ಗಾಂಧಿ ಭಾರತದ ಕನಸು ನನಸಾಗಬೇಕಾದರೆ ಖಾದಿ ಉದ್ಯಮ ಉಳಿಯಬೇಕು ಹಾಗೂ ಬೆಳೆಯಬೇಕು
ಬೆಳಗಾವಿಯಲ್ಲಿ 1924ರಲ್ಲಿ ಮಹಾತ್ಮ ಗಾಂಧೀಜಿರವರು ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷತೆಯನ್ನ ವಹಿಸಿದ್ದ ಹಿನ್ನೆಲೆಯಲ್ಲಿ ಆ ಒಂದು ಕಾರ್ಯಕ್ರಮದ ನೂರರ ನೆನಪಿನ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರ ಗಾಂಧಿ ಭಾರತ ಎಂಬ ಘೋಷಣೆ ಅಡಿಯಲ್ಲಿ ವರ್ಷದ ಪೂರ್ಣ ಆಚರಿಸಲು ಸಿದ್ಧತೆಗಳು ನಡೆಸುತ್ತಿರುವುದು ಇದಕ್ಕೆ ಚಾಲನೆಯನ್ನು ನೀಡಿರುವುದು ಸಂತೋಷದ ಸಂಗತಿ.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಗಾಂಧೀಜಿರವರ 1924ರ ಬೆಳಗಾವಿ ಅಧಿವೇಶನದ ಪ್ರಮುಖವಾದಂತಹ ಉದ್ದೇಶ ಮತ್ತು ಆಶಯ ಖಾದಿ ಪ್ರಚಾರ ಮತ್ತು ಅಸ್ಪೃಶ್ಯತೆಯ ನಿವಾರಣೆ.
ರಾಜ್ಯ ಸರ್ಕಾರ ಖಾದಿ ಉದ್ಯಮವನ್ನು ಉಳಿಸಬೇಕು ಮತ್ತು ಬೆಳೆಸಬೇಕು. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತದೆ. ರೈತರು ಮತ್ತು ನೇಕಾರರು ಹೆಚ್ಚುಹೆಚ್ಚು ಪ್ರಮಾಣದಲ್ಲಿ ಉದ್ಯೋಗವನ್ನು ಪಡೆಯುವುದರ ಜೊತೆಗೆ ತಮ್ಮ ಆರ್ಥಿಕತೆಯನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ಯೋಚಿಸಿ ಕಾರ್ಯಕ್ರಮಗಳನ್ನು ರೂಪಿಸಬೇಕು.
ಕರ್ನಾಟಕ ರಾಜ್ಯದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸರಿಸುಮಾರು 10 ಲಕ್ಷ ಸರ್ಕಾರಿ ನೌಕರರು ಇದ್ದಾರೆ ಹಾಗೂ ಸರ್ಕಾರದ ಅಧೀನದಲ್ಲಿರುವ ವಸತಿ ನಿಲಯಗಳಿವೆ. ಇಲ್ಲಿ ರಾಜ್ಯ ಸರ್ಕಾರ ಪ್ರತಿಯೊಬ್ಬ ನೌಕರರು ವರ್ಷದಲ್ಲಿ ಕನಿಷ್ಠ ಪಕ್ಷ ಎರಡು ಜೊತೆಯ ವಸ್ತ್ರವನ್ನ ಖಾದಿ ಬಟ್ಟೆಯನ್ನೇ ಖರೀದಿಸಬೇಕೆಂಬ ನಿಯಮವನ್ನು ಮಾಡಿ ರೈತರ ಮತ್ತು ನೇಕಾರರಹಿತ ದೃಷ್ಟಿಯಿಂದ ಇದನ್ನು ಪಾಲಿಸುವಂತೆ ಮನವಿಯನ್ನ ಮಾಡಬೇಕು.
ಜೊತೆಗೆ ರಾಜ್ಯ ಸರ್ಕಾರದ ವಸತಿ ನಿಲಯಗಳು ವಿದ್ಯಾರ್ಥಿಗಳಿಗೆ ನೀಡುವ ಸಮವಸ್ತ್ರಗಳು ಎಲ್ಲರೂ ಸಹ ಖಾದಿ ಉತ್ಪನ್ನಗಳನ್ನೇ ಅವಶ್ಯಕತೆ ಇರುವ ಸಂದರ್ಭದಲ್ಲಿ ಖರೀದಿಸಬೇಕೆಂಬ ನಿಯಮವನ್ನ ಮಾಡಬೇಕು. ಇದರಿಂದ ಸರ್ಕಾರಕ್ಕೆ ಯಾವುದೇ ರೀತಿಯ ಹಣಕಾಸಿನ ನೆರವು ಪಡೆಯುವ ಆಗುವುದಿಲ್ಲ. ಆದೇಶಗಳಿಂದ ಸಾಕಷ್ಟು ಬದಲಾವಣೆಗಳನ್ನು ತರಬಹುದು.
ಮಹಾತ್ಮ ಗಾಂಧೀಜಿರವರ ಮತ್ತೊಂದು ಪ್ರಮುಖವಾದ ಅಂತಹ ಬದುಕಿನ ಉದ್ದೇಶದಲ್ಲಿ ಅಸ್ಪೃಶ್ಯತೆಯ ಹೆಸರಿನಲ್ಲಿ ನಡೆಯುತ್ತಿರುವಂತಹ ಎಲ್ಲಾ ಅನಿಷ್ಟಗಳನ್ನು ಕೊನೆಗಾಣಿಸಬೇಕು ಎನ್ನುವುದಾಗಿತ್ತು. ಈ ಕಾರಣಕ್ಕಾಗಿ ಅವರು ಅಸ್ಪೃಶ್ಯರಿಗೆ ಪ್ರವೇಶವಿಲ್ಲದ ಉಡುಪಿಯ ಕೃಷ್ಣ ಮಠಕ್ಕೆ ಮತ್ತು ತಮಿಳುನಾಡಿನ ಮಧುರೆ ಮೀನಾಕ್ಷಿ ದೇವಸ್ಥಾನಕ್ಕೆ ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಪ್ರವೇಶವನ್ನು ಮಾಡಲು ನಿರಾಕರಿಸಿದ್ದರು.
ಪ್ರತಿದಿನವೂ ಅಸ್ಪೃಶ್ಯತೆಯ ಹೆಸರಿನಲ್ಲಿ ಅನೇಕ ಘಟನಾವಳಿಗಳು ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಸಮಾನತೆಯ ಅರಿವನ್ನ ಮೂಡಿಸಲು ಮಾನವೀಯ ಮೌಲ್ಯಗಳನ್ನು ಪುನರ್ ಪ್ರತಿಷ್ಠಾಪಿಸಲು ಸಮಾಜದಲ್ಲಿ ಇರುವ ಇಂತಹ ಅನಿಷ್ಟಗಳ ವಿರುದ್ಧ ಜಾಗೃತಿಯನ್ನು ಉಂಟುಮಾಡಲು ಶಾಲಾಕಾಲೇಜುಗಳಲ್ಲಿ ಈ ನಿಟ್ಟಿನಲ್ಲಿ ನಾಟಕಗಳು, ಉಪನ್ಯಾಸಗಳು ಮತ್ತು ಅರಿವು ಮೂಡಿಸುವ ಕೈಪಿಡಿಗಳು ಅತ್ಯಂತ ಅವಶ್ಯಕ.
ರಾಜ್ಯ ಸರ್ಕಾರ ವಾರ್ತಾ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ನಾಟಕ ಅಕಾಡೆಮಿಗಳ ಜೊತೆಯಲ್ಲಿ ಚರ್ಚಿಸಿ ಕಾರ್ಯಕ್ರಮಗಳನ್ನು ರೂಪಿಸಬೇಕು.
ಕೇವಲ ಪ್ರತಿಭೆಗಳ ನಿರ್ಮಾಣದಿಂದ, ಭಾಷಣಗಳಿಂದ, ಬೃಹತ್ ಕಾರ್ಯಕ್ರಮಗಳಿಂದ ಎಲ್ಲವೂ ಸಾಧ್ಯವಿಲ್ಲ. ಅವುಗಳ ಜೊತೆಗೆ ಕೆಳಮಟ್ಟದಲ್ಲಿ ಜನರನ್ನ ಮುಟ್ಟುವ ಮನಪರಿವರ್ತನೆಯ ಕಾರ್ಯಗಳು ರಚನಾತ್ಮಕವಾದಂತಹ ಚಟುವಟಿಕೆಗಳು ನಡೆಯಬೇಕು.
– ಕೆ ಎಸ್ ನಾಗರಾಜ್ ಬೆಂಗಳೂರು




