಾಯತ ಚಳುವಳಿಯ ಕಟ್ಟಿದ ದಿನಗಳನ್ನು ಜ್ಞಾಪಿಸಿಕೊಳ್ಳುವ ದಿನ. ಚಳುವಳಿಯ ಮುಂಚೂಣಿ ನಾಯಕರಾದ ಶ್ರೀ ಬಸವರಾಜ ಹೊರಟ್ಟಿ, ಸಚಿವ ಎಂ. ಬಿ. ಪಾಟೀಲ, ಡಾ.ಎಸ್.ಎಂ.ಜಾಮದಾರ ಶಾಸಕರಾದ ಬಿ. ಆರ್. ಪಾಟೀಲ ಮಾಜಿ ಸಚಿವರಾದ ಎ. ಬಿ. ಪಾಟೀಲ ಜೊತೆಯಲ್ಲಿ ಚಳವಳಿಯ ರಕ್ತ ಮಾಸಕಂಡಗಳಾಗಿದ್ದ ಚಳುವಳಿಗಾರರು ಒಟ್ಟಾಗುವ ದಿನ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಚಳುವಳಿಯ ಕೂಗು ತಾರಕಕ್ಕೆ ಏರಿದಾಗ ಆಳುವ ಸರ್ಕಾರ ಎಚ್ಚೆತ್ತುಕೊಂಡು ಲಿಂಗಾಯತರೆಂದರೆ ಯಾರು? ಅವರು ಹಿಂದೂಗಳೆ? ವೀರಶೈವರೆ? ಅದೊಂದು ಸ್ವತಂತ್ರ ಧರ್ಮವೆ? ಎಂಬುದನ್ನು ತಿಳಿದುಕೊಂಡು ನಿಮ್ಮ ಅನಿಸಿಕೆಯನ್ನು ನನ್ನ ಸಂಪುಟದ ಮುಂದಿಡಿ ಎಂದಿದ್ದರು ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು.
ಲಿಂಗಾಯತರ ಅಸ್ಮಿತೆಯನ್ನು ಅರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ಆ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ನಾಗಮೋಹನದಾಸ್ ಮತ್ತು ಸಮಿತಿಯ ಸದಸ್ಯರಾದ ಪ್ರೊ. ಪುರುಷೊತ್ತಮ ಬಿಳಿಮಲೆ ಅವರು ಅಂದಿನ ದಿನಗಳನ್ನು ನೆನಸಿಕೊಳ್ಳಲಿದ್ದಾರೆ.
ಮತ್ತೆ ಲಿಂಗಾಯತರ ಮೇಲೆ ವೈಚಾರಿಕ ದಾಳಿ ಪ್ರಾರಂಭವಾಗಿದೆ. ಸುಮಾರು ಒಂಬತ್ತ ನೂರು ವರ್ಷಗಳಿಂದಲೂ ನಿರಂತರವಾಗಿ ದಾಳಿ ಮಾಡುತ್ತ ವಿಶ್ವಧರ್ಮವನ್ನು ಸ್ಥಾನಿಕ ಧರ್ಮ ವನ್ನಾಗಿಸಿದವರಿಗೆ ಇನ್ನೂ ತೃಪ್ತಿ ಇಲ್ಲ. ಈಗಲೂ ವೈಚಾರಿಕ ದಾಳಿ ಮುಂದುವರೆಸಿದ್ದಾರೆ. ಜಾತಿ ಜಾತಿಗಳಲ್ಲಿ ದೇಶವನ್ನು ಭಾವನಾತ್ಮಕವಾಗಿ ತುಂಡರಿಸಿದ ಇವರೆಂದೂ ‘ಇಂವನಮ್ಮವ ಇಂವನಮ್ಮವ’ ಎನ್ನಲೇ ಇಲ್ಲ. ‘ಇವನಾರವ ಇವನಾರವ’ ಎನ್ನುತ್ತ ವರ್ಣಭೇದ, ಲಿಂಗಭೇದ ಎಣಿಸುತ್ತ ಒಟ್ಟಾಗಿದ್ದ ಜನರನ್ನು ವಿಭಜಿಸುತ್ತ, ಮೌಢ್ಯ ಬಿತ್ತುತ್ತ, ಕೋಟಿ ಕೋಟಿ ದೇವರುಗಳನ್ನು ಶ್ರುಷ್ಠಿಸುತ್ತ, ದೇವರು ಮತ್ತು ಭಕ್ತನ ಮಧ್ಯದಲ್ಲಿ ದಲ್ಲಾಳಿ ಯಾಗುತ್ತ ತಮ್ಮ ಹೊಟ್ಟೆ ಹೊರೆಯುವ ಜನ “ಕೂಡಿಸುವ ಧರ್ಮವನ್ನು ಒಡೆಯುವ ಧರ್ಮ” ಎಂದು ಬಿಂಬಿಸಿಲು ಪ್ರಯತ್ನಪಟ್ಟರು. ದೇಶವನ್ನು ಭಾವನಾತ್ಮಕವಾಗಿ ತುಂಡರಿಸಿದರು.
ಇವರ ನಾಟಕ, ಸ್ವಾರ್ಥಪರ ನಡೆ ಇವೆಲ್ಲವನ್ನೂ ಬಿಚ್ಚಟ್ಟ ಸಮಕಾಲಿನ ‘ಇತಿಹಾಸ ಲಿಂಗಾಯತ ಚಳುವಳಿ ೨೦೧೭-೧೮’. ಇದರ ಲೋಕಾರ್ಪಣೆ ಸಂದರ್ಭದಲ್ಲಿ ಸ್ನೇಹಿತರು, ಹಿತೈಶಿಗಳು, ಇತಿಹಾಸಕಾರರು, ಸಂಶೋದಕರು, ವೈಚಾರಿಕರು, ಬಸವ ಸಿದ್ಧಾಂತಿಗಳು, ಬಸವ ಭಕ್ತರು, ವಿವಧ ಧರ್ಮಗಳ ವಿವಿಧ ಭಾಷೇಗಳ, ವಿವಿಧ ಸಂಸ್ಕ್ರತಿಗಳ, ವಿವಿಧ ಪ್ರದೇಶಗಳ, ವಿವಿಧ ವೇಶಗಳ, ವಿವಧ ಆಹಾರಿಗಳ ಭಾರತವು ಒಂದು ಒಕ್ಕೂಟ ವ್ಯವಸ್ಥೆಯೆಂದು ನಂಬಿದ, ಈ ದೇಶದ ಸಂವಿಧಾನದಲ್ಲಿ ನಂಬುಗೆಯಿಟ್ಟು ಸೈದ್ಧಾಂತಿಕವಾಗಿ ನಾವೆಲ್ಲರೂ ಒಂದು ಎಂಬ ಅಭಿಪ್ರಾಯದವರೆಲ್ಲರೂ ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ಈ ಚಳುವಳಿಯಲ್ಲಿ ದಿನಗಳಲ್ಲಿ ಅನೇಕರು ತಮ್ಮ ತನು ಮನ ಧನವನ್ನು ನೀಡಿ ಸೈದ್ಧಾಂತಿಕವಾಗಿ, ವೈಚಾರಿಕವಾಗಿ, ಭಾವನಾತ್ಮಕವಾಗಿ ಚಳುವಳಿಯನ್ನು ಬೆಂಬಲಿಸಿ ಅದನ್ನು ಯಶಸ್ವಿಗೊಳಿಸಿದ್ದರು. ಇವರೆಲ್ಲರನ್ನು ಒಟ್ಟುಗೂಡಿಸಿ ಒಂದು ಸೂರಿನಡಿಯಲ್ಲಿ ತರುವುದು ಕಷ್ಟದ ಕೆಲಸ. ಅಲ್ಲದೆ ಆ ಸಂಖ್ಯೆ ಲಕ್ಷಲಕ್ಷಕ್ಕೆರುವುದು.
ಈ ಶುಭ ಸಂದರ್ಭದಲ್ಲಿ ಅಂತಹವರಲ್ಲಿ ಕೆಲವರನ್ನು ಜ್ಞಾಪಿಸಿಕೊಳ್ಳುವುದು ಉಚಿತ. ಚಳುವಳಿಯಲ್ಲಿ ನಿರಂತರವಾಗಿ ತೊಡಿಗಿಸಿಕೊಂಡಿರುವ ಕೆಲವು ಕಾರ್ಯಕರ್ತರು ನಮ್ಮೊಂದಿಗೆ ಈ ಕಾರ್ಯಕ್ರಮದಲ್ಲಿರಲಿದ್ದಾರೆ. ಅವರಿಗೊಂದು ಚಿಕ್ಕ ಸನ್ಮಾನ ಕಾರ್ಯಕ್ರಮವೂ ಇರಲಿದೆ. ಇದರಲ್ಲಿ ಪಾಲುದಾರರಾಗಲು ಬರಲಿದ್ದಾರೆ
ಲಿಂಗಾಯತ ಚಳುವಳಿಯನ್ನು ಹುಟ್ಟು ಹಾಕಿದ್ದ ಬೀದರ್ನಿಂದ ಶ್ರೀಯುತರಾದ, ಶ್ರೀಕಾಂತ ಸ್ವಾಮಿ, ಬಸವರಾಜ ದನ್ನೂರ, ಬಾಬು ವಾಲಿ, ಆನಂದ ದೇವಪ್ಪ, ಗಾದಗಿ ಪಾಟೀಲ, ಕುಶಾಲ ಪಾಟೀಲ, ಧನರಾಜ ಜೀರ್ಗೆ, ಅತಿವಾಳದ ಶಿವರಾಜ ಪಾಟೀಲ, ಬಸವರಾಜ ಬತಮುರ್ಗಿ, ಕಿರಣ ಖಂಡ್ರೆ ಮತ್ತವರ ಸಹಹೋರಾಟಗಾರರು ಬರಲಿದ್ದಾರೆ. ಬೆಳಗಾವಿಯಿಂದ ಶರಣರಾದ ಶಂಕರ ಗುಡಸ್, ವೀರೇಶ ಹಲಕಿ, ಶಿವು ಮೆಟ್ಯಾಳ, ಅಶೋಕ ಬೆಂಡಿಗೇರಿ, ಅಶೋಕ ಅಳ್ವಾವರ್, ಚಂದ್ರಗೌಡ ಪಾಟೀಲ, ಮುಳುವಾಡ ಮಠ ವಕೀಲರು, ಈರಣ್ಣ ಬಡಿಗೇರ, ನರಗುಂದವರು ಮತ್ತು ಚಳುವಳಿ ಕಟ್ಟಿದ ನಾಯಕರು ಬರಲಿದ್ದಾರೆ.
ರಾಯಚೂರಿನಿಂದ ಶರಣ ಬಸವರಾಜ ಕುರುಗೋಡ, ಅಮರ ನಾಡಗೌಡ, ಬಸವರಾಜ ಜೇರಬಂಡಿ ವಕೀಲರು, ನಾಗರಾಜ ಪಾಟೀಲ, ಯಂಕಣ್ಣ ಯಾದವ, ಮಲ್ಲಿಕಾರ್ಜುನ ಗುಡಿಮನಿ, ಅಮರ ಪಾಟೀಲ, ಅಮರೆಗೌಡ ಅಮರಾಪುರ, ಬಸವರಾಜ ಪಾಟೀಲ, ಮಲ್ಲಿಕಾರ್ಜುನಗೌಡ, ಅಮರಾಪುರದ ವೀರಭಧ್ರಗೌಡ್ರು ಮತ್ತವರ ಸ್ನೇಹಿತರು ಜತೆಗೂಡಲಿದ್ದಾರೆ.ವಿಜಯಪುರದಿಂದ ಶ್ರೀಯುತರಾದ ಚಂದ್ರಶೇಖರ ಇಟಗಿ, ಬಾಪುಗೌಡ್ರು ಪಾಟೀಲ, ರವಿಗೂಳಿ, ಶಿವಕುಮಾರ ಉಪ್ಪಿನ, ವೀರೇಶ ನಾಲತವಾಡ, ರಾಮನಗೌಡ ಪಾಟೀಲ, ವೀರೇಶ್ವರ, ಬಾಗೆವಾಡಿಯ ಹಿರಿಯರಾದ ಮೇಟಿ ಸರ್, ಡಾ. ಮಡಿಕೇಶ್ವರ, ಶಂಕರಗೌಡ ಬಿರಾದಾರ ಮತ್ತು ಹಿರಿಯರು ಹೋರಾಟಗಾರರು ಬರಲಿದ್ದಾರೆ. ಕೊಪ್ಪಳದಿಂದ ಶರಣರಾದ ಬಸವರಾಜ ಹನುಮೇಶ ಕಮಲಂಗಿ, ಶಿವಕುಮಾರ ಕುಕನೂರು, ರಾಜು ಸಸಿಮಠ, ಶಂಭು ಬವಿಹಳ್ಳಿ, ಶರಣಬಸನಗೌಡ, ಗಾಳೆಪ್ಪ ಕಡೆಮನಿ, ಶೇಖರ ಇಂಗಳದಾಳ, ಶ್ರೀ ಗುಡದಪ್ಪ ಹಡಪದ, ಮುತ್ತಣ್ಣ ಬೀಲಲದಿನ್ನಿ ಜತೆಯಾಗಲಿದ್ದಾರೆ.
ಧಾರವಾಡದಿಂದ ಶ್ರೀಯುತರಾದ ಚಿಂತಾಮಣಿ ಸಿಂದಗಿ,ಚೆನ್ನಬಸನಗೌಡ ಪಾಟೀಲ,ಮಲ್ಲೇಶ ಹಳಕಟ್ಟಿ, ನಿಂಗಪ್ಪ ಮರಿತಮ್ಮಣ್ಣವರ, ಅರುಣ ಮೋಡಿ, ಗುರುರಾಜ ಅವರಾದಿ, ಶಿವಾನಂದ ಹೊಸಹಳ್ಳಿ, ನಿಂಗಪ್ಪ ಅಂಬಣ್ಣವರ, ರವೀಂದ್ರ ಬಾಗೋಡಿ, ಜತೆಗೂಡಲಿದ್ದಾರೆ, ದಾವಣಗೆರೆಯಿಂದ ಶರಣ ಶಿವಕುಮಾರ, ಮಹಾಂತೇಶ ಅವರ ತಂಡ ಜತೆಯಾಗಲಿದೆ. ಚಿಕ್ಕೋಡಿಯಿಂದ ಸಿದ್ದು ಪಾಟೀಲರ ತಂಡ ಜತೆಯಾಗಲಿದೆ. ಮೈಸೂರಿನಿಂದ ಶರಣ ಮಹಾದೇವಪ್ಪ ಮತ್ತವರ ತಂಡ ಸೇರಿಕೊಳ್ಳಲಿದೆ. ಬೆಂಗಳೂರಿನ ಜಾಗತಿಕ ಲಿಂಗಾಯತ ಮಹಾಸಭೆಯ ಮೂಲ ಕಾರ್ಯಕರ್ತರು ಸೇರಲಿದ್ದಾರೆ. ಚಿತ್ರದುರ್ಗದಿಂದ, ಮಂಡ್ಯದಿಂದ, ಚಿಕ್ಕಮಗಳೂರಿನಿಂದ, ಕೋಲಾರದಿಂದ ಹಿರಿಯರಾದ ಲೋಣಿ ಮತ್ತವರ ಸ್ನೇಹಿತರು ಸೇರಲಿದ್ದಾರೆ.
ನೀವು ಬನ್ನಿ,
ಸ್ಥಳ
ಮಹದೇವ ದೇಸಾಯಿ ಸಭಾಂಗಣ
ಗಾಂಧಿ ಭವನ, ಶಿವಾನಂದ ಸರ್ಕಲ್.
ಬೆಂಗಳೂರು,
ಸಮಯ
ಬೆಳಗ್ಗೆ – ೧೦.೩೦
ಪ್ರಸಾದ – ೧.೩೦
ಸನ್ಮಾನ ಕಾರ್ಯಕ್ರಮ – ೨.೩೦
– ಜಿ ಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

















