ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತದಾನ ಮಾಡಿ ಶಾಹಿ ಹಚ್ಚಿದ ಎಡಗೈ ತೋರು ಬೆರಳು ತೋರಿಸುತ್ತಾ ಕನಿಷ್ಠ 20 ಜನರು ಗರಿಷ್ಠ 100 ಜನರು ಸೇರಿ ಸೆಲ್ಫಿ ತೆಗೆದು 9731016999 ಮೊಬೈಲ್‍ಗೆ ಕಳುಹಿಸಿ ಬಹುಮಾನ ಪಡೆಯಬಹುದೆಂದು ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್.ಬಿ.ಇಟ್ನಾಳ್ ತಿಳಿಸಿದ್ದಾರೆ.
- ಅಮೆರಿಕದಿಂದ 1 ಲಕ್ಷ ಕೋಟಿ ರೂ. ವಾಪಸ್ ಪಡೆಯುವುದಾಗಿ ಮೋದಿ ಶಪಥ ಮಾಡಿದ್ದಾರೆಯೇ?
- ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
100 ಕ್ಕಿಂತ ಹೆಚ್ಚು ಜನರು ಒಂದೇ ವೇದಿಕೆಯಲ್ಲಿ ನಿಂತು ಶಾಹಿ ಹಚ್ಚಿದ ತೋರು ಬೆರಳಿನೊಂದಿಗೆ ಸೆಲ್ಫಿ ತೆಗೆದು ಕಳುಹಿಸಿದಲ್ಲಿ ಇವರಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ. ಕಳುಹಿಸಿದ ಸೆಲ್ಫಿಗಳಲ್ಲಿ ಆಕರ್ಷಕ ಫೋಟೋಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.



