ಸಾರ್ವಜನಿಕರಿಗೆ 24/7 ಕೊವಿಡ್-19 ಸಾಂಕ್ರಮಿಕ ರೋಗ ಉಚಿತ ತಪಾಸಣಾ ವಾಹನ ಲೋಕಾರ್ಪಣೆ

4 years ago

ಬೆಂಗಳೂರು: ಬಿ.ಬಿ.ಎಂ.ಪಿ. ಕೇಂದ್ರ ಕಚೇರಿ ವಾರ್ ರೂಮ್ ಅವರಣದಲ್ಲಿ ಜೆರೋಧ ಪ್ರಾಯೋಜಕತ್ವ, ಸೂರ್ಯ ಫೌಂಡೇಷನ್ ವತಿಯಿಂದ ಬೆಂಗಳೂರು ದಕ್ಷಿಣ ವಲಯ ವ್ಯಾಪ್ತಿ ಪ್ರದೇಶದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಕೊವಿಡ್-19 ಸಾಂಕ್ರಮಿಕ ರೋಗ ಪರೀಕ್ಷಾ ಮೊಬೈಲ್ ವಾಹನವನ್ನು ಮುಖ್ಯ ಆಯುಕ್ತ ಗೌರವ್ ಗುಪ್ತಾ, ವಿಶೇಷ ಆಯುಕ್ತೆ ತುಲಸಿ ಮದ್ದೇನೆನಿ, ವಿಶೇಷ ಆಯುಕ್ತ ಡಾ.ತ್ರಿಲೋಕ್ ಚಂದ್ರ, ಸೂರ್ಯ ಫೌಂಡೇಷನ್ ಸಂಸ್ಥಾಪಕ ಶರವಣ, ಪುನೀತ್ ಧ್ವಜ ತೋರುವ ಮೂಲಕ ಉಚಿತ ಕೊವಿಡ್ ಪರೀಕ್ಷಾ ಮೊಬೈಲ್ ವಾಹನ ಲೋಕಾರ್ಪಣೆ ಮಾಡಿದರು.

ಬೆಂಗಳೂರು ದಕ್ಷಿಣ ವಲಯ 44 ಹೆಚ್ಚು ವಾರ್ಡಗಳಲ್ಲಿ ಕೊವಿಡ್ ಪರೀಕ್ಷಾ ವಾಹನ ಸಂಚರಿಸಲಿದೆ. ಬಿ.ಬಿ.ಎಂ.ಪಿ. ದಕ್ಷಿಣ ವಲಯ 6 ಕೊವಿಡ್ ವಾರ್ ರೂಮ್ ಜೊತೆಯಲ್ಲಿ ಸಹಕಾರ ನೀಡಲಿದೆ. 24ಗಂಟೆಗಳ ಸೇವೆಯನ್ನ ಆರಂಭಿಸಲಾಗಿದೆ. ಜನಸಂದಣಿ ಹೆಚ್ಚು ಇರುವ ಪ್ರದೇಶ ಮತ್ತು ಕೊವಿಡ್ ಹೆಚ್ಚಳವಿರುವ ಕಡೆ ಹಾಗೂ ವೃದ್ದರು, ಮಕ್ಕಳಿಗೆ ಕೊವಿಡ್ ಲಕ್ಷಣ ಇದ್ದರೆ ಅವರ ಮನೆ ಬಳಿಗೆ ತೆರಳಿ ಉಚಿತವಾಗಿ ತಪಾಸಣೆ ಮಾಡಲಾಗುತ್ತದೆ.

ಕೊವಿಡ್-19 ಮೊಬೈಲ್ ಪರೀಕ್ಷಾ ವಾಹನದಲ್ಲಿ ಲ್ಯಾಬ್ ತಂತ್ರಜ್ಞ ಮತ್ತು ಪಿ.ಪಿ.ಇ. ಕಿಟ್, ಸ್ಯಾನಿಟೈಸರ್, ಮಾಸ್ಕ್ ಗಳನ್ನು ಇಡಲಾಗಿದೆ. ಜೆರೋಧ ಸಾಮಾಜಿಕ ಸೇವಾ ಸಂಘಟನೆ ಸೂರ್ಯ ಫೌಂಡೇಷನ್ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ ಸೂರ್ಯ ಫೌಂಡೇಷನ್ ವತಿಯಿಂದ ಬಿ.ಬಿ.ಎಂ.ಪಿ.ಗೆ. 500 ಕೊವಿಡ್ ಪರೀಕ್ಷಾ ಕಿಟ್, 500 ಲೀಟರ್ ಸ್ಯಾನಿಟೈಸರ್ 1 ಸಾವಿರ N.95 ಮಾಸ್ಕ್, 10 ಸಾವಿರ ಮಾಸ್ಕ್, 300 ಪಿ.ಪಿ.ಇ. ಕಿಟ್, 15 ಥರ್ಮಲ್ ಸ್ಯಾನರ್ ಗಳನ್ನು ನೀಡಿದರು.

Leave a Reply