ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಮಾಕ್ಷ್ಮಿಪಾಳ್ಯ, ಕೆ.ಹೆಚ್.ಬಿ. ಕಾಲೋನಿಯಲ್ಲಿ ನೂತನವಾಗಿ ಅಭಿವೃದ್ದಿಗೊಂಡಿರುವ ಕಿರು ಅರಣ್ಯ ಉದ್ಯಾನವನ ಮತ್ತು ಮಕ್ಕಳ ಉದ್ಯಾನವನ ದೀಪ ಬೆಳಗಿಸಿ ಲೋಕಾರ್ಪಣೆ ಸಮಾರಂಭ ಮಾಡಲಾಯಿತು.
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
- ಹೈಕಮಾಂಡ್ಗೆ ಕೊಡಲು ಹಣವಿದೆ, ರೈತರಿಗೆ ಕೊಡಲು ಹಣವಿಲ್ಲ: ಆರ್.ಅಶೋಕ
- ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಕುರಿತು ಡಿ ಕೆ ಶಿವಕುಮಾರ್ ಹೇಳಿದ್ದೇನು?
- ಬರ ಘೋಷಣೆಗಿರುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಲಿ: ಡಾ. ಜಿ. ಪರಮೇಶ್ವರ್
- ಧನುಷ್ ನಟನೆಯ ‘OM’ ಬಿಡುಗಡೆ ದಿನಾಂಕ ಮುಂದೂಡಿಕೆ!
ಸಂಸದ ಪಿ.ಸಿ.ಮೋಹನ್, ಶಾಸಕ ಎಸ್.ಸುರೇಶ್ ಕುಮಾರ್, ಮಾಜಿ ಉಪಮೇಯರ್ ರಂಗಣ್ಣ, ಬಿಬಿಎಂಪಿ ಮಾಜಿ ಸದಸ್ಯೆ ಪ್ರತಿಮಾ ಅವರು ಲೋಕಾರ್ಪಣೆ ಮಾಡಿದರು.
ಪಿ.ಸಿ.ಮೋಹನ್ ಮಾತನಾಡಿ, ಸಾರ್ವಜನಿಕರು ಒಂದು ಕಾರ್ಯಕ್ರಮಕ್ಕೆ ಬರುತ್ತಾರೆ ಎಂದರೆ ಜನಪ್ರತಿನಿಧಿಗಳ ಮೇಲೆ ವಿಶ್ವಾಸ ಇದ್ದಾಗ ಮಾತ್ರ. ಇಂತಹ ಜಾಗ ಬೇರೆ ಕಡೆ ಇದ್ದಿದ್ದರೆ, ಭೂಕಬಳಿಕೆ ಮಾಡುತ್ತಿದ್ದರು. ಆದರೆ ಶಾಸಕ ಸುರೇಶ್ ಕುಮಾರ್ ಅವರು ಇರುವುದರಿಂದ ಈ ಜಾಗ ಉಳಿದು, ಸುಂದರವಾದ ಉದ್ಯಾನ ನಿರ್ಮಾಣ ಮಾಡಿದ್ದಾರೆ ಎಂದರು.
ಉದ್ಯಾನವನದಲ್ಲಿ ಹ್ಯಾಂಪಿ ಥೀಯಟರ್, ರೇಡಿಯೊ ಮತ್ತು ಸಿ.ಸಿ.ಕ್ಯಾಮರ, ವಿಶ್ರಾಂತಿ ತಾಣ ಮಾಡಿ ಪರಿಸರ ಕಾಳಜಿಯಿಂದ ಉದ್ಯಾನವನ ನಿರ್ಮಾಣವಾಗಿದೆ. ಶಾಸಕ ಸುರೇಶ್ ಕುಮಾರ್ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.
ಶಾಸಕ ಎಸ್.ಸುರೇಶ್ ಕುಮಾರ್ ರವರು ಮಾತನಾಡಿ, ಸಾರ್ವಜನಿಕರ ಆಶಯದಂತೆ ಉದ್ಯಾನವನವನ್ನು ನಿರ್ಮಾಣ ಮಾಡಿ, ಅವರ ಅಮೃತಹಸ್ತದಿಂದ ಉದ್ಘಾಟಿಸಲಾಗಿದೆ. ಇದು ಸಾರ್ವಜನಿಕರ ಸ್ವತ್ತು. ಮೈದಾನ ಅಥವಾ ಉದ್ಯಾನವನ ಮಾಡೋಣ ಎಂದು ನಿರ್ಧಾರ ಮಾಡಲಾಯಿತು ಅದರೆ ಸ್ಥಳೀಯ ಜನರ ಒತ್ತಾಯದ ಮೇರೆಗೆ ಉದ್ಯಾನವನ ಮಾಡಲಾಗಿದೆ ಎಂದರು.
ಈ ಪಾರ್ಕ್ ನಲ್ಲಿ 50ಕ್ಕೂ ಹೆಚ್ಚು ಮರಗಳನ್ನು ಬೆಳಸಲಾಗಿದೆ. ಇದರಿಂದ ಅಮ್ಲಜನಕ ಹೇರಳವಾಗಿ ಸಿಗಲಿದೆ. ಉತ್ತಮ ವಾತವರಣಕ್ಕೆ ಒಬ್ಬ ಮನುಷ್ಯನಿಗೆ 7 ಮರ ವಿರಬೇಕು. ಸುತ್ತಮುತ್ತಲು ಪ್ರದೇಶದಲ್ಲಿ ಉತ್ತಮ ಆಮ್ಲಜನಕ ಸಿಗಲಿದೆ. ಆರೋಗ್ಯ ವೃದ್ದಿಸಲಿದೆ. ಈ ಉದ್ಯಾನವನಕ್ಕೆ ನಿಸರ್ಗಧಾಮ ಎಂದು ನಾಮಕರಣ ಮಾಡಲಾಗಿದೆ. ಜನರಿಗೆ ನೆಮ್ಮದಿ, ಶಾಂತಿ ಮತ್ತು ಆರೋಗ್ಯ ವೃದ್ದಿಸುವ ಉದ್ಯಾನವನವಾಗಲಿ ಎಂದರು.
ಸಾವಿತ್ರಿ ಸುರೇಶ್ ಕುಮಾರ್, ಮಾಜಿ ಪಾಲಿಕೆ ಸದಸ್ಯ ಎಂ.ಮುನಿರಾಜು, ಮಂಡಲ ಅಧ್ಯಕ್ಷ ಸುದರ್ಶನ್, ರಾಘವೇಂದ್ರರಾವ್ ಗಿರೀಶ್ ಗೌಡ, ಅನಿಲ್ ರಂಗಣ್ಣ , ಮರಿಯಪ್ಪ, ಜೋಗಯ್ಯ, ಶಿವಾನಂದ್, ವಿರುಪಾಕ್ಷಯ್ಯ, ಹನುಮಯ್ಯ, ವೇದ ಸಚ್ಚಿದಾನಂದ, ಆರ್.ಗಿರೀಶ್ ಮತ್ತು ಸ್ಥಳೀಯ ನಿವಾಸಿಗಳು ಹಾಜರಿದ್ದರು.











