ಕೇಂದ್ರ ಮತ್ತು ರಾಜ್ಯ ಸರ್ಕಾರದ ಸರ್ಕಾರಿ ನೌಕರರು ಪ್ರತಿದಿನ ಕಚೇರಿಗೆ ಬರುವ ಸಂದರ್ಭದಲ್ಲಿ ಕೇವಲ ಖಾದಿ ಬಟ್ಟೆಗಳನ್ನೇ ಧರಿಸಬೇಕೆಂಬ ಆದೇಶವನ್ನು ಹೊರಡಿಸಿದರೆ ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಇರುವಂತಹ ಖಾದಿ ಉತ್ಪನ್ನಗಳ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತದೆ. ಜೊತೆಗೆ ಕೈಮಗ್ಗದ ಉದ್ಯಮ ಸಾಕಷ್ಟು ಬೆಳೆಯುತ್ತದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಇದರಿಂದ ನಮ್ಮ ದೇಶದ ನೇಕಾರರ ಬದುಕು ಸಾಕಷ್ಟು ಆರ್ಥಿಕವಾಗಿ ಸುಧಾರಣೆಯಾಗುತ್ತದೆ. ಇಂತಹ ಆದೇಶವನ್ನು ಹೊರಡಿಸುವುದಕ್ಕೆ ಯಾವುದೇ ರೀತಿಯ ಹಣದ ಅವಶ್ಯಕತೆ ಇಲ್ಲ. ಇಲ್ಲಿ ದೇಶದ ಮತ್ತು ರಾಜ್ಯದ ಹಿತದೃಷ್ಟಿಯಿಂದ ಹಾಗೂ ನೇಕಾರರ ಬದುಕು ಮತ್ತು ಖಾದಿ ಉದ್ಯಮ ಬೆಳೆಯಬೇಕೆಂಬ ಸದುದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು ಖಾದಿ ಬಟ್ಟೆಯನ್ನೇ ಧರಿಸುವುದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ.
ಸರಕಾರಿ ಕಚೇರಿಗೆ ಬರುವ ಸಂದರ್ಭದಲ್ಲಿ ಮಾತ್ರವೇ ಈ ರೀತಿಯ ವ್ಯವಸ್ಥೆ ಇರಲಿ. ನಿಮ್ಮ ವೈಯಕ್ತಿಕವಾದಂತಹ ಬದುಕು ಮತ್ತು ಇತರೆ ದಿನಗಳಲ್ಲಿ ನೀವು ಯಾವ ಬಟ್ಟೆಯನ್ನಾದರೂ ಧರಿಸಿ. ಆದರೆ ಕನಿಷ್ಠ ದೇಶದ ಹಿತ ದೃಷ್ಟಿಯಿಂದ ಕಚೇರಿಗೆ ಬರುವ ದಿನಗಳಲ್ಲಿ ಖಾದಿ ಬಟ್ಟೆಯನ್ನು ಧರಿಸಿದರೆ ಅನುಕೂಲವಾಗುತ್ತದೆ.
ರಾಜ್ಯದಲ್ಲಿ ಪ್ರತಿಯೊಬ್ಬ ಸರ್ಕಾರಿ ನೌಕರರಿಗೂ ಸಮವಸ್ತ್ರವನ್ನ ನಿಗದಿಪಡಿಸಬೇಕು. ಈ ಸಮವಸ್ತ್ರವೂ ಸಹ ಖಾದಿಯದೆ ಆಗಿರಬೇಕು. ಈಗಾಗಲೇ ಅನೇಕ ನಿಗಮ ಮಂಡಳಿಗಳಲ್ಲಿ ಮತ್ತು ಇಲಾಖೆಗಳಲ್ಲಿ ನೌಕರಿ ಮಾಡುವವರಿಗೆ ಅವರದೇ ಆದಂತಹ ಸಮವಸ್ತ್ರಗಳಿವೆ. ಆದರೆ ರಾಜ್ಯ ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಯಾವುದೇ ರೀತಿಯ ಸಮವಸ್ತ್ರ ಇರುವುದಿಲ್ಲ. ಕೇವಲ ನೌಕರರಿಗೆ ಮಾತ್ರ ಸಮವಸ್ತ್ರವಿರುತ್ತದೆ. ಬಹಳಷ್ಟು ಕಚೇರಿಗಳಲ್ಲಿ ಸರ್ಕಾರಿ ನೌಕರರು ಯಾರು, ಸಾರ್ವಜನಿಕರು ಯಾರು ಎಂಬುದೇ ತಿಳಿಯುವುದಿಲ್ಲ.
ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರಿ ನೌಕರರು ಕಚೇರಿಗಳಲ್ಲಿ ಎರಡನೆಯ ದರ್ಜೆ ಗುಮಾಸ್ತರಿಂದ ಹಿಡಿದು ಎಲ್ಲ ಹಂತದ ಅಧಿಕಾರಿಗಳು ಸಮವಸ್ತ್ರವನ್ನ ಧರಿಸುವಂತೆ ಮಾಡಬೇಕು. ಜೊತೆಗೆ ಅವರ ಹೆಗಲಿಗೆ ಅವರ ಗುರುತಿನ ಚೀಟಿಯನ್ನು ಹಾಕಿಕೊಂಡಿರುವಂತಹ ವ್ಯವಸ್ಥೆಯು ಇರಬೇಕು. ಇದರಿಂದ ಆ ನೌಕರರ ಹೆಸರು ಕಚೇರಿಗೆ ಬರುವ ಜನರಿಗೆ ತಿಳಿಯುತ್ತದೆ. ಕೆಲವು ಸಂದರ್ಭದಲ್ಲಿ ಇವುಗಳು ಸಾಕಷ್ಟು ತಪ್ಪುಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ಸರ್ಕಾರಿ ಕಚೇರಿಗಳಿಗೆ ಮತ್ತು ಸರ್ಕಾರದ ಅಧೀನದಲ್ಲಿರುವ ಎಲ್ಲ ಸಂಸ್ಥೆಗಳಿಗೆ ಹಾಗೂ ಹಾಸ್ಟೆಲ್ ಗಳಿಗೆ ರಾಜ್ಯ ಸರ್ಕಾರ ನಮ್ಮ ಸರ್ಕಾರಿ ಸಂಸ್ಥೆಗಳಲ್ಲಿ ಉತ್ಪಾದಿಸುವ ಉತ್ಪನ್ನಗಳನ್ನೇ ಅಗತ್ಯ ಸಂದರ್ಭದಲ್ಲಿ ಖರೀದಿಸಬೇಕೆಂಬ ಮತ್ತೊಂದು ಆದೇಶವನ್ನು ಹೊರಡಿಸಿದರೆ ರಾಜ್ಯ ಸರ್ಕಾರದ ಸಾಕಷ್ಟು ಸಂಸ್ಥೆಗಳು ತಮ್ಮ ಉದ್ಯಮವನ್ನು ಆರ್ಥಿಕವಾಗಿ ಬಲಿಷ್ಠ ಬಳಿಸಿಕೊಳ್ಳಬಹುದು. ಇದರಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಆರ್ಥಿಕ ಸಂಕಷ್ಟವೂ ಬರುವುದಿಲ್ಲ. ಬದಲಿಗೆ ಮಧ್ಯವರ್ತಿಗಳ ಪಾಲಾಗುತ್ತಿರುವ ಸಾಕಷ್ಟು ಹಣವು ಸರ್ಕಾರಕ್ಕೆ ಉಳಿಯುತ್ತದೆ.
– ಕೆ ಎಸ್ ನಾಗರಾಜ್, ಬೆಂಗಳೂರು




