ಕೊಪ್ಪಳ: ನಮ್ಮ ನಾಡಿನ ನೆಲದ ಮೂಲ ಸಂಸ್ಕೃತಿ, ಮೂಲ ಜನಪದವನ್ನು ಉಳಿಸಿಬೆಳೆಸೋಣ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಪ್ಪ ವಡಿಗೇರಿ ಹೇಳಿದರು.
- ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಫೇಕುಗಳ ಕಾಟ!
- ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಕೆ: ಆರ್ ಅಶೋಕ್
- ನವೆಂಬರ್ 07 ರಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನ
- ಆ್ಯಕ್ಸಿಡೆಂಟಲ್ ಸಿಎಂ ಬೊಮ್ಮಾಯಿ ಅವರೇ ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ: ಬಿ ಕೆ ಹರಿಪ್ರಸಾದ್
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ತಳುವಗೇರಾ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಜನಜಾಗೃತಿ ಕಲಾ ರಂಗ ಸಂಸ್ಥೆ (ರಿ) ಕುಷ್ಟಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ 2023-24ನೇ ಸಾಲಿನ ಸಂಘ-ಸಂಸ್ಥೆಗಳ ಧನಸಹಾಯ ಯೋಜನೆ ಅಡಿಯಲ್ಲಿ ನಡೆದ ಮೂಲ ಜನಪದ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರ ಮಾತಿನೊಂದಿಗೆ ಬೆಳೆದು ಉಳಿದು ಬಂದಿರುವ ಮೂಲ ಜನಪದ ಸಾಹಿತ್ಯ ನಮ್ಮ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ನಮ್ಮ ಬದುಕಿನ ಕನ್ನಡಿಯಾಗಿದೆ ಹಾಗೂ ನಮ್ಮ ನೆಲಮೂಲ ಸಂಸ್ಕೃತಿಯಾಗಿದೆ. ಪ್ರಸ್ತುತ ದಿನಮಾನದಲ್ಲಿ ಜನಪದ ಗೀತೆಗಳ ಹೆಸರಲ್ಲಿ ದ್ವಂದ್ವಾರ್ಥದ, ಯುವ ಜನತೆಯ ದಾರಿ ತಪ್ಪಿಸುವ ಹಾಡುಗಳು ಬರುತ್ತಿವೆ. ಅವೆಲ್ಲಾ ಜನಪ್ರಿಯ ಗೀತೆ, ಟ್ರ್ಯಾಕ್ಟರ್ ಪದಗಳೇ ಆಗಿವೆ ಹೊರತು ಮೂಲ ಜನಪದಗೀತೆಗಳು ಅಲ್ಲ. ನಮ್ಮ ಸಂಸ್ಕೃತಿ, ಜನಪದ ಕಲೆಗಳನ್ನು ಉಳಿಸಲು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು, ಯುವ ಪೀಳಿಗೆಗೆ ಸರಕಾರ ಸಂಘ-ಸಂಸ್ಥೆಗಳ ಧನಸಹಾಯ ಯೋಜನೆಗಳ ಮೂಲಕ ಇಂತಹ ಮಹತ್ವಪೂರ್ಣ ಕಾರ್ಯಕ್ರಮನ್ನು ಏರ್ಪಡಿಸಿ ಪ್ರೋತ್ಸಾಹ ನೀಡುತ್ತಿದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯ ಶರಣಗೌಡ ಮಾಲಿಪಾಟೀಲ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಅಮೀರ್ ರಂಜಾನ್ ಮುಲ್ಲಾ, ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಮೇಳಿ ಹಾಗೂ ಮತ್ತಿತರರು ಹಾಜರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿಂಗಪ್ಪ ಸೊಲ್ಲಾಪೂರ ತಂಡದವರಿಂದ ಗೀಗೀ ಪದಗಳು, ದುರಗಪ್ಪ ಅಡವಿಭಾವಿ ಅವರಿಂದ ರಂಗಗೀತೆಗಳು, ಶರಣಪ್ಪ ಬನ್ನಿಗೋಳ ಅವರಿಂದ ಸುಗ್ಗಿಯ ಪದಗಳು, ಗುರಪ್ಪ ಉಪನಾಳ ತಂಡದವರಿಂದ ಭಜನಾಪದ ಮತ್ತು ದೇವೇಂದ್ರಪ್ಪ ಕಮ್ಮಾರ ಅವರಿಂದ ತತ್ವಪದಗಳ ಕಾರ್ಯಕ್ರಮಗಳನ್ನು ನಡೆಸಲಾಯಿತು.




