ರೋಹಿತ್ ವೇಮುಲ ಉನ್ನತ ಆಶಯವೊಂದಕ್ಕೆ ಬದುಕಿ, ತಮ್ಮ ಸಂಶೋಧನಾ ಹಾದಿಯಲ್ಲೇ ಜೀವ ತೆತ್ತವರು. ಕಾಲೇಜಿನ ಆಡಳಿತ ಮಂಡಳಿ ಧೋರಣೆಗೆ ಬಲಿಯಾದವರು. ಇಂಡಿಯಾದ ಕ್ಯಾಂಪಸ್ಸಿನ ಜಾತಿಯತೆಯ ಕರಾಳ ಮುಖವನ್ನು ಕಾಣಿಸಿದವರು
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಹೀಗಾಗಿ ಅವರದು ಆತ್ಮಹತ್ಯೆ ಅಲ್ಲ, ಬದಲಿಗೆ ಸಾಂಸ್ಥಿಕ ಕೊಲೆ ಎಂಬುದು ನಮ್ಮ ಖಚಿತ ಅಭಿಪ್ರಾಯ. ಜಾತಿ ಎಂಬುದು ಅವರನ್ನು ಸತ್ತ ಮೇಲೂ ಕಾಡುತ್ತಿದೆ. ಈ ನಿಟ್ಟಿನಲ್ಲಿ ಅವರ ಆಶಯವನ್ನು ಎತ್ತಿ ಹಿಡಿಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿ. ವೇಮುಲ ಆಶಯವನ್ನು ಉಳಿಸುವ ನಿಟ್ಟಿನಲ್ಲಿ ಆಶಯ (ರಿ) ಟ್ರಸ್ಟ್ ದುಡಿಯುತ್ತಿದ್ದು ಅವರ ಹೆಸರನ್ನು ಚಿರಸ್ಥಾಯಿಗೊಳಿಸಲು ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಜಾತಿ ಮತ್ತು ಲಿಂಗ ತಾರತಮ್ಯದ ಅನುಭವಗಳು ಮತ್ತು ಈ ನೆಲೆಯ ಚಿಂತನೆಗಳನ್ನು ಹಂಚಿಕೊಳ್ಳುವ ಅಥವಾ ಸಾರ್ವಜನಿಕಗೊಳಿಸುವ ಪ್ರವೃತ್ತಿಯನ್ನು ದೈರ್ಯವನ್ನು ಉತ್ತೇಜಿಸುವ ಕಾರಣಕ್ಕೆ ಸಂಶೋಧನಾ ವಿದ್ಯಾರ್ಥಿಗಳಿಗೆ ಈ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಪ್ರಬಂಧದ ವಿಷಯ: ‘ವಿಶ್ವವಿದ್ಯಾಲಯಗಳ ಸಂಶೋಧನ ವಿದ್ಯಾರ್ಥಿಗಳ ಮೇಲಿನ ಜಾತಿ ಮತ್ತು ಲಿಂಗ ತಾರತಮ್ಯದ ಆಯಾಮಗಳು: ಪರಿಹಾರ ಮತ್ತು ಪ್ರತಿರೋಧದ ನೆಲೆಗಳು’
ಸ್ಪರ್ಧೆಯ ನಿಬಂಧನೆಗಳು:
1. ಕಡ್ಡಾಯವಾಗಿ ಸಂಶೋಧನಾ ವಿದ್ಯಾರ್ಥಿಗಳು ಪ್ರಬಂಧಗಳನ್ನು ಕಳಿಸುವುದು. ಸಂಶೋಧನ ವಿದ್ಯಾರ್ಥಿಗಳು ಆಯಾ ವಿಶ್ವವಿದ್ಯಾಲಯದ ತಾತ್ಕಾಲಿಕ ಅಥವಾ ಖಾಯಂ ನೋದಣಿ ಪತ್ರ ಅಥವಾ ಇತ್ತೀಚಿನ ಗುರುತಿನ ಪತ್ರವನ್ನು ಲಗತ್ತಿಸತಕ್ಕದ್ದು. ಸಂಶೋಧನೆಯ ಅಂತಿಮ ಪ್ರಬಂಧವನ್ನು ಸಲ್ಲಿಸಿ ಇನ್ನೂ ಡಾಕ್ಟರೇಟ್ ಘೋಷಣೆ ಆಗದವರೂ ಭಾಗವಹಿಸಬಹುದು.
2. ಪ್ರಬಂಧ 800 ಪದಕ್ಕಿಂತಲೂ ಕಡಿಮೆ ಇರುವಂತಿಲ್ಲ ಅಂದರೆ A4 ಸೈಜಿನ ಬಿಳಿಹಾಳೆಯ ನಾಲ್ಕು ಪುಟಗಳು ಅಂತೆಯೇ ಗರಿಷ್ಠ 2500 ಪದ ಅಥವಾ A4 ಸೈಜಿನ ಬಿಳಿಹಾಳೆಯ ಹತ್ತು ಪುಟಗಳು ಮೀರದಂತಿರಲಿ.
3. ಸ್ವಂತ ಕೈಬರಹದ ರಚನೆಯಾಗಿರಬೇಕು. A4 ಸೈಜಿನ ಬಿಳಿಹಾಳೆಯ ಒಂದೇ ಮಗ್ಗಲಲ್ಲಿ ಬರೆದಿರಬೇಕು. ಹೆಸರು ವಿಳಾಸವನ್ನು ಪ್ರತ್ಯೇಕ ಹಾಳೆಯಲ್ಲಿ ಬರೆಯಬೇಕು. ಪ್ರಬಂಧದಲ್ಲಿ ಎಲ್ಲಿಯೂ ಪ್ರಬಂಧ ರಚನೆಕಾರರ ಹೆಸರನ್ನು ನಮೂದಿಸುವಂತಿಲ್ಲ.
4. ಪ್ರಬಂಧ ಹಿಂದೆ ಎಲ್ಲೂ ಮುದ್ರಣ-ಅಂತರ್ಜಾಲ-ಧ್ವನಿಮುದ್ರಿಕೆಯಲ್ಲಿ ಪ್ರಕಟವಾಗಿರಬಾರದು ಅಥವಾ ಪ್ರಸಾರವಾಗಿರಬಾರದು. ಅಂತಹ ಲಕ್ಷಣಗಳು ಕಂಡುಬಂದರೆ ಪ್ರಬಂಧವನ್ನು ಸ್ಪರ್ಧೆಯಿಂದ ಹೊರಗಿಡಲಾಗುವುದು.
5. ಪ್ರಬಂಧವು ಈ ಸ್ಪರ್ಧೆಗಾಗಿಯೇ ರಚನೆಯಾಗಿರಬೇಕು. ಈ ಮುಂಚೆಯೇ ಬರೆದು ಈಗಾಗಲೆ ಬೆರೆಯ ಕಡೆ ಪ್ರಕಟವಾದ ಬರಹಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಅಥವಾ ಬೇರೆಯವರ ಲೇಖನಗಳ/ಅಥವಾ ಬೇರೆ ಪುಸ್ತಕಗಳ ನಕಲು/ಬೇರೆ ಭಾಷೆಯ ಅನುವಾದಗಳು ಆಗಿರಬಾರದು.
6. ಆಹ್ವಾನಿತ ಪ್ರಬಂಧಗಳಲ್ಲಿ ಮೂರು ಅತ್ಯುತ್ತಮ ಪ್ರಬಂಧವನ್ನು ಆಯ್ಕೆಮಾಡಿ, ಮೊದಲ ಅತ್ಯುತ್ತಮ ಪ್ರಬಂಧಕ್ಕೆ 5000/- ಎರಡನೆ ಅತ್ತುತ್ತಮ ಪ್ರಬಂಧಕ್ಕೆ 3000/- ಮೂರನೆ ಅತ್ತ್ಯುತ್ತಮ ಪ್ರಬಂಧಕ್ಕೆ 2000/- ನಗದು ಬಹುಮಾನ ಮತ್ತು ಸ್ಮರಣಿಕೆ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ತೀರ್ಪುಗಾರರ ಮೆಚ್ಚುಗೆ ಪಡೆದ ಪ್ರಬಂಧಗಳ ರಚನೆಕಾರರಿಗೆ ಸ್ಮರಣಿಕೆ ಮತ್ತು ಮೆಚ್ಚುಗೆ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.
7. ಸ್ಪರ್ಧೆಯು ಪಾರದರ್ಶಕವಾಗಿರುತ್ತದೆ. ಪ್ರಬಂಧದ ವಿಷಯವಾಗಿ ಯಾರಿಂದಲೂ ಒತ್ತಡ ತರುವ ಅಥವಾ ಈ ಸಂಬಂಧ ಮಾತುಕತೆ ನಡೆಸಲು ಅವಕಾಶವಿಲ್ಲ. ತೀರ್ಪುಗಾರರ ನಿಲುವು ಅಂತಿಮವಾಗಿರುತ್ತದೆ. ಸ್ಪರ್ಧೆಗೆ ಕಳಿಸಿದ ಪ್ರಬಂಧಗಳನ್ನು ಮರಳಿಸಲಾಗುವುದಿಲ್ಲ.
8. ಆಹ್ವಾನಿತ ಪ್ರಬಂಧಗಳಲ್ಲಿ ಬಹುಮಾನಿತ ಮತ್ತು ತೀರ್ಪುಗಾರರು ಆಯ್ಕೆ ಮಾಡಿದ ಆಯ್ದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ತರಲಾಗುವುದು.
9. ಪ್ರಬಂಧಗಳು ತಲುಪಬೇಕಾದ ಅಂತಿಮ ದಿನಾಂಕ: 19.05.2024
10. ಪ್ರಬಂಧಗಳನ್ನು ಕಳಿಸಬೇಕಾದ ವಿಳಾಸ:
ಆಶಯ, ನಂ. 94, ಸಿಎಂಸಿ ಬಡಾವಣೆ, ಚಿತ್ರದುರ್ಗ – 577501
Mob: 7760628167 / 8880999001




