ರಾಜ್ಯಮಟ್ಟದ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ

2 years ago

ಚಾಮರಾಜನಗರ: ಪ್ರತಿಷ್ಠಿತ ರಂಗವಾಹಿನಿ ಸಂಸ್ಥೆಯು 2023ನೇ ಸಾಲಿನ 12ನೇ ವರ್ಷದ ಮುಳ್ಳೂರು ನಾಗರಾಜ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿಗೆ ಕವನ ಸಂಕಲನಗಳನ್ನು ಆಹ್ವಾನಿಸಿದೆ.

ಕವನ ಸಂಕಲನ 2022ರಲ್ಲಿ ಪ್ರಕಟಗೊಂಡಿರಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಮಾರ್ಚ್ ತಿಂಗಳ ಎರಡನೇ ಶನಿವಾರದಂದು ಮೈಸೂರಿನಲ್ಲಿ ಏರ್ಪಡಿಸುವ ಸಮಾರಂಭದಲ್ಲಿ 10 ಸಾವಿರ ರೂ ನಗದು ಪುರಸ್ಕಾರ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.

ಆಸಕ್ತರು ತಮ್ಮ ಭಾವಚಿತ್ರ ಮತ್ತು ಕಿರು ಪರಿಚಯದೊಂದಿಗೆ ಕವನ ಸಂಕಲನದ 4 ಪ್ರತಿಗಳನ್ನು ಸಿ.ಎಂ. ನರಸಿಂಹಮೂರ್ತಿ, ಅಧ್ಯಕ್ಷರು, ರಂಗವಾಹಿನಿ,( ರಿ), ಜಯದೇಗುಲ, 10ನೇ ಕ್ರಾಸ್, ಕೋರ್ಟ್ ಎದುರು, ಚಾಮರಾಜನಗರ – 571313 ಈ ವಿಳಾಸಕ್ಕೆ 2024, ಫೆಬ್ರವರಿ 26 ರ ಒಳಗಾಗಿ ಸಲ್ಲಿಸಬೇಕೆಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊ . ಸಂಖ್ಯೆ 9916115263 ಸಂಪರ್ಕಿಸಬಹುದು.

Leave a Reply