ಧಾರವಾಡ: ಧಾರವಾಡ ಜಿಲ್ಲೆಯಾದ್ಯಂತ ಹಿಂಗಾರು ಹಂಗಾಮಿನಲ್ಲಿ ಕಡಲೆ ಬೀಜಗಳು 1,81,595 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮುಖ್ಯ ಹಿಂಗಾರು ಬೆಳೆ ಆಗಿರುವ ಕಡಲೆಯಲ್ಲಿ ಅಲ್ಲಲ್ಲಿ ಸೊರಗು ರೋಗದ ಬಾಧೆ ಕಂಡು ಬರುತ್ತಿದ್ದು, ಪ್ರಾರಂಭದಲ್ಲಿ ಸ್ಥಾನಿಕವಾಗಿ 1 ಅಥವಾ 2 ಗಿಡಗಳಲ್ಲಿ ಕಂಡುಬಂದು ನಂತರ ಸಂಪೂರ್ಣ ಹೊಲ ಬಾಧೆಗೆ ಒಳಪಡುವ ಸಾಧ್ಯತೆಯಿದೆ. ರೈತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.
- ಮೈಸೂರು ದಸರಾ: ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ
- ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಸ ಸಂಗ್ರಹಣೆ ಇಲ್ಲ
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
ಕಡಲೆಯಲ್ಲಿ ಸೊರಗು ರೋಗ ನಿರ್ವಹಣೆ: ಪ್ರತಿ ವರ್ಷ ಪದೇಪದೇ ಅದೇ ಕ್ಷೇತ್ರದಲ್ಲಿ ಕಡಲೆ ಬೆಳೆಯನ್ನು ಅಥವಾ ಮುಂಗಾರಿನಲ್ಲಿ ದ್ವಿದಳ ಧಾನ್ಯ ಬೆಳೆದು ಹಿಂಗಾರಿನಲ್ಲಿ ಕಡಲೆ ಬೆಳೆಯುವುದರಿಂದ ಸೊರಗು ರೋಗದ ಬಾಧೆ ಹೆಚ್ಚಾಗುತ್ತದೆ. ಆದ್ದರಿಂದ ಬೆಳೆ ಪರಿರ್ವತನೆ ಅವಶ್ಯ. ಸೊರಗು ರೋಗ ಬಾಧೆಗೊಳಗಾದ ಸಸಿಗಳನ್ನು ಪ್ರಾರಂಭಿಕ ಹಂತದಲ್ಲಿಯೇ ಕಿತ್ತು ನಾಶಪಡಿಸಬೇಕು. ನಂತರ ರೋಗ ಹರಡದಂತೆ ಸಂಯುಕ್ತ ಶಿಲೀಂಧ್ರನಾಶಕ (ಶೇ 37.5 ಕಾರ್ಬಕ್ಸಿನ್ + ಶೇ 37.5 ಥೈರಾಮ್ ಡಬ್ಲೂ.ಎಸ್.)ವನ್ನು 2 ಗ್ರಾಂ ಪ್ರತಿ ಲೀಟರ್ಗೆ ನೀರಿಗೆ ಬೆರಸಿ ಬಾಧಿತ ಸಸಿಗಳ ಸುತ್ತಮುತ್ತ ಬೇರುಗಳಿಗೆ ಉಣಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.




