2022-23 ನೇ ಸಾಲಿನ ಆದರ್ಶ ವಿದ್ಯಾಲಯದ 6 ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

4 years ago

ಗದಗ: 2022-23 ನೇ ಸಾಲಿಗಾಗಿ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಹಾಗೂ ರೋಣ ತಾಲೂಕಿನ ಇಟಗಿಯ ಸರಕಾರಿ ಆದರ್ಶ ವಿದ್ಯಾಲಯಕ್ಕೆ  6 ನೇ ತರಗತಿ ಪ್ರವೇಶ ಪಡೆಯಲು ಪರೀಕ್ಷಾ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾವಾಹಿನಿಯ ತಂತ್ರಾಂಶ ಬಳಸಿ ದಿನಾಂಕ 24-01-2022 ರಿಂದ 9-02-2022 ವರಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ಆಯಾ ತಾಲೂಕಿನ ವ್ಯಾಪ್ತಿಯಲ್ಲಿ 5 ನೇ ತರಗತಿ ವ್ಯಾಸಂಗ ಮಾಡುತ್ತಿರಬೇಕು. ಅರ್ಜಿಯೊಂದಿಗೆ ವ್ಯಾಸಂಗ ಪ್ರಮಾಣ ಪತ್ರ ಜಾತಿ/ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಇತ್ತೀಚಿನ 2 ಭಾವಚಿತ್ರ, ಅಂಗವಿಕಲ ಪ್ರಮಾಣ ಪತ್ರ ಹಾಗೂ ಚಾಲ್ತಿಯಲಿರುವ 2 ಮೊಬೈಲ್ ಫೋನ್ ಸಂಖ್ಯೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಹಾಗೂ ಅಭ್ಯರ್ಥಿಗಳು ರೋಣ, ಮುಂಡರಗಿ ತಾಲೂಕಿನಲ್ಲಿ ವ್ಯಾಸಂಗ ಮಾಡದಿದ್ದಲ್ಲಿ ಅದೇ ತಾಲೂಕಿನಲ್ಲಿ ವಾಸವಾಗಿರುವ ಪೋಷಕರ ರಹವಾಸಿ ಪತ್ರವನ್ನು ಹೊಂದಿರಬೇಕು.

ಪ್ರವೇಶ ಮತ್ತು ಪರೀಕ್ಷಾ ಪ್ರಕ್ರಿಯೆ ಸಂಪೂರ್ಣ ಮೊಬೈಲ್ ಸಂದೇಶದ ಮೂಲಕ ನಡೆಯುವುದರಿಂದ ಸೈಬರ್ ಸೆಂಟರ್‌ನ ಮೊಬೈಲ್ ನಂಬರ್‌ಗಳನ್ನು ಯಾವುದೇ ಕಾರಣಕ್ಕೂ ನೀಡುವಂತಿಲ್ಲ. ಹೆಚ್ಚಿನ ಮಾಹಿತಿಗಾಗಿ ಆದರ್ಶ ವಿದ್ಯಾಲಯಗಳ ಮುಖ್ಯೋಪಾಧ್ಯಾಯರನ್ನು ಸಂಪರ್ಕಸಬೇಕೆಂದು ಡಯಟ್ ಪ್ರಾಚಾರ್ಯ   ಎಸ್.ಡಿ ಗಾಂಜಿ ಹೇಳಿದ್ದಾರೆ.

Leave a Reply