ಪದ್ಮಭೂಷಣ, ನಾಡೋಜ, ವರನಟ, ಗಾನಗಂಧರ್ವ, ರಸಿಕರರಾಜ ಡಾ.ರಾಜ್ ಕುಮಾರ್ ಎಂದರೆ ಅದೊಂದ ಮರೆಯದ ಅನರ್ಘ್ಯ ರತ್ನ. ಇವರು ಏಪ್ರಿಲ್ 12, 2006ರಂದು ಕಾಲವಶರಾಗಿದ್ದರು. ಮಳೆನಿಂತ ಮೇಲೆ ಕೂಡ ಹನಿ ನಿಲ್ಲದು ಎಂಬಂತೆ ಅವರು ಇಲ್ಲವಾದ ಹೊತ್ತನ್ನು ನಟ ಮತ್ತು ರಾಜಕಾರಣಿ ಜಗ್ಗೇಶ್ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮುಂದಿನವರು ಅವರ ಅನುಭವದ ನುಡಿಗಳು.
“ಏಪ್ರಿಲ್ 2006 ಮಧ್ಯಾಹ್ನ 1 ಘಂಟೆಗೆ ಪಾಂಡವರು ಚಿತ್ರದ ಊಟದ ವಿರಾಮ! ಶ್ರೀರಂಗಪಟ್ಟಣದ ಕುಂತಿಬೆಟ್ಟದ ರಸ್ತೆಯಲ್ಲಿನ ಮನೆ! ಅಂದು ಅಂಬರೀಶರವರ ಅಭಿಮಾನಿ ಮನೆಯಿಂದ ವಿಶೇಷ ಊಟದ ವ್ಯವಸ್ಥೆ ಇತ್ತು. ಅಂದು ಅಂಬರೀಶರವರೆ ಎಲ್ಲರಿಗು ಪ್ರೀತಿಯಿಂದ ಊಟಬಡಿಸಿ ತಾವು ತಿಂದರು! ಆಗ ಕ್ಯಾರಾವಾನ್ ವ್ಯವಸ್ಥೆ ಇರದ ಕಾರಣ ಎಲ್ಲ ನಟರು ಅವರವರ ಕಾರಿನಲ್ಲಿ ಎಸಿ ಹಾಕಿ ವಿಶ್ರಾಂತಿ ಪಡೆಯುವ ಅಭ್ಯಾಸ!
ನಾನು ಊಟ ಆದಮೇಲೆ ಅರ್ಧ ಘಂಟೆ ಮಲಗುವೆ! ನನಗೆ ತೊಂದರೆ ಕೊಡದಂತೆ ಸಹಾಯಕರು ಕಾವಲು ಇರುತ್ತಾರೆ! ನಾನು ಏಳುವವರೆಗು ಯಾರು ಹತ್ತಿರ ಬರೋಲ್ಲಾ! ಆ ನಂಬಿಕೆಯಲ್ಲೆ ನಿದ್ರೆಗೆ ಜಾರಿದೆ! ಇದ್ದಕ್ಕಿದ್ದಂತೆ ವಾಂತಿಬಾಬು ಕಿಟಕಿ ಜೋರಾಗಿ ತಟ್ಟಿದ. ಸಿಟ್ಟು ನೆತ್ತಿಗೇರಿತು! ಕಾರಣ ಕೇಳಲು ಬಾಗಿಲು ತೆರೆದೆ! ವಾಂತಿಬಾಬು ರಾಜಣ್ಣ ಹೋಗಿಬಿಟ್ಟರು ಎಂದ. ಕೆಲನಿಮಿಷ ಏನು ಕಾಣಲಿಲ್ಲಾ ಕೇಳಲಿಲ್ಲಾ! ನನ್ನ ತಂದೆ ಸತ್ತಾಗಲು ಹಾಗೆ ಆಯಿತು!
ಯಾರಿಗು ಹೇಳದೆ ಹೊರಟವನೆ ಅಣ್ಣನ ಚಿತಾವಾಹನ ತಲುಪಿದೆ! ಕೊನೆವರೆಗು ಜೊತೆಯಿದ್ದು ಬಾಲ್ಯದಿಂದ ಕಂಡ ರಾಜಣ್ಣನ ಪಾತ್ರ ಹಾಗು ಅವರ ಸಾಂಗತ್ಯ ಮಾತ್ರ ನೆನಪಾಗುತ್ತಿತ್ತು! ಇತಿಹಾಸ ನೆನಪಿನ ಅಂಗಳಕ್ಕೆ ಜಾರಿತು! ರಾಜಣ್ಣ ನನ್ನ ಹೃದಯದಲ್ಲೆ ಲೀನವಾದರು! ಮತ್ತೆ ಬನ್ನಿ ಅಣ್ಣ!”
ರಾಜಣ್ಣನ ನೆನಪು ಜಗ್ಗೇಶ್ ಅವರಲ್ಲಿ ಇನ್ನೂ ನೆಲೆಯಾಗಿದೆಯಲ್ಲವೇ?



