ಕಾರ್ಯಾಗಾರವು ಪಕ್ಷದ ಸಂಘಟನಾ ಬಲವರ್ಧನೆಗೆ, ನಿರ್ಧಿಷ್ಟವಾಗಿ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಸಿದ್ಧತೆಗಾಗಿ ಬಹುಮುಖ್ಯ ಹೆಜ್ಜೆಯಾಗಿದೆ: ಅಪ್ಸರ್ ಕೊಡ್ಲಿಪೇಟೆ
ಬಿಜಾಪುರ: ಸೋಷಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಬಿಜಾಪುರ ಜಿಲ್ಲೆ ಸಮಿತಿ ವತಿಯಿಂದ ಬಿಜಾಪುರದಲ್ಲಿ ಚುನಾವಣಾ ನಿರ್ವಹಣಾ ತರಬೇತಿ ಕಾರ್ಯಾಗಾರವು ನಡೆಯಿತು.
- ಭದ್ರೆ ಬಯಲುಸೀಮೆಗೆ ಹರಿದು ಬಂದಿರುವುದು ರೈತರ ಪಾಲಿಗೆ ಹೊಸ ಆಶಾಕಿರಣ: ಅಪ್ಸರ್ ಕೊಡ್ಲಿಪೇಟೆ
- ಹಸಿ ತ್ಯಾಜ್ಯದಿಂದ ವಿದ್ಯುತ್ ತಯಾರಿಸುತ್ತಿರುವ ಏಕೈಕ ವಾರ್ಡ್ ಯಡಿಯೂರು
- ಕಪ್ಪುಪಟ್ಟಿ ಧರಿಸಿ ಬಿಜೆಪಿ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ
- ಪ್ರಿಯಾಂಕ್ ಖರ್ಗೆ ಅವರ ಗೃಹ ಇಲಾಖೆ ಯಾರನ್ನು ರಕ್ಷಿಸುತ್ತಿದೆ?: ಆರ್ ಅಶೋಕ್
- ಜಾಣ ಕುರುಡು, ಜಾಣ ಮೌನದ ಬಿಜೆಪಿ ಪಕ್ಷ ತಂದೆ ಮಕ್ಕಳ ಪಕ್ಷ: ನೆ.ಲ.ನರೇಂದ್ರಬಾಬು
ಈ ಕಾರ್ಯಾಗಾರದಲ್ಲಿ ಚುನಾವಣಾ ಪ್ರಕ್ರಿಯೆಯ ಪ್ರಾಮಾಣಿಕತೆ, ಪರಿಣಾಮಕಾರಿ ನಿರ್ವಹಣೆ, ಮತದಾರರ ಪಟ್ಟಿಯಲ್ಲಿ ಹೆಸರುಗಳ ಸೇರ್ಪಡೆ ವಿಳಾಸ ಬದಲಾವಣೆ, ಬೂತ್ ನಿರ್ವಹಣೆ ಮತ್ತು ಪಕ್ಷದ ಕಾರ್ಯಕರ್ತರ ಜವಾಬ್ದಾರಿಯ ಕುರಿತು ತರಬೇತಿ ನೀಡಲಾಯಿತು.
ಪಕ್ಷದ ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರ ಮಟ್ಟದ ಮುಖಂಡರು, ಬೂತ್ ಉಸ್ತುವಾರಿಗಳು ಮತ್ತು ಆಯ್ದ ಕಾರ್ಯಕರ್ತರು ತೊಡಗಿಸಿಕೊಂಡ ಈ ತರಬೇತಿ ಕಾರ್ಯಾಗಾರ ಪಕ್ಷದ ಸಂಘಟನಾ ಬಲವರ್ಧನೆಗೆ, ನಿರ್ಧಿಷ್ಟವಾಗಿ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆಗಾಗಿ ಬಹುಮುಖ್ಯ ಹೆಜ್ಜೆಯಾಗಿದೆ ಎಂದು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ರಾಜ್ಯ ಚುನಾವಣಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ ಹೇಳಿದರು.
ತರಬೇತಿಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ ಹಾಗೂ ರಾಜ್ಯ ಚುನಾವಣಾ ಉಪ ಸಮಿತಿ ಸದಸ್ಯರಾದ ಅಬ್ರಾರ್ ಅಹ್ಮದ್ ನಡೆಸಿಕೊಟ್ಟರು.
ಕಾರ್ಯಾಗಾರದಲ್ಲಿ, ಮುದ್ದೇಬಿಹಾಳ, ಸಿಂದಗಿ, ಬಿಜಾಪುರ ಸಿಟಿ, ಬಸವನ ಬಾಗೇವಾಡಿ, ದೇವರ ಹಿಪ್ಪರಗಿ, ಬಬಲೇಶ್ವರ, ನಾಗಠಾಣ, ಭಾಗದಿಂದ ಪಕ್ಷದ ವಿವಿಧ ಉಸ್ತುವಾರಿಗಳ ಸಹಿತ ವಿಮೆನ್ ಇಂಡಿಯಾ ಮೂಮೆಂಟ್ ನ ನಾಯಕಿಯರು ಪಾಲ್ಗೊಂಡಿದ್ದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಅಥಾವುಲ್ಲಾ ದ್ರಾಕ್ಷಿ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಸಾರ್ ಮನಿಯಾರ್, ಜಿಲ್ಲಾ ಚುನಾವಣಾ ಉಸ್ತುವಾರಿ ಸಮೀರ್ ಹುಣಸಗಿ ಹಾಜರಿದ್ದರು.




