ವಿ.ಎಸ್.ಕೃಷ್ಣಯ್ಯರ್ ಜನ್ಮ ಶತಮಾನೋತ್ಸವ

3 years ago

ಬೆಂಗಳೂರು: ಸಹನೆ, ತಾಳ್ಮೆ, ಪ್ರೀತಿಯಿಂದ ರಾಜಕೀಯದಲ್ಲಿ ಸಾಧನೆ ಮಾಡಬೇಕು  ಎಂದು ವಿ.ಎಸ್.ಕೃಷ್ಣಯ್ಯರ್ ರವರು ನನಗೆ ಮಾರ್ಗದರ್ಶನ ನೀಡಿದರು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಬೆಂಗಳೂರಿನ ಕೆ.ಆರ್.ಗಾಯನ ಸಮಾಜ ಸಭಾಂಗಣದಲ್ಲಿ ರಾಜಕೀಯ ಮುತ್ಸದಿ, ಗಾಂಧಿವಾದಿ, ಮಾಜಿ ಸಚಿವ ವಿ.ಎಸ್.ಕೃಷ್ಣಯ್ಯರ್ ರವರ ಜನ್ಮಶತಮಾನೋತ್ಸವ ಸಮಿತಿ ಮತ್ತು ನ್ಯಾಷನಲ್ ಕೋ-ಅಪರೇಟಿವ್ ಸಹಯೋಗದಲ್ಲಿ ವಿ.ಎಸ್.ಕೃಷ್ಣಯ್ಯರ್ ಜನ್ಮ ಜನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು,  ವಿ.ಎಸ್.ಕೃಷ್ಣಯ್ಯರ್ ಸರಳ, ಸಜ್ಜನ ರಾಜಕಾರಣಿ. ನನಗೆ  ಕೃಷ್ಣಯ್ಯರ್ ರವರ  ಒಡನಾಟದಿಂದ ರಾಜಕೀಯ ಸೇವೆ ಮಾಡುವಲ್ಲಿ ಉತ್ತೇಜನ ಸಿಕ್ಕಿತ್ತು. ಅವರು ಕಾಲವಾದ ಮೇಲೆ ಅವರ ಮಾಡಿದ ಸಾಧನೆ ಮಾಡಿದ ಹೆಜ್ಜೆ ಗುರುತುಗಳು ಜನಗಳ ಮನಸ್ಸಿನಲ್ಲಿ ಉಳಿದಿದೆ ಎಂದರು.

ಇಂದಿನ ಸಮಾಜದಲ್ಲಿ ಕೃಷ್ಣಯ್ಯರ್ ರವರ ಜೀವನ ಸಾಧನೆ ಮುಂದಿನ ಜನಾಂಗ ತಿಳಿಯುವಂತೆ ಮಾಡಲು ಅವರ ಜೀವನ ಚರಿತ್ರೆ ಪಸ್ತಕ ಹೊರತರಲಾಗುವುದು. ಮುಂದಿನ ದಿನಗಳಲ್ಲಿ ನಗರ ಕೇಂದ್ರ ಭಾಗದಲ್ಲಿ ಕಂಚಿನ ಪ್ರತಿಮೆ ಸ್ಥಾಪಿಸಲಾಗುವುದು. ವಿ.ಎಸ್.ಕೃಷ್ಣಯ್ಯರ್ ರವರ ರಾಜಕೀಯ ಜೀವನ ಮತ್ತು ಜನ ಸೇವೆಯನ್ನು ನನ್ನ ಜೀವನದಲ್ಲಿ ಆಳವಡಿಸಿಕೊಂಡಿದ್ದೇನೆ ಎಂದರು.

99ರಲ್ಲಿ ಪಕ್ಷೇತರನಾಗಿ ವಿಧಾನಸಭಾ ಸದಸ್ಯನಾಗಿ ಆಯ್ಕೆಯಾಗಲು ವಿ.ಎಸ್.ಕೃಷ್ಣಯ್ಯರ್ ರವರು ಸ್ಪೂರ್ತಿ, ಪೇರಣೆಯಾಗಿದ್ದಾರೆ. ರಾಜಕೀಯದಲ್ಲಿ  ಸಹನೆ, ತಾಳ್ಮೆ, ಪ್ರೀತಿ ಮೂರನ್ನು ಆಳವಡಿಕೊಂಡರೆ ಜೀವನದಲ್ಲಿ ಸಾಧನೆ ಮಾಡಬಹುದು ಎಂದು ವಿ.ಎಸ್.ಕೃಷ್ಣಯ್ಯರ್ ರವರು ನನಗೆ ರಾಜಕೀಯ ಪಾಠ ಕಲಿಸಿದರು ಎಂದರು.

ಶಾಸಕ ರವಿಸುಬ್ರಮಣ್ಯ ಮಾತನಾಡಿ, ನನ್ನ ರಾಜಕೀಯ ಏಳಿಗೆಗಾಗಿ  ವಿ.ಎಸ್.ಕೃಷ್ಣಯ್ಯರ್ ರವರ ಆಶೀರ್ವಾದವಿದೆ. ಅವರ ಜೀವನ ಆದರ್ಶ ಎಲ್ಲರು ಪಾಲಿಸಬೇಕು ಎಂದರು.

ಹಿರಿಯ ರಾಜಕಾರಣಿ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಉತ್ತಮ ವ್ಯಕ್ತಿತ್ವವುಳ್ಳ ಸರಳ ರಾಜಕಾರಣಿ. ಅದೈತ ಸಿದ್ದಾಂತವನ್ನು ಆಳವಡಿಸಿಕೊಂಡ ಸಾಧಕ. ಕೃಷ್ಣಯ್ಯರ್ ರವರ ಮನೆ ತಿಂಡಿ, ಕಾಫಿಯ ಜೊತೆ ಆತಿಥ್ಯ ಸಿಗುತ್ತಿತು. ಕೃಷ್ಣಯ್ಯರ್ ರವರ ಜೀವನ ಚರಿತ್ರೆಯನ್ನು ಇಂದಿನ ಪಠ್ಯಪುಸ್ತಕದಲ್ಲಿ ಸೇರಿಸಬೇಕು. ಕೊನೆಗಾಲದಲ್ಲಿ ಕೃಷ್ಣಯ್ಯರ್ ರವರ ಬಳಿ ಪಿಂಚಣಿ ಹಣ ಬಿಟ್ಟರೆ ಏನು ಇರಲಿಲ್ಲ. ಯಡಿಯೂರಪ್ಪ ಮತ್ತು ವಿ.ಸೋಮಣ್ಣರವರು ಸಹಾಯದಿಂದ ಕೃಷ್ಣಯ್ಯರ್ ರವರ ಆಸ್ಪತ್ರೆಯ ಬಿಲ್ಲು 13 ಲಕ್ಷ ಸರ್ಕಾರ ಪಾವತಿಸಲು ಸಹಕಾರ ನೀಡಿದರು. ಕೃಷ್ಣಯ್ಯರ್ 4 ತಿಂಗಳು ಮಂತ್ರಿಯಾಗಿ ಅಪಾರ ಸಾಧನೆ ಮಾಡಿದರು ಎಂದರು.

ಬಿ.ಎಲ್.ಶಂಕರ್ ಮಾತನಾಡಿ, ಪ್ರಾಮಾಣಿಕ ಹೋರಾಟಗಾರ, ಜನ ಪ್ರೀತಿ ಗಳಿಸಿದ ವ್ಯಕ್ತಿ ವಿ.ಎಸ್.ಕೃಷ್ಣಯ್ಯರ್ ರವರು. ನಾಡಿನ ಹಲವಾರು ಯುವಕರಿಗೆ ಹೋರಾಟಕ್ಕೆ ಶಕ್ತಿ ತುಂಬಿದರು. ಇಂದು ಕಾಂಗ್ರೆಸ್,ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ಪಕ್ಷದಲ್ಲಿ ಜನತಾ ಪರಿವಾರದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಪಂಡಿತ್ ಜವಾಹರಲಾಲ್ನೆಹರು, ಅಟಲ್ ಬಿಹಾರಿ ವಾಜಪೇಯಿ, ರಾಮ್ ಮನೋಹರ್ ಲೋಹಿಯ ಅವರ ಪಕ್ಷದ ಸಿದ್ದಾಂತಗಳಿಗೆ ಹೋರಾಟ ಮಾಡುತ್ತಿದ್ದರು ಎಂದರು.

ಯು.ಬಿ.ವೆಂಕಟೇಶ್ ರವರು ಮಾತನಾಡಿ, ಕೃಷ್ಣ ಅಯ್ಯರ್ ಅಪರೂಪದ ವ್ಯಕ್ತಿತ್ವ ಸರಳ ರಾಜಕಾರಣಿ. ಬೆಂಗಳೂರುನಗರ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಬಿ.ಬಿ.ಎಂ.ಪಿ. ಕೇಂದ್ರ ಕಛೇರಿ ಅಥವಾ ಬಸವನಗುಡಿಯಲ್ಲಿ ವಿ.ಎಸ್.ಕೃಷ್ಣಯ್ಯರ್ ರವರ ಪ್ರತಿಮೆ ಸ್ಥಾಪನೆ ಮಾಡಬೇಕು ಎಂದರು.

ಹೆಚ್.ಸಿ.ಕೃಷ್ಣ, ಜೆ.ಹುಚ್ಚಪ್ಪ, ಬಿ.ಎಸ್.ಸತ್ಯನಾರಾಯಣ್,
ಪಾಲನೇತ್ರ, ಎಂ. ವೆಂಕಟೇಶ್‌ (ಸಂಗಾತಿ), ನಾಗರಾಜ್‌, ಎಸ್. ವಿಜಯಕುಮಾರ್, ಎ.ಹೆಚ್. ಬಸವರಾಜ್ ಕೆ.ಎಸ್. ನಾಗರಾಜ್‌,  ಸುಮಿತ್ರ ಕೃಷ್ಣಯ್ಯರ್ ಮೊದಲಾದವರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಮತ್ತು 15 ಸಾಧಕರಿಗೆ ಸನ್ಮಾನಿಸಿದರು.

Leave a Reply