ಒಳ ಮೀಸಲಾತಿ ಹೋರಾಟ ಸಮುದಾಯಗಳ ಸಹಕಾರ ಮತ್ತು ಪ್ರೋತ್ಸಾಹಗಳಿಂದ ಮುನ್ನಡೆ ಸಾಧಿಸಿದೆ. ಆದರೆ ಈ ವಿಷಯವನ್ನು ಅಂದಿನ ಅನೇಕರು ತಮ್ಮ ಮನೆಗಳನ್ನು ಸುಟ್ಟು ಸಮುದಾಯ ಉದ್ಧಾರಕ್ಕಾಗಿ ದುಡಿದರು. ಅನೇಕ ಅದರ ವಿರೋಧಿಗಳು ಹಣ ಪಡೆದು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಒಳ ಮೀಸಲಾತಿ ಜಾರಿಗೆ ಯಾವ ರಾಜಕೀಯ ಪಕ್ಷವೂ ದೇಣಿಗೆಯನ್ನು ನೀಡಿಲ್ಲ. ಯೋಜನಾ ಇಲಾಖೆಯ ಅಧಿಕಾರಿಗಳಾದ ಶ್ರೀ ಡಿ. ಚಂದ್ರಶೇಖರಯ್ಯ ಇತ್ತಿಚೆಗೆ ಚಲವಾದಿ ಸಭೆಯಲ್ಲಿ ಮುಕ್ತವಾಗಿ ಹೇಳಿದ್ದಾರೆ. ಅವರೂ ಸಹ ಸಮಕಾಲೀನರು. ಅವರು ಹೇಳಿರುವುದನ್ನು ಸಾಕ್ಷೀಕರಿಸಲು ಯಾವುದೇ ಪುರಾವೆಗಳಿಲ್ಲ. ಅವರಿಗೆ ಮಾಹಿತಿ ಕೊರತೆ ಇರಬಹುದು. ಅನೇಕ ಮಾದಿಗ ಮತ್ತು ಅದರ ಉಪಜಾತಿಯ ಅಧಿಕಾರಿಗಳು ತಮ್ಮ ತನು ಮನ ಧನ ನೀಡಿ ಚಳುವಳಿ ಕೊಟ್ಟಿದ್ದಾರೆ. ಆದರೆ ಅವರಾರೂ ನಮ್ಮಿಂದ ಆಯಿತು ಎಂದು ಎಲ್ಲಿಯೂ ಹೇಳಿಲ್ಲ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಬಹುಶಃ ಸುಪ್ರೀಂಕೋರ್ಟ್ ತೀರ್ಪು ತಿದ್ದುಪಡಿ ಪರವಾಗಿದ್ದರೆ ಅಲ್ಲಿಂದಲೇ ಅನೇಕ ರಾಜಕೀಯ ಪಕ್ಷಗಳು ಅದನ್ನು ಜೀವಂತ ಇಡಲು ಬಯಸುತ್ತಿದ್ದವು. ಆದರೆ ಇಂದು ಅವುಗಳ ನಡೆಯಲ್ಲಿ ಬದಲಾವಣೆ ಬಂದಿದೆ.
ಕರ್ನಾಟಕ ರಾಜ್ಯ ಸರ್ಕಾರ ಅದನ್ನು ಅನುಷ್ಠಾನಕ್ಕೆ ತರಲು ಮುಂದಾದಾಗ ಅನೇಕ ತಾಪತ್ರಯಗಳು ಬಂದವು. ಆಯೋಗ ರಚನೆ ಆಯಿತು. ಅದರ ಮಧ್ಯದಲ್ಲಿ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಹೈಕೋರ್ಟ್ ಆದೇಶ ಮೇರೆಗೆ ಅನೇಕ ರಂಜಕ ಹೇಳಿಕೆಗಳಡಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್ ಸಿ ಮಹಾದೇವಪ್ಪ ಅವರು ತುಂಬಲು ಪಟ್ಟು ಹಿಡಿದರು. ನ್ಯಾಯಾಂಗ ನಿಂದನೆ ಅರ್ಜಿಗೆ ಸರ್ಕಾರ ಉತ್ತರ ನೀಡುವಾಗ ಒಳ ಮೀಸಲಾತಿ ಜಾರಿ ಸಂಬಂಧಿಸಿದಂತೆ ತನ್ನ ನಿಲುವನ್ನು ಸರಿಯಾಗಿ ಮಂಡನೆಮಾಡಿದ್ದರೆ ಯುವಕರು ಸಿಡಿದು ಬೀದಿಗೆ ಬರುತ್ತಿರಲಿಲ್ಲ. ಅನಿವಾರ್ಯತೆಗಳಿಂದ ಬಿ.ಆರ್.ಭಾಸ್ಕರ್ ಪ್ರಸಾದ್ ಮತ್ತು ಅವರ ಗೆಳೆಯರು ಸುದೀರ್ಘ ಪಾದಯಾತ್ರೆ ಸುಡುವ ಬೇಸಿಗೆಯಲ್ಲಿ ನಡೆಯಿತು. ಅವಕಾಶ ವಂಚಿತರು ಹಸಿದು ಸುಮ್ಮನೆ ಇರಲು ಸಾಧ್ಯವಿಲ್ಲ. ಈ ಮಧ್ಯೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಚಿವ ಸಂಪುಟದ ಸಚಿವರೆಲ್ಲರಿಗೂ ಒಳ ಮೀಸಲಾತಿ ಜಾರಿಗೆ ತರುವ ತನಕ ಮೀಸಲಾತಿ ಜಾರಿ ಇಲ್ಲ ಎಂಬ ಸಾಮೂಹಿಕ ಹೊಣೆಗಾರಿಕೆ ನಿರ್ಣಯ ಮಾಡಿದೆ. ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಬಹುತೇಕ ಇಲಾಖೆಯ ಮಂತ್ರಿಗಳು ಈ ವಿಷಯವನ್ನು ತಮ್ಮ ಅಧೀನ ಕಾರ್ಯದರ್ಶಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದರೆ ಸಮಸ್ಯೆ ವಿಕೋಪಕ್ಕೆ ಹೋಗುತ್ತಿರಲಿಲ್ಲ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಸಹಜವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಒಬ್ಬ ಸಾಂವಿಧಾನಿಕ ವ್ಯಕ್ತಿಯಾಗಿ ಸಾಕಷ್ಟು ನಿರ್ದೇಶನ ನೀಡಿದ್ದಾರೆ. ಅದರಲ್ಲೂ ಮಾಜಿ ಸಚಿವ ಶ್ರೀ ಆಂಜನೇಯ ಪ್ರತಿ ಕ್ಷಣವೂ ವಿರಮಿಸದೆ ಸ್ಪಂದಿಸುವ ಮೂಲಕ ಅನೇಕ ಸಮಸ್ಯೆ ಬಗೆಹರಿಸಲು ಮುಂದಾದರು.
ಪಾದಯಾತ್ರೆಯ ಕಾರ್ಯಕ್ರಮ ಹಿನ್ನೆಲೆಯಲ್ಲಿ ಅನೇಕ ಮುಖ ಮುನಸಿನ ಮಾತಿನ ಝಲಕ್ ತೋರಿಸುವ ಪ್ರಯತ್ನ ನಡೆದಿದೆ. ಬಹುಶಃ ಅಂದು ಎಸ್ ಎಂ ಕೃಷ್ಣ ಸರ್ಕಾರ ಶ್ರೀ ಸದಾಶಿವ ಆಯೋಗ ನೇಮಕ ಮಾಡದಿದ್ದರೆ ಒಳ ಮೀಸಲಾತಿ ಹೋರಾಟ ಮುಖ್ಯವಾಹಿನಿಯಲ್ಲಿ ಇರುತ್ತಿರಲಿಲ್ಲ. ಇದಕ್ಕೆ ದುಡಿದ ಸಂಘಟನೆಗಳು ಮತ್ತು ಅದರ ಕಾರ್ಯಕರ್ತರ ಶ್ರಮದಿಂದ ಯಶಸ್ಸು ಬಂದಿದೆ. ಈ ಹಿನ್ನೆಲೆಯಲ್ಲಿ ಸಾಂದರ್ಭಿಕವಾಗಿ ಅನೇಕ ಚಟುವಟಿಕೆಗಳು ಗರಿಗೆದರಿವೆ ಒಂದಷ್ಟು ಈಡೇರಿವೆ.
ಆದರೆ ಪಾದಯಾತ್ರೆಯ ಕಾರ್ಯಕ್ರಮ ಯಶಸ್ವಿಯಾಗಲು ಸಮುದಾಯ ಮತ್ತು ಅದರ ಕಾಳಜಿ ಅತಿಮುಖ್ಯವಾದ ವಿಚಾರ. ಇಲ್ಲಿ ಭಾಸ್ಕರ್ ಪ್ರಸಾದ್ ಮತ್ತು ಅವರ ತಂಡ ಸಮುದಾಯದ ಜನರಿಗಾಗಿ ಇದ್ದಾರೆ. ಮಾಡಿರುವ ಕೆಲಸಕ್ಕೆ ಫಲಿತಾಂಶ ಪ್ರಕಟ ಆಗಿದೆ. ಆದರೆ ಪಾದಯಾತ್ರೆಯ ವಿಚಾರ ಪ್ರಸ್ತಾಪ ಮೂಲಕ ಭಾಸ್ಕರ್ ಪ್ರಸಾದ್ ಒಳಗೊಂಡಂತೆ ಅವರು ಅನುಯಾಯಿಗಳು ಸಾರ್ವಜನಿಕವಾಗಿ ಬಳಸುವ ಭಾಷೆಯ ಬಗ್ಗೆ ಎಲ್ಲಿಲ್ಲದ ಟೀಕೆ ವ್ಯಕ್ತವಾಗಿದೆ. ಇದು ಸಹಜವಾಗಿಯೇ ಇರಬೇಕು ಎಂದು ಭಾವಿಸಬೇಕು. ನಿಂದಿಸುವ ಹಕ್ಕು ಹೊಂದಿದ್ದೇವೆ ಎಂಬ ಕಾರಣಕ್ಕೆ ಸಾಂವಿಧಾನಿಕ ಹುದ್ದೆಗಳನ್ನು ಅನುಮಾನಿಸುವ ಕೈಂಕರ್ಯ ಸಂಸ್ಕೃತಿ ನಮ್ಮದಲ್ಲ ಎಂಬ ಅಂಶಿಕ ಮನೋಧರ್ಮವನ್ನು ಪ್ರತಿಯೊಬ್ಬ ಸಾಮಾಜಿಕ ಹೋರಾಟಗಾರ ಆಸ್ತಿ ಆಗಬೇಕು. ಆವಾಗ ಅವರು ಸಮುದಾಯ ಘನತೆಯನ್ನು ಉಳಿಸಿಕೊಂಡರು ಬೆಳೆಸಿಕೊಂಡು ಹೋಗಲು ಸಹಾಯ ಆಗುತ್ತದೆ.
ವ್ಯಕ್ತಿ ಮತ್ತು ಸಮುದಾಯದ ಎರಡೂ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ವ್ಯಕ್ತಿಗೆ ಆಗುವ ಅವಮಾನ ಮತ್ತು ಸಮುದಾಯಕ್ಕೆ ಆಗುವ ಅಪಮಾನ ಎರಡೂ ಒಂದೆ ಆಗಿರುತ್ತದೆ. ಈ ನಿಟ್ಟಿನಲ್ಲಿ ಒಳ ಮೀಸಲಾತಿ ಕಾರ್ಯಕರ್ತರು ಸಂಯಮ ಚೌಕಟ್ಟನ್ನು ಅವರೆ ಹಾಕಿದಾಗ ಇತರೆ ಸಮುದಾಯದ ಜನರ ಬೆಂಬಲ ಸಿಗುತ್ತದೆ. ಆದುದರಿಂದ, ಯುವಕರು ಬೀದಿಯಲ್ಲಿ ನಿಂತು ದುಡಿದು ಹೋರಾಟ ಕಟ್ಟಿದ್ದಾರೆ. ಅವರನ್ನು ಸಮಾಜ ಎಂದೂ ಮರೆಯಲಾಗದು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಮೂಲಕ ಅನೇಕರಿಂದ ತಮ್ಮ ಮಿತಿಮೀರಿದ ಅತಿರೇಕದ ಮಾತುಗಳು ದಾಖಲಾಗಿವೆ. ಅವುಗಳ ಮೂಲಕ ಸಮುದಾಯ ಆರೋಗ್ಯ ಸುಧಾರಣೆಗೆ ಅವಕಾಶ ಸಿಗದು. ಈ ಚಳುವಳಿಯ ಕಟ್ಟಿದವರ ಮಕ್ಕಳಿಗೆ ಒಳಮೀಸಲಾತಿ ಸಿಗುವುದು ದುರ್ಲಭ. ಆದರೆ ಈ ಪೀಳಿಗೆ ಅನುಭವಿಸುವ ಅವಕಾಶ ನೀಡಿದ್ದಾರೆ. ಹಾಗಾಗಿ ನಮ್ಮ ನಡೆನುಡಿಗಳಲ್ಲಿ ಪ್ರಚೋದನಕಾರಿ ಭಾಷಣ ಅಥವಾ ಅತಿರೇಕದ ಮಾತುಗಳು ಎಂದಿಗೂ ಯಶಸ್ಸು ನೀಡಲಾರವು. ಆ ರೀತಿಯ ಮನೋಧರ್ಮವನ್ನು ಹೊಂದಿದ ನಾಯಕ ಅಥವಾ ಅವನ ಹಿಂಬಾಲಕರು ಗಳಿಸುವುದಕ್ಕಿಂತ ಕಳೆದುಕೊಳ್ಳುವುದೆ ಜಾಸ್ತಿ. ಮುಂದಾದರೂ ಎಚ್ಚರಿಕೆಯಿಂದ, ಜಾಗೃತಿಯಿಂದ ಜನಪದರೊಳಗೆ ಕಾಲಿಡುವ ನಾಯಕರು ಮತ್ತು ಕಾರ್ಯಕರ್ತರೇ ಸಮುದಾಯದ ಆಸ್ತಿ.
ಟೀಕೆ ಟಿಪ್ಪಣಿ ಸಂಸದೀಯ ಮೌಲ್ಯಗಳನ್ನು ಬೆಳೆಸಬೇಕು ಎಂದು ಬಯಸುವೆ.
– ದಾಸನೂರು ಕೂಸಣ್ಣ



