ಬಿಜಾಪುರ ಜಿಲ್ಲಾ ನೂತನ ಅಧ್ಯಕ್ಷರಾಗಿ ಅತಾವುಲ್ಲಾ ದ್ರಾಕ್ಷಿ ಆಯ್ಕೆ
ಗೌರಿ ಲಂಕೇಶರನ್ನು ಗುಂಡಿಕ್ಕಿ ಹತ್ಯೆಗೈದ ಆರೋಪಿಗಳಿಗೂ ಬಾಗಲಕೋಟೆಯಲ್ಲಿ ಬಂದೂಕು ತರಬೇತಿ ನೀಡಿದ ಆರೋಪಿಗಳಿಗೂ ಸಂಬಂದವಿದೆಯೇ? ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಲಿ : ಅಪ್ಸರ್ ಕೊಡ್ಲಿಪೇಟೆ
ಬಿಜಾಪುರ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಿಜಾಪುರ ಜಿಲ್ಲೆಯ 2024-27 ರ ಅವಧಿಗೆ ನೂತನ ಅಧ್ಯಕ್ಷರಾಗಿ ಅತಾವುಲ್ಲಾ ದ್ರಾಕ್ಷಿ, ಉಪಾಧ್ಯಕ್ಷರಾಗಿ ಸಮೀರ್ ಹುಣಸಗಿ ಮತ್ತು ನಾಜಿಯಾ ಮುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ನಿಸಾರ್ ಅಹ್ಮದ್ ಮನಿಯಾರ್ ಮತ್ತು ಮೆಹಬೂಬ್ ಕೋಲಾರ್, ಕಾರ್ಯದರ್ಶಿಯಾಗಿ ಅಡ್ವೋಕೇಟ್ ಸಮೀಉಲ್ಲಾ ಬಡೇಘರ್, ಕೋಶಾಧಿಕಾರಿಯಾಗಿ ಇಸಾಕ್ ಸಯ್ಯದ್ ಹಾಗೂ ಸಮಿತಿ ಸದಸ್ಯರುಗಳಾಗಿ ಅಡ್ವೋಕೇಟ್ ಗೌಸ್ ಜಕಾತಿ, ಎಜಾಜ್ ಮನಿಯಾರ್, ಮುನಾಫ್ ಪಠಾಣ, ಸೈಫನ್ ಮುಲ್ಲಾ, ಉಮರಖಾನ್ ಪಠಾಣ್, ಯಾಸಿರ್ ಇನಾಮದಾರ್, ನಾಮನಿರ್ದೇಶಿತ ಸದಸ್ಯರಾಗಿ ಉಮರ್ ಪುಣೇಕರ್ ಆಯ್ಕೆಯಾಗಿದ್ದಾರೆ.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಜಿಲ್ಲಾ ಸಮಿತಿಯ ಚುನಾವಣಾ ಪ್ರಕ್ರಿಯೆಯನ್ನು, ಎಸ್‌ಡಿ ಪಿಐ ರಾಜ್ಯ ಕಾರ್ಯದರ್ಶಿ ರಂಜಾನ್ ಕಡಿವಾಳ್ ನಡೆಸಿಕೊಟ್ಟರು.
ಜಿಲ್ಲಾ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಬಾಗಲಕೋಟೆಯ ಜಮಖಂಡಿಯಲ್ಲಿ ನಡೆದಿದ್ದ ಬಂದೂಕು ತರಬೇತಿಗೆ ಸಂಬಂಧಿಸಿದಂತೆ ಕೇವಲ 27 ಜನರ ವಿರುದ್ಧ FIR ದಾಖಲಿಸಿ ಕೈ ತೊಳೆದುಕೊಂಡಿರುವ ಸರಕಾರ ಯಾಕೆ ಈ ಪ್ರಕರಣವನ್ನು NIA ತನಿಖೆ ವಹಿಸಿಲ್ಲ? ಎಂದು ಪ್ರಶ್ನಿಸಿದರು.
ಬಂದೂಕು ತರಬೇತಿಯಂತಹ ಶಿಬಿರದ ಮೂಲಕ ಭಯವನ್ನು ಹುಟ್ಟಿಸುವ ಕೆಲಸ ನಡೆಯುತ್ತಿದ್ದರೂ ಗೃಹ ಇಲಾಖೆ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದರು.
ಸನಾತನ ಸಂಸ್ಥೆಯ ಕಾರ್ಯಕರ್ತರು 2017 ಸೆಪ್ಟೆಂಬರ್ 5 ರಂದು ದಿಟ್ಟ ಪತ್ರಕರ್ತೆಯಾಗಿದ್ದ ಗೌರಿ ಲಂಕೇಶರನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆಗೆ ಇದೇ ರೀತಿಯ ಬಂದೂಕು ತರಬೇತಿ ನೀಡಲಾಗಿತ್ತು ಎಂದು SIT ತನಿಖೆಯಿಂದ ತಿಳಿದುಬಂದಿದೆ. ಈತ ವಿಚಾರವಾದಿ ನರೇಂದ್ರ ದಾಬೋಲ್ಕರ್ ರನ್ನು ಗುಂಡಿಕ್ಕಿ ಕೊಂದ ಪ್ರಮುಖ ಆರೋಪಿ ಕೂಡ ಆಗಿದ್ದಾನೆ ಇವನಿಗೂ ಈಗ ಬಂದೂಕು ತರಬೇತಿ ನೀಡುತ್ತಿರುವವರಿಗೂ ಸಂಬಂದವಿದೆಯೇ? ಎಂಬ ಬಗ್ಗೆ ಪೊಲೀಸ್ ಇಲಾಖೆ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಹೋರಾಟಗಾರ್ತಿ ವಿಚಾರವಾದಿ ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿಗಳಿಗೆ “ವಿಚಾರಣೆ ಶೀಘ್ರದಲ್ಲಿ ಮುಕ್ತಾಯಗೊಳ್ಳುವ ಸಾಧ್ಯತೆ ಇಲ್ಲ” ಎಂಬ ಕಾರಣ ನೀಡಿ ಜಾಮೀನು ಮಂಜೂರು ಗೊಳಿಸಿರುವುದು ಸ್ವೀಕಾರಾರ್ಹವಲ್ಲ. ಜನಪರ ಹೋರಾಟಗಾರರ ಸಾಲು ಸಾಲು ಜಾಮೀನು ಅರ್ಜಿಗಳು ಧೂಳು ಮುಕ್ಕುತ್ತಿವೆ. ಆದರೆ ಗೌರಿ ಹತ್ಯೆ ಆರೋಪಿಗಳಿಗೆ ಸುಲಭದಲ್ಲಿ ಜಾಮೀನು ದೊರಕುತ್ತಿರುವುದು ವಿಷಾದನೀಯ. ಗೌರಿಹತ್ಯೆ ಆರೋಪಿಗಳಿಗೆ ನೀಡಿರುವ ಜಾಮೀನು ಇವರಲ್ಲಿ ಇನ್ನಷ್ಟು ಕೊಲೆಗಳನ್ನು ನಡೆಸಲು ಧೈರ್ಯ ನೀಡಿದಂತಾಗುತ್ತದೆ. ಹಾಗಾಗಿ ಜಾಮೀನು ರದ್ದು ಮಾಡುವಂತೆ ತಕ್ಷಣ ಈ ಬಗ್ಗೆ ಸರಕಾರ ಮೇಲ್ಮನವಿ ಸಲ್ಲಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಪ್ರತಿನಿಧಿ ಸಭೆಯಲ್ಲಿ ಪಕ್ಷದ ಕಳೆದ ಒಂದುವರೆ ವರ್ಷಗಳ ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಿ ಅಗತ್ಯ ಸಲಹೆಗಳನ್ನು ಪರಿಗಣಿಸಿ ಅನುಮೋದನೆ ನೀಡಲಾಯಿತು. ಬಿಜಾಪುರ ಜಿಲ್ಲೆಯ ರಾಜಕೀಯ ವಿದ್ಯಮಾನಗಳ ಚರ್ಚೆ ನಡೆಸಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಿಷ್ಠಗೊಳಿಸಲು ಚರ್ಚೆ ನಡೆಸಲಾಯಿತು.




