ನಾವು, ನನ್ನ 24X7 ತಾಯ್ನಾಡಿನ ವಿಮಾನ ಏರಲು ಬ್ಯಾಂಕಾಕಿನ ಡಿ.ಎಂ.ಕೆ. ವಿಮಾನ ನಿಲ್ದಾಣಕ್ಕೆ ಬಂದಿದ್ದೆವು. ಅದೆ ದೇಶದಲ್ಲಿರುವ ದೂರದ ನಗರದಿಂದ ನಮ್ಮನ್ನು ಹೊತ್ತು ತಂದಿದ್ದ ಟ್ಯಾಕ್ಸಿ ನಮ್ಮನ್ನು ಬಳಲಿಸಿ ಬೆಂಡೆತ್ತಿಬಿಟ್ಟಿತ್ತು. ‘ಉಸ್ಸಪ್ಪ’ ಎಂದು ಟ್ಯಾಕ್ಸಿ ಇಳಿದಾಗ ಸಮಯ ಐದಾಗಿತ್ತು. ರಾತ್ರಿ ಒಂಬತ್ತು ಘಂಟೆಗೆ ಹೊರಡಲಿತ್ತು ನಮ್ಮ ಪುಷ್ಪಕ ವಿಮಾನ. ನಾಲ್ಕು ಘಂಟೆ ಮುಂಚಿತವಾಗಿ ನಾವು ಡಿ.ಎಂ.ಕೆ.ಯಲ್ಲಿದ್ದೆವು. ಮುಂದುವರಿದ ದೇಶಗಳಲ್ಲಿ ೩-೪ ಘಂಟೆ ಮುಂಚಿತವಾಗಿಯೂ ಬೊರ್ಡಿಂಗ ಪಾಸ್ ಕೇಳಬಹುದು. ಆದರೆ ಇಲ್ಲಿಯ ಪಾಸ್ ಕೊಡುವ ಕಿಟಕಿಗಳು ಮುಚ್ಚಿದ್ದವು. ‘ಯಾವಾಗ ತೆರಿತೀರಿ’ ಎಂದಾಗ ‘ಆರು ಘಂಟೆಯ ಮೇಲೆಯೇ ಬನ್ನಿ’ ಎಂದಳು ಅಲ್ಲಿದ್ದ ಬಿಳಿ ಚರ್ಮದವಳು. ನಮಗೆ ಆಯ್ಕೆಗಳಿರಲಿಲ್ಲ. ಅಲ್ಲೇ ಪಕ್ಕದಲ್ಲಿರುವ ಕುರ್ಚಿಯಲ್ಲಿ ಕುಕ್ಕರಬಡಿದೆವು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಕಿಟಕಿ ತೆಗೆದು Boarding Pass ಕೊಡಲಾರಂಭಿಸಿದರು. ಯಾವುದೆ ಸಮಸ್ಯೆಗಳಿಲ್ಲದೆ ಅದು ಸಿಕ್ಕಿತು. ವಿಮಾನ ಮೇಲೇರಲು ಇನ್ನೂ ಸಾಕಷ್ಟು ಸಮಯವಿತ್ತು. Passport ಗೆ ಸೀಲು ಹಾಕಿಸಿಕೊಂಡು ಒಳ ಬಂದಾಗಿತ್ತು. Duty free shopಗಳನ್ನು ಕ್ರಾಸ್ ಮಾಡುತ್ತಿದ್ದೆವು. ‘ಬರುವಾಗ ದಾರೂ ತರಬೇಕು’ ಎಂದು ಹೇಳಿದ್ದ ಸ್ನೇಹಿತನೊಬ್ಬ. ಅವನ ಡಿಮಾಂಡ ತಕ್ಷಣಕ್ಕೆ ನೆನಪಾಯಿತು. ಅದನ್ನೂ ಖರೀದಿಸಿ ಇನ್ನಿಷ್ಟು ಭಾರ ಹೊರಲಾರದೆ ಹೊತ್ತು ಚಲಿಸಲಾರಂಭಿಸಿದ್ದೆ ನಾನು.
ಡಿ.ಎಂ.ಕೆ. ಬ್ಯಾಂಕಾಕಿನ ಹಳೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ತುಂಬಾ ದೊಡ್ಡದು. ಈ ಹಿಂದೆ ಅಲ್ಲಿ ಅನೇಕಬಾರಿ ಕಾಲಿಟ್ಟಾಗ ‘ಚನ್ನಾಗಿಲ್ಲ’ ಎಂದು ಶರಾ ಬರೆದಿದ್ದೆ. ಅವರದೆ ಇನ್ನೊಂದು ‘ಸ್ವರ್ಣ ಭೂಮಿ’ ಎಂಬ ಹೆಸರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಚನ್ನಾಗಿದೆ. ‘ಸ್ವರ್ಣಭೂಮಿ’ ಯೂ ಸಾಲದಾಗಿರುವ ಕಾರಣ ಹಳೆಯ Don Mueang ನಿಲ್ದಾಣಕ್ಕೆ ನವಹೊದಿಕೆಯನ್ನು ಹೊದಿಸಿ “ಚನ್ನಾಗಿದೆ” ಎನ್ನುವಂತೆ ಬದಲಾಯಿಸಿದ್ದಾರೆ ಇತ್ತೀಚೆಗೆ.
ಅವರು ಹಾಸಿರುವ ಹೊಸ ಕಾರ್ಪೆಟ್ ನಲ್ಲಿ ಹೆಜ್ಜೆಹಾಕುತ್ತ, ಸೂಟಕೇಸ್ ಎಳೆಯುತ್ತ ಏಗುತ್ತಲಿರುವಾಗ ಗೇಟ್ ೧ – ೬ ಎಂಬ ಸೂಚನಾ ಫಲಕ ಸಿಕ್ಕಿತು. ಬೆಂಗಳೂರಿಗೆ ತೆರಳಲಿರುವ ನಮ್ಮ ವಿಮಾನ Gate – 2 ನಲ್ಲಿ ನಿಲ್ಲಲಿತ್ತು. ಅದರ ವೇಟಿಂಗ ಹಾಲಿನ ಖುರ್ಚಿಯಲ್ಲಿ ಮೈ ಚೆಲ್ಲಿದಾಗ ‘ಹಾಯ್’ ಎನಿಸಿತು. ಅರ್ಧಘಂಟೆ ಕಳೆದಿರಬಹುದು ಚಹಾ ಬೇಕೆನಿಸಿತು. ‘ಇಂಡಿಯನ್ ಟೀ’ ಹುಡಿಕಿಕೊಂಡು ಹೊರಟೆ. Indian Tea ಅಂಗಡಿ ಕಾಣಿಸಲಿಲ್ಲ. ಇಂಡಿಯನ್ ಟೀ ಬದಲಾಗಿ ಅಲ್ಲಿ ಬರೀ ಇಂಡಿಯನ್ನರೇ ಕಾಣುತ್ತಿದ್ದರು. ಆದರೆ ಅವಶ್ಯವಿರುವ indian Tea ಮಾತ್ರ ಸಿಕ್ಕಲಿಲ್ಲ.
ನಾವು ಕುಳಿತಿರುವುದು ಬ್ಯಾಂಕಾಂಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ಆದರೆ ವಾಸ್ತವದಲ್ಲಿ ಅದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಂತಿರಲಿಲ್ಲ. ಭಾರತದ ಒಂದು ದೊಡ್ಡ ವಿಮಾನ ನಿಲ್ದಾಣದಂತಿತ್ತು. ಆ ಹಾಲಿನಲ್ಲಿ ಆರು ಗೇಟುಗಳಿದ್ದವು. ಆರೂ ಗೇಟ್ ಗಳಲ್ಲಿ ಭಾರತಕ್ಕೆ ಹೊರಡಲಿರುವ ವಿಮಾನಗಳಿದ್ದವು!
ಈ ದೇಶವು ಇಂದು ಭಾರತದ ಪ್ರತಿಯೊಂದು ಪ್ರಮುಖ ಪಟ್ಟಣದೊಂದಿಗೆ ವಿಮಾನ ಸಂಪರ್ಕ ಹೊಂದಿದೆ. ಆ ಕಕ್ಷೆಯಲ್ಲಿರುವ ಜನರನ್ನು ನೋಡುತ್ತ ಹೋದಂತೆ ಬರೀ ಇಂಡಿಯನ್ಸೇ ಕಾಣಲಾರಂಭಿಸಿದರು. ಕಂದು ಬಣ್ಣದ ಭಾರತೀಯ ಯುವಕರು, ಯುವತಿಯರು, ಮಕ್ಕಳು, ನಮ್ಮಂಥ ತಲೆ ಬೆಳ್ಳಗಾದವರು ಎಲ್ಲರೂ ಅಲ್ಲಿದ್ದರು. ಅವರಲ್ಲಿ ೨-೩% ನಷ್ಟು ಕೂಡ ಬೇರೆ ದೇಶದ ಮುಖಗಳಿರಲಿಲ್ಲ. ಏನಿದೂ? ನಾವಿರುವುದು ಥಾಯಲ್ಯಾಂಡ್ ರಾಜಧಾನಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯಲ್ಲವೆ? ಎಂದು ಪ್ರಶ್ನಿಸುವ ಮಟ್ಟಕ್ಕೆ ಭಾರತಿಯರಿದ್ದರು. ನೋ ಡೌಟ ಥಾಯ್ ಲ್ಯಾಂಡ್ ಜಗತ್ತಿನ ವಿವಿಧ ಭಾಗಗಳಿಂದ ಜನರನ್ನು ಆಕರ್ಷಿಸುತ್ತಿದೆ. ಆದರೆ ಈ ಮಟ್ಟಕ್ಕಾ?
ಈ ದೇಶಕ್ಕೆ ಕಾಲಿಡುವ ಪೂರ್ವದಲ್ಲಿ ನಾನು ಮಲೇಷಿಯಾ ದೇಶದಲ್ಲಿದ್ದು ಸಿಂಗಾಪೂರಕ್ಕೆ ಹೋಗಿ ಇಲ್ಲಿಗೆ ಬಂದಿದ್ದೆ. ಹಾಗೆ ನೋಡಿದರೆ ಕೌಲಾಲಂಪುರವೂ ಬ್ಯಾಂಕಾಕಿನ ಸರಿಸಮಾನವಾಗಿರುವ ಸುಂದರ ಪಟ್ಟಣವೆ. ಸಿಂಗಾಪುರದ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ ಬಿಡಿ. ಆದರೆ ಇಂದು ಬ್ಯಾಂಕಾಂಕ ಇವೆರಡೂ ದೇಶಗಳಿಗಿಂತ ಹೆಚ್ಚಿನ ಜನಪ್ರಿಯತೆಗಳಿಸುತ್ತಿರುವ ನಗರ. ಈ ದೇಶದ ಜನಪ್ರಿಯತೆಗೆ ಕಾರಣಗಳೇನು? ಉತ್ತರ ದೀರ್ಘವಾಗಿದೆ. ಇಂದೆ ಬಂದಿರುವೆ, ಮುಂದೆ ಬರೆಯುವೆ…..
– ಜಿ ಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ




