ಇತ್ತೀಚಿಗೆ ದೆಹಲಿಯಲ್ಲಿ ಹೈಕೋರ್ಟಿನ ಹಾಲಿ ನ್ಯಾಯಾಧೀಶರ ಮನೆಯಲ್ಲಿ ಹಲವಾರು ಕೋಟಿ ರೂಪಾಯಿಗಳ ನೋಟಿನ ಕಂತೆ ಸುಟ್ಟ ಸ್ವರೂಪದಲ್ಲಿ ಗೋಚರಿಸಿರುವುದು ಗಮನಿಸಿದಾಗ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟಿನ ನ್ಯಾಯಾಧೀಶರು ತಾವು ಅಧಿಕಾರವನ್ನು ವಹಿಸಿಕೊಳ್ಳುವ ಸಂದರ್ಭದಲ್ಲಿ ತಮ್ಮ ಆಸ್ತಿಯನ್ನು ರಾಷ್ಟ್ರಪತಿಗಳಿಗೆ ಘೋಷಣೆ ಮಾಡಬೇಕು. ಅದೇ ರೀತಿಯಲ್ಲಿ ಪ್ರತಿ ವರ್ಷವೂ ಸಹ ತಮ್ಮ ಹಾಗೂ ತಮ್ಮ ಕುಟುಂಬದವರ ಆಸ್ತಿಯನ್ನು ಘೋಷಿಸಬೇಕು. ನಿವೃತ್ತಿಯ ನಂತರವೂ ಸಹ ಆಸ್ತಿಯನ್ನು ಘೋಷಿಸಿಕೊಳ್ಳಬೇಕು. ಇದರಿಂದ ಅವರ ಬಗ್ಗೆ ಗೌರವೂ ಹೆಚ್ಚುತ್ತದೆ. ಅವರ ಬದುಕಿನ ಬಗ್ಗೆ ಪಾರದರ್ಶಕತೆಯು ಕಾಣುತ್ತದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ನಮ್ಮ ದೇಶದಲ್ಲಿ ಎಲ್ಲರನ್ನೂ ಪ್ರಶ್ನಿಸುವ ಅಧಿಕಾರವಿದೆ. ಆದರೆ ನ್ಯಾಯಾಧೀಶರನ್ನು ಅವರ ತಪ್ಪುಗಳ ವಿಚಾರದಲ್ಲಿ ಪ್ರಶ್ನಿಸಿದರೆ ನ್ಯಾಯಾಧೀಶರ ನಿಂದನೆ ಎಂಬ ಹೆಸರಿನಲ್ಲಿ ಪ್ರಕರಣಗಳನ್ನು ದಾಖಲಿಸಿ ಶಿಕ್ಷೆಯನ್ನು ನೀಡಲಾಗುತ್ತಿದೆ. ಇದರಿಂದಾಗಿ ಜನಸಾಮಾನ್ಯರು ಇವರ ವಿರುದ್ಧ ಮಾತನಾಡಲು ಹೆದರುತ್ತಾರೆ.
ನ್ಯಾಯಾಧೀಶರನ್ನಾಗಿ ನೇಮಕ ಮಾಡುವುದು ಇಲ್ಲಿಯೇ ಹುಟ್ಟಿ ಬೆಳೆದಿರುವಂತಹ ಜನರನ್ನೇ ಹೊರತು, ಇವರು ಯಾರು ಸಹ ಆಕಾಶದಿಂದ ಇಳಿದಿರುವುದಿಲ್ಲ.
ಇವರು ಸಹ ಸಾಮಾನ್ಯರಂತೆ ಶಾಲೆಗಳಿಗೆ ಹೋಗಿರುತ್ತಾರೆ, ಕಾಲೇಜಿಗೆ ಹೋಗುತ್ತಾರೆ, ಸಾಂಸಾರಿಕ ಬದುಕನ್ನ ನಡೆಸುತ್ತಾರೆ, ಬಹಳಷ್ಟು ಜನರಲ್ಲಿ ಇರಬಹುದಾದಂತಹ ಆಸೆ, ಇಲ್ಲವೇ ದುರಾಸೆ, ದುರ್ಬಲ ಮನಸ್ಸಿನ ಸ್ಥಿತಿ, ಇರಲು ಸಾಧ್ಯವಿರುತ್ತದೆ. ಇವರು ನ್ಯಾಯಾಧೀಶರಾದ ತಕ್ಷಣವೇ ಇವರ ಮನಸ್ಸುಗಳು ಏನು ಸಂಪೂರ್ಣವಾಗಿ ಶುದ್ಧವಾಗುವುದಿಲ್ಲ.
ಭಾರತ ದೇಶದ ನ್ಯಾಯಾಂಗ ಕ್ಷೇತ್ರದಲ್ಲಿ ಅನೇಕ ಮಹನೀಯರು ಅತ್ಯಂತ ಪ್ರಾಮಾಣಿಕವಾಗಿ ಮತ್ತು ಶುದ್ಧವಾದ ಬದುಕನ್ನ ನಡೆಸಿ ಹೆಜ್ಜೆ ಗುರುತುಗಳನ್ನ ಬಿಟ್ಟು ಹೋಗಿದ್ದಾರೆ. ಅವರು ಕೊಟ್ಟಂತಹ ತೀರ್ಪುಗಳು ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಿಗೆ ನಾಂದಿಯಾಗಿದೆ.
ಬಹಳಷ್ಟು ನ್ಯಾಯಾಧೀಶರು ಯಾವುದೇ ಸರ್ಕಾರದ ಜೊತೆಯಲ್ಲಿಯೂ ಸಣ್ಣ ಪ್ರಮಾಣದಲ್ಲೂ ಹೊಂದಾಣಿಕೆಯನ್ನು ಮಾಡಿಕೊಳ್ಳದೆ ನಿವೃತ್ತಿಯ ನಂತರವೂ ಯಾವುದೇ ಲಾಭದಾಯಕವಾದ ಹುದ್ದೆಗಳನ್ನು ಅಲಂಕರಿಸದೆ ತಮ್ಮ ಗೌರವವನ್ನು ಉಳಿಸಿಕೊಂಡಿದ್ದಾರೆ ಮತ್ತು ಮಾದರಿಯಾಗಿ ಬದುಕಿದ್ದಾರೆ. ಇದಕ್ಕೆ ನಮ್ಮ ಕರ್ನಾಟಕ ರಾಜ್ಯದಲ್ಲಿರುವಂತಹ ಸುಪ್ರೀಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ವೆಂಕಟಚಲಯ್ಯನವರು ಸಾಕ್ಷಿಯಾಗಿದ್ದಾರೆ.
ಕೆಲವು ನ್ಯಾಯಾಧೀಶರು ನಿವೃತ್ತಿಯ ನಂತರ ಸರ್ಕಾರಗಳ ಲಾಭದಾಯಕವಾದ ಹುದ್ದೆಗಳನ್ನು ಅಲಂಕರಿಸುವುದರಿಂದ ಅವರು ಪೀಠದಲ್ಲಿ ಕುಳಿತು ನೀಡಿರುವ ತೀರ್ಪುಗಳ ಬಗ್ಗೆ ಶಂಕೆ ಮೂಡುತ್ತಿದೆ. ಇವರುಗಳು ಆಸ್ತಿ ಘೋಷಣೆಯ ಜೊತೆಗೆ ನಿವೃತ್ತಿಯ ನಂತರ ಕನಿಷ್ಠ 10 ವರ್ಷಗಳ ಕಾಲ ಯಾವುದೇ ರೀತಿಯ ಲಾಭದಾಯಕವಾದ ಹುದ್ದೆಗಳನ್ನು ಅಲಂಕರಿಸದ ರೀತಿಯಲ್ಲಿ ನಿಯಂತ್ರಣವನ್ನು ರಾಷ್ಟ್ರಪತಿಗಳು ಹೇರಬೇಕಾಗಿದೆ. ಆಗ ಮಾತ್ರ ನಿವೃತ್ತ ನ್ಯಾಯಾಧೀಶರ ವಿಚಾರದಲ್ಲಿ ಅವರು ಪೀಠದಲ್ಲಿದ್ದ ಸಂದರ್ಭದಲ್ಲಿ ನೀಡಿರಬಹುದಾದ ತೀರ್ಪುಗಳ ವಿಚಾರದಲ್ಲಿ ಮನ್ನಣೆ ಉಳಿದುಕೊಳ್ಳುತ್ತದೆ.
ದೇಶದ ಜನರಿಗೆ ಭರವಸೆ ಇರುವುದು ನ್ಯಾಯಾಲಯವೊಂದೇ. ಅಲ್ಲಿನ ವ್ಯವಸ್ಥೆಯಲ್ಲಿ ಸಣ್ಣ ಲೋಪವಾದರೂ ದೇಶದ ಜನರಿಗೆ ಆತಂಕವಾಗುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ನ್ಯಾಯಾಂಗ ವ್ಯವಸ್ಥೆಯಲ್ಲಿನ ಎಲ್ಲರೂ ತಮ್ಮ ಬದುಕನ್ನ ಸಾಗಿಸಬೇಕು.
– ಕೆ ಎಸ್ ನಾಗರಾಜ್, ಬೆಂಗಳೂರು




