ಸಂಘಟನೆಯ ಬಲವರ್ಧನೆಗೆ ಪ್ರಾಮಾಣಿಕ ಚಿಂತನೆ
ಗದಗ: ಎಸ್‌ಡಿಪಿಐ ಗದಗ ಜಿಲ್ಲಾ ಸಮಿತಿಯ ವಿಶೇಷ ಸಭೆ ಜಿಲ್ಲಾ ಕಛೇರಿಯಲ್ಲಿ ಜರಗಿತು. ಈ ಸಭೆಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಅಪ್ಸರ್ ಕೆ.ಆರ್.ನಗರ ಉಪಸ್ಥಿತರಿದ್ದು, ಪ್ರಮುಖ ಮಾರ್ಗದರ್ಶನ ನೀಡಿದರು. ಸಭೆಯನ್ನು ಜಿಲ್ಲಾ ಸಮಿತಿ ಅಧ್ಯಕ್ಷ ಬಿಲಾಲ್ ಗೋಕಾವಿ ಅಧ್ಯಕ್ಷತೆ ವಹಿಸಿದ್ದರು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಸಭೆಯ ಆರಂಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಫ್ಫಾನ್ ಸ್ವಾಗತವನ್ನು ನೆರವೇರಿಸಿದರು. ನಂತರ ನಡೆದ ಸಭೆಯಲ್ಲಿ ಪಕ್ಷದ ಪ್ರಸ್ತುತ ಸ್ಥಿತಿಗತಿಯ ಮೌಲ್ಯಮಾಪನದೊಂದಿಗೆ, ಮುಂಬರುವ ತಿಂಗಳುಗಳಲ್ಲಿ ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಪಕ್ಷದ ಸಂಘಟನೆ ಬಲವರ್ಧನೆ, ಗ್ರಾಮ ಮಟ್ಟದ ಬೂತ್ ಸಮಿತಿಗಳ ಚಟುವಟಿಕೆ, ಯುವ ಶಕ್ತಿ ಸಂಯೋಜನೆ, ಮತ್ತು ಸ್ಥಳೀಯ ರಾಜಕೀಯ ಸವಾಲುಗಳಿಗೆ ಸಂಘಟಿತವಾಗಿ ಪ್ರತಿಕ್ರಿಯಿಸುವ ಕುರಿತಂತೆ ಚರ್ಚಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಅಪ್ಸರ್ ಕೊಡ್ಲಿಪೇಟೆ, ಪಕ್ಷದ ಕಾರ್ಯಕರ್ತರು ಸಂಘಟನೆಯ ಮೂಲ ತತ್ವಗಳನ್ನು ಅರ್ಥಮಾಡಿಕೊಳ್ಳಬೇಕು. ಪ್ರತಿ ಚಟುವಟಿಕೆಯಲ್ಲಿ ರಾಜಕೀಯ ನೈತಿಕತೆಯ ಪ್ರತಿಬಿಂಬವಿರಬೇಕು. ನಮ್ಮ ಹೋರಾಟ ಜನಪರ, ನ್ಯಾಯಪರ ಮತ್ತು ಪ್ರಜಾಪ್ರಭುತ್ವ ಪರವಾಗಿರಬೇಕು. ಸಂಘಟನೆಯ ದೃಢತೆಯೇ ಸಮಾಜದ ಬದಲಾವಣೆಗೆ ಹಾದಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಪ್ರಮುಖ ಮುಖಂಡರಾದ ಅನ್ವರ್ ಬಾಗೇವಾಡಿ, ಹಿದಾಯತುಲ್ಲಾ ಕಾಗದಗಾರ, ಜಿಲಾನಿ ಮುಲ್ಲಾ, ಸಮೀರ್ ಕೊಟ್ಟೂರ್, ಫಯಾಜ್, ಮುಸ್ತಾಕ್ ಕಟ್ಟಿಮನಿ, ಮುಸ್ತಾಕ್ ಹೊಸಮನಿ ಮತ್ತು ಜಿಲಾನಿ ಲಕ್ಕುಂಡಿ ಮೊದಲಾದವರು ಹಾಜರಿದ್ದರು.




