ಶತಮಾನಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ ಆರುವರೆ ಕೋಟಿ ಕನ್ನಡಿಗರ ಸ್ವಾಯತ್ತ ಸಂಸ್ಥೆಯೇ ಹೊರೆತು ಅದು ಯಾವುದೇರಾಜಕೀಯ ಪಕ್ಷದ ಸಂಸ್ಥೆಯಲ್ಲಎಂಬುದನ್ನು @inckarnataka ಸರ್ಕಾರ ಅರ್ಥ ಮಾಡಿಕೊಳ್ಳಬೇಕು.
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
ಕಸಾಪ ಅಧ್ಯಕ್ಷರಾದ ಡಾ.ಮಹೇಶ್ ಜೋಶಿ ಅವರು ಯಾವುದೇ ರಾಜಕೀಯ ಪಕ್ಷದ ಪ್ರತಿನಿಧಿಯಾಗಿ ಕಾರ್ಯನಿರ್ವಾಹಿಸುತ್ತಿರಲಿಲ್ಲ. ಕನ್ನಡ ಮತ್ತು ಕನ್ನಡಿಗರ ಧ್ವನಿಯಾಗಿ ಈ ನೆಲದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡುತ್ತಿದ್ದರು. ಆದರೆ, ಅವರಿಗೆ ನೀಡಿದ್ದ ರಾಜ್ಯದ ಸಚಿವ ಸ್ಥಾನಮಾನ ಹಾಗೂ ಸವಲತ್ತುಗಳನ್ನು ಸರ್ಕಾರ ಹಿಂಪಡೆಯುವ ಮೂಲಕ ಸಣ್ಣತನವನ್ನು ತೋರಿರುವುದು ಕೇವಲ ಮಹೇಶ್ ಜೋಶಿಗೆ ಮಾತ್ರವಲ್ಲ,ಇದು ಇಡೀ ಕನ್ನಡಿಗರಿಗೆ ಮಾಡಿದ ಬಹುದೊಡ್ಡ ಅಪಮಾನ.
ಕಾಂಗ್ರೆಸ್ ಮುಖವಾಣಿಯಂತೆ ಕೆಲಸ ಮಾಡುವ ಕೆಲವು ಸ್ವಯಂಘೋಷಿತ ಬುದ್ಧಿಜೀವಿಗಳು, ಪಟ್ಟ ಭದ್ರಾಹಿತಾಸಕ್ತಿಗಳ ಮಾತುಕೇಳಿ CM@ Siddaramaiah ಅವರು ಇಂತಹ ಸಣ್ಣತನಕ್ಜೆ ಇಳಿದಿದ್ದು, ಅವರ ಹುದ್ದೆಗೆ ಶೋಭೆ ತರುವುದಿಲ್ಲ.
ಸಾಹಿತಿಗಳು, ಬರಹಗಾರರು, ಚಿಂತಕರು, ಕನ್ನಡ ನಾಡು ನುಡಿ ಪರವಾಗಿ ಧ್ವನಿಯಾಗಿರಬೇಕೇ ಹೊರತು, ತಮ್ಮ ಸ್ವಾರ್ಥಕ್ಕಾಗಿ ಆಸ್ಥಾನ ಹೊಗಳುಭಟ್ಟರಂತೆ ಕಾರ್ಯನಿರ್ವಾಹಿಸಬಾರದು. ತಕ್ಷಣವೇ ರಾಜ್ಯ ಸರ್ಕಾರ ಹಿಂಪಡೆದಿರುವ ಆದೇಶವನ್ನು ರದ್ದುಪಡಿಸಿ ಮಹೇಶ್ ಜೋಶಿ ಅವರಿಗೆ ರಾಜ್ಯ ಸಚಿವ ಸ್ಥಾನಮಾನವನ್ನು ಮುಂದುವರೆಸಬೇಕು.
ಇಷ್ಟಕ್ಕೂ ರಾಜ್ಯ ಸಚಿವ ಸ್ಥಾನಮಾನ ನೀಡಿರುವುದು ಕಸಾಪ ಕೇಂದ್ರ ಸಮಿತಿ ಅಧ್ಯಕ್ಷರಿಗೆ ಹೊರತು ಮಹೇಶ್ ಜೋಶಿ ಅಂತಲ್ಲ. ಸ್ವತಃ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರಾವಧಿಯಲ್ಲಿ ಕನ್ನಡದ ಪ್ರಾತಿನಿಧಿಕ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಅಪಮಾನವಾಗಿರುವುದು ಆಘಾತ, ಬೇಸರ ಉಂಟುಮಾಡಿದೆ.
ಇನ್ನು ಮುಂದಾದರೂ ಸರ್ಕಾರದ ಮಟ್ಟದಲ್ಲಿ ಸ್ಥಾನಮಾನ ಪಡೆಯಲು ತುದಿಗಾಲಲ್ಲಿ ನಿಂತಿರುವ “ಕಾವೇರಿ ” ಕಾಯುವುದನ್ನೇ ನಿತ್ಯದ ಕಾಯಕ ಮಾಡಿಕೊಂಡಿರುವವರು ನಿಮ್ಮ ಸ್ಥಾರ್ಥ ಸಾಧನೆಗಾಗಿ ಇನ್ನೊಬ್ಬರ ಬಗ್ಗೆ ಕಿವಿ ಕಚ್ಚುವುದನ್ನು ನಿಲ್ಲಿಸಿ. ಇದರಿಂದ ನಿಮಗೂ ಮತ್ತು ಕನ್ನಡಕ್ಕೂ ಒಳಿತು!
– ಎಂ ಪಿ ರೇಣುಕಾಚಾರ್ಯ, ಮಾಜಿ ಸಚಿವ




