ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸ್ವಾತಂತ್ರ್ಯ ಉದ್ಯಾನವನ ಅವರಣದಲ್ಲಿ ಬೆಂಗಳೂರಿನ ಅತಿ ದೊಡ್ಡ ಒಣತ್ಯಾಜ್ಯ ಸಂಗ್ರಹ ಕೇಂದ್ರ ಲೋಕರ್ಪಣೆಯಾಯಿತು.
ಸ್ಥಳೀಯ ಶಾಸಕ ದಿನೇಶ್ ಗುಂಡೂರಾವ್ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ ಲೋಕಾರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾತಾಡಿದ ದಿನೇಶ್ ಗುಂಡೂರಾವ್, ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿದಿನ ಹಸಿಕಸ, ಒಣಕಸ ಒಟ್ಟಾರೆ 4ಲಕ್ಷ ಟನ್ ಸಂಗ್ರಹವಾಗುತ್ತದೆ. ನಗರ ಹೊರ ಭಾಗದಲ್ಲಿ ಸಮರ್ಪಕ ವಿಲೇವಾರಿ ಮಾಡದೇ ಕಸವನ್ನ ಸುರಿಯುವುದರಿಂದ ಪರಿಸರ ಹಾಳಾಗಿ ಹೋಗುತ್ತದೆ ಮತ್ತು ಮನುಷ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಸದ ಸಮಸ್ಯೆಗೆ ನಿವಾರಣೆ ಮಾಡಬೇಕು ನಗರದ ಅತಿಡೊಡ್ಡ ಒಣತ್ಯಾಜ್ಯ ಸಂಗ್ರಹ ಕೇಂದ್ರ ಸ್ಥಾಪಿಸಲಾಗಿದೆ. ಸಾರ್ವಜನಿಕರು ಮನೆ ಮುಂದೆ ಕಸ ಸಂಗ್ರಹದ ಆಟೋದವರಿಗೆ ಕಸ ವಿಂಗಡನೆ ಮಾಡಿ, ಸ್ವಚ್ಛತೆ ಕಾಪಾಡಿ ಎಂದರು.
ಹಸಿಕಸದಿಂದ ಗೊಬ್ಬರ ತಯಾರಿಕೆ ಮಾಡಬಹುದು, ಒಣತ್ಯಾಜ್ಯದಿಂದ ಮರುಬಳಕೆ ಮಾಡಬಹುದು. ಪರಿಸರ ರಕ್ಷಣೆ, ಸುರಕ್ಷತೆಗೆ ಪ್ರತಿಯೊಬ್ಬ ನಾಗರಿಕರು ಸಹಕಾರ ನೀಡಬೇಕು. ಗಾಂಧಿನಗರ ವಿಧಾನಸಭಾ ಕ್ಷೇತ್ರ ಕಸಮುಕ್ತ ಮತ್ತು ಸ್ವಚ್ಚತಾ ಕ್ಷೇತ್ರವಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.
ಮುಖ್ಯ ಇಂಜಿನಿಯರ್ ಬಸವರಾಜ್ ಕಬಾಡೆ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಲತಾ ನವೀನ್ ಕುಮಾರ್, ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.




