ಟಿವಿಕೆ ಪ್ರಾದೇಶಿಕ ಪಕ್ಷ ಸ್ಥಾಪನೆ ಸಂದರ್ಭದಲ್ಲಿ ಮಾತನಾಡಿದ ತಳಪತಿ ವಿಜಯ್ ‘ಅನೇಕರು ನೀವು ಯಾಕೆ ನಿಮ್ಮ ಪ್ರತಿಸ್ಪರ್ಧಿ ಪಕ್ಷಗಳ ಹೆಸರುಗಳನ್ನು ಹೇಳುವುದಿಲ್ಲ, ನಿಮಗೆ ಭಯವೇ ಅಂತ ಕೇಳುತ್ತಾರೆ, ನಾನು ಹೆಸರು ಹೇಳಿ ರಾಜಕೀಯ ಮಾಡುವುದಿಲ್ಲ… ನನ್ನದು ಒಬ್ಬರ ವಿರುದ್ಧ ಸೈದ್ದಾಂತಿಕ ಮತ್ತೊಬ್ಬರ ವಿರುದ್ಧ ಪೊಲಿಟಿಕಲ್ ಹೋರಾಟ’ ಎಂದೆಲ್ಲ ಮಾತನಾಡಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಆದರೆ ತಮ್ಮ ವಿರೋಧ ಪಕ್ಷಗಳ ಹೆಸರನ್ನು ಸಹ ಹೇಳದೆ ರಾಜಕೀಯದ ಅರಂಗೇಟ್ರಂ ಮಾಡುವುದು ಎಂದರೆ ಏನು? ಇದು ಕಂಡರಿಯದ ವಿದ್ಯಮಾನ. ಅದು ವಡಿವೇಲು ಸಿನಿಮಾವೊಂದರಲ್ಲಿ ತನ್ನ ಮೇಲೆ ಹಲ್ಲೆ ಮಾಡಲು ಬಂದ ಬಲಾಢ್ಯರಿಗೆ ಒಂದು ಗೆರೆ ಎಳೆದು ‘ನಿಮಗೆ ತಾಕತ್ತಿದ್ದರೆ ಇದನ್ನು ದಾಟಿ ಬಾ, ನಂತರ ನಿನ್ನೊಂದಿಗೆ ಫೈಟ್ ಮಾಡುತ್ತೇನೆ’ ಎಂದು ಹೇಳುವ ದೃಶ್ಯದಂತಿದೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ನೇರವಾಗಿ ಸೈದ್ಧಾಂತಿಕವಾಗಿ ಬಿಜೆಪಿ ನನ್ನ ವಿರೋದಿ, ಪೊಲಿಟಿಕಲ್ ಆಗಿ ಡಿಎಂಕೆ ನನ್ನ ವಿರೋಧಿ ಎಂದು ತಳಪತಿ ಹೇಳುವವರೆಗೂ ಅವರ ಅಭಿಮಾನಿಗಳು ಸಹ ಟಿವಿಕೆ ಪಕ್ಷವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ತಿರುಮಲೈ ಸಿನಿಮಾದ ದೃಶ್ಯದಂತೆ ಬರೀ ಯು ಟರ್ನ್ ಹೊಡಿತಿರಬೇಕಷ್ಟೆ.
ಇದರಾಚೆಗೆ ತಮ್ಮದು ‘ಸೆಂಟರ್-ಲೆಫ್ಟ್’ ಎಂದು ಭ್ರಮೆ ಮೂಡಿಸಿರುವ ತಳಪತಿ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ಎನ್ನುವ ನೀತಿ ಅನುಸರಿಸುವುದಾಗಿ ಹೇಳುತ್ತಾರೆ.
ಇವರನ್ನು ನೋಡಿದರೆ ಗುಂಡಮ್ಮ ಕಥ ಸಿನಿಮಾದ
‘ಪ್ರೇಮ ಯಾತ್ರಲಕು ಬೃಂದಾವನಮು, ನಂದನವನಮು ಏಲನೋ
ಕಲುಕುಲ್ಲೋಕು ಚೇಲಿ ಚೆಂತನುಂದಗಾ
ವೇರೆ ಸ್ವರ್ಗಮು ಏಲನೋ’
ಹಾಡು ನೆನಪಾಗುತ್ತದೆ…
ಚಿರಂಜೀವಿ, ಕಮಲ್ ನೆನಸಿಕೊಂಡಾಗ ಇದು ಪ್ರಹಸನ ಎಂತಲೂ, ಆರಂಭದಲ್ಲಿ ಪವನ್ ಕಲ್ಯಾಣ್ ತನ್ನದು ಚೆ ಗವೇರ, ಅಂಬೇಡ್ಕರ್ ಮಾದರಿ ಎಂದು ಎದೆ ತಟ್ಟಿಕೊಂಡಿದ್ದನ್ನು ನೆನಸಿಕೊಂಡಾಗ ಕೊಂಚ ಬೆಚ್ಚಿಬೀಳುವಂತೆಯೂ..
ಅಯ್ಯೋ ಕಡವುಳೇ….
– ಬಿ ಶ್ರೀಪಾದ್ ಭಟ್, ಸಾಮಾಜಿಕ ಹೋರಾಟಗಾರರು



