ಗಾಜಾದಲ್ಲಿ ಮುಂದುವರೆದಿರುವ ನರಮೇಧ ಮತ್ತು ಮೋದಿ ಸರ್ಕಾರದ ನಿಲುವಿನ ಹಿನ್ನೆಲೆಯಲ್ಲಿ

2 years ago

#backdrop #genocide #Gaza #stance #Modi #government #shivasundar #hamas #Israel #Palestine

ಪ್ರಗತಿಪರ ಸಂಘಟನೆಗಳು ಮತ್ತು ಮಾಧ್ಯಮಗಳಲ್ಲಿ…

ಒಂದು  ಮನವಿ

ಆತ್ಮೀಯರೇ ,

ಹಮಾಸ್ ಸಂಘಟನಯು ಇಸ್ರೇಲಿನ ನಾಗರಿಕರ ಮೇಲೆನಡೆಸಿದ ಖಂಡನೀಯ ದಾಳಿಯನ್ನು ನೆಪವಾಗಿರಿಸಿಕೊಂಡು ಗಾಜಾದ ನಿರಾಯುಧ ನಾಗರಿಕರ ಮೇಲೆ  ಮೇಲೆ ಇಸ್ರೇಲ್ ನ  ಜಿಯೋನಿಸ್ಟ್ ಉಗ್ರಗಾಮಿ ಸರ್ಕಾರ ಮುಂದುವರೆಸಿರುವ ಅಮಾನುಷ ಜನಾಂಗೀಯ  ದಾಳಿಯನ್ನು  ನಿಲ್ಲಿಸಿ ಅಮಾಯಕರ ಪ್ರಾಣಗಳನ್ನುಉಳಿಸಬೇಕೆಂದೂ  ಮತ್ತು ಶಾಂತಿಯನ್ನು ಸ್ಥಾಪಿಸಬೇಕೆಂಬ ಗೊತ್ತುವಳಿಯ ಬಗ್ಗೆ ನಿನ್ನೆ ವಿಶ್ವಸಂಸ್ಥೆಯಲ್ಲಿ  ತುರ್ತುಸಭೆ ನಡೆಯಿತು.

ಆದರೆ ಅದರಲ್ಲಿ ಭಾರತದ  ಮೋದಿ ಸರ್ಕಾರ  ಆ ಶಾಂತಿ ಗೊತ್ತುವಳಿಯನ್ನು ಬೆಂಬಲಿಸದೇ ಗಾಜಾದಲ್ಲಿ ಮುಂದುವರೆಯುತ್ತಿರುವ ನರಮೇಧದ ಪಾಪದಲ್ಲಿ ಎಲ್ಲಾ ಭಾರತೀಯರನ್ನು ಪಾಲುದಾರರನ್ನಾಗಿಸಿದೆ.

ಭಾರತೀಯ ನಾಗರಿಕರಾಗಿ ಭಾರತ ಸರ್ಕಾರದ ಈ ಜನಾಂಗೀಯವಾದಿ ನರಮೇಧದ ನಿಲುವನ್ನು ವಿರೋಧಿಸಬೇಕಿದೆ. ಇದು ಅತ್ಯಂತ ತುರ್ತಾಗಿ  ಆಗಬೇಕಿದೆ.

ಅದಕ್ಕೆ ಕಾರಣ ಅಮೂರ್ತ ನ್ಯಾಯಪರತೆ ಮಾತ್ರವಲ್ಲ.

ಭಾರತೀಯರ ಭವಿಷ್ಯಕ್ಕೂ ಮಾರಕವಾದ ದೊಡ್ಡ ಹುನ್ನಾರವೂ ಈ ನಿಲುವಿನ ಹಿಂದೆ ಅಡಗಿದೆ.

ಆದ್ದರಿಂದಲೂ ಭಾರತೀಯರಿಗೂ ಇದು ತುರ್ತಿನ ವಿಷಯವಾಗಿದೆ.

ಏಕೆಂದರೆ

– ಇಸ್ರೇಲಿನ ಜನಾಂಗೀಯ ನರಮೇಧದ ಮಾದರಿಯನ್ನು RSS- BJP ಭಾರತಕ್ಕೂ ಆದರ್ಶವೆಂದು ಭಾವಿಸುತ್ತದೆ.

-ಹೀಗಾಗಿಯೇ ಇಸ್ರೇಲ್-ಪ್ಯಾಲೆಸ್ತೀನ್   ವಿಷಯದಲ್ಲಿ ಭಾರತದ ನಿಲುವು ಕಾಂಗ್ರೆಸ್  ನ ನರಸಿಂಹರಾವ್ ಸರ್ಕಾರದ ಕಾಲದಲ್ಲಿ ಬದಲಾಗಲು ಪ್ರಾರಂಭಿಸಿದ್ದರೂ   ಬಿಜೆಪಿಯ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಮೇಲೆ ಭಾರತದ ನಿಲುವು -ನಡೆಗಳು ಸಂಪೂರ್ಣವಾಗಿ ಇಸ್ರೇಲಿನ ಜನಾಂಗೀಯ ಜಿಯೋನಿಸಂ ಅನ್ನು ಸಂಪೂರ್ಣವಾಗಿ ಬೆಂಬಲಿಸುವ ಕಡೆ ಹೊರಳುತ್ತಿದೆ.

– ಹೀಗಾಗಿಯೇ ಜಗತ್ತಿನ ಜಿಯೋ-ಪಾಲಿಟಿಕ್ಸ್ ನಲ್ಲಿ ಅಮೇರಿಕ-ಇಸ್ರೇಲ್-ಭಾರತ ಒಂದು ಅಪಾಯಕಾರಿ  ಮೈತ್ರಿಕೂಟವಾಗಿ  ರೂಪುಗೊಳ್ಳುತ್ತಿದೆ .

–  ಸೈದ್ಧಾಂತಿಕವಾಗಿ ಇಸ್ರೇಲಿನ ಜಿಯೋನಿಸಂ ಮತ್ತು ಭಾರತದ ಸಾವರ್ಕರ್ ವಾದಿ ಹಿಂದುತ್ವಗಳು ಸೋದರ ಸಿದ್ದಂತಾಗಳೆಂದು ಬಹಿರಂಗವಾಗಿ ಘೋಷಿಸಿ ಜಂಟಿ ಸಮ್ಮೇಳನಗಳನ್ನು ನಡೆಸಲಾಗುತ್ತಿದೆ.

– ಅಷ್ಟು ಮಾತ್ರವಲ್ಲದೆ ಈ ಸಂದರ್ಭವನ್ನು ಬಳಸಿಕೊಂಡು ಭಾರತವು  ಎದುರಿಸುತ್ತಿರುವ  Muslim Question ಗೂ ಇಸ್ರೇಲ್ ಅನುಸರಿಸುತ್ತಿರುವ ನರಮೇಧ- ಜನಾಂಗೀಯ ಶುದ್ಧೀಕರಣ ಮಾದರಿಯಿಯೇ   parmanent Solution  ಎಂಬ   RSS ನ ಗುಪ್ತ ಅಜೇಂಡಾಗೆ ಬಹಿರಂಗ ಸಮರ್ಥನೆ ರೂಢಿಸಿಕೊಳ್ಳುವ ಪ್ರಯತ್ನ ವ್ಯವಸ್ಥಿತವಾಗಿ ಮಾಡುತ್ತಿದೆ.

– ಆ ದಿಕ್ಕಿನಲ್ಲಿ ಸಭೆ ಸಮಾರಂಭಗಳನ್ನು ಏರ್ಪಡಿಸುತ್ತಿದ್ದಾರೆ.

– ಅದರ ಭಾಗವಾಗಿ ಡವಿವಿಧ ಭಾಷೆಗಳಲ್ಲ ಹಾಗೂ ಕನ್ನಡದಲ್ಲೂ  ಇಸ್ರೇಲ್ ಅನ್ನು ಹಾಡಿಹೊಗಳುವ, ಸಮರ್ಥಿಸಿಕೊಳ್ಳುವ  ಹಲವಾರು ಪುಸ್ತಕಗಳನ್ನುತರಲಿದ್ದಾರೆ. ತಂದಿದ್ದಾರೆ. ಕನ್ನಡದ ಟಿವಿ ಚಾನೆಲಗಳು ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ನರಮೇಧವನ್ನು ಏಕಪಕ್ಷೀಯವಾಗಿ ಸಮರ್ಥಿಸಿಕೊಂಡು ಪ್ರಚಾರ ಮಾಡುತ್ತಿವೇ.

ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವೇ  ಅಧಿಕಾರದಲ್ಲಿದ್ದರೂ ಪ್ಯಾಲೆಸ್ತೀನ್ ಪರವಾದ ಶಾಂತಿ ಸೌಹಾರ್ದ ಪ್ರದರ್ಶನಕ್ಕೆ ಅವಕಾಶವನ್ನು ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ. ಉಲ್ತಾ ಆ ಪ್ರಯತ್ನ ಮಾಡಿದವರ ಮೇಲೆಯೇ ಕೇಸುಗಳನ್ನು ಹಾಕಲಾಗಿದೆ.

ಹೀಗಾಗಿ ಇಂಥಾ  ಈ ವ್ಯತಿರಿಕ್ತ ಸಂದರ್ಭದಲ್ಲೂ ನಾವು ಪ್ಯಾಲೆಸ್ತೀನ್ ಪರವಾದ ನ್ಯಾಯದ ಧ್ವನಿಯನ್ನು ಎತ್ತುವುದು ಅತ್ಯಂತ ತುರ್ತಿನದಾಗಿದೆ. ಅದು   ಇಸ್ರೇಲ್ ಪ್ಯಾಲೇಸ್ಟಿನಿಯರ ಮೇಲೆ ಮಾಡುತ್ತಿರುವ ಅನ್ಯಾಯವನ್ನು ವಿರೋಧಿಸಲು ತುರ್ತಿನದಾಗಿರುವಂತೆ  ಭಾರತದ ಜನರಲ್ಲಿ ನ್ಯಾಯ ಪ್ರಜ್ಞೆಯನ್ನು ಉಳಿಸಿಕೊಳ್ಳಲು  ಮತ್ತು ಮೋದಿ ಭಾರತವನ್ನು ಇಸ್ರೇಲ್ ಮಾಡದಂತಿರಲು ಅಗತ್ಯವಾಗಿದೆ.

ಈ ನಿಟ್ಟಿನಲ್ಲಿ ನಿನ್ನೆ ಭಾರತವು ವಿಶ್ವಸಂಸ್ಥೆಯಲ್ಲಿ ನಡೆದ ಶಾಂತಿ ಗೊತ್ತುವಳಿ ಮತದಾನದಲ್ಲಿ ಭಾಗವಹಿಸದೇ ಪರೋಕ್ಷವಾಗಿ ಇಸ್ರೇಲಿ ನಡೆಸುತ್ತಿರುವ ನರಮೇಧವನ್ನು ಬೆಂಬಲಿಸಿದ್ದನ್ನು ತೀವ್ರವಾಗಿ ಖಂಡಿಸಬೇಕಿದೆ.

ಹಾಗೆಯೇ ಹಿಂದುತ್ವವಾದಿಗಳ ಪ್ರಯತ್ನಗಳನ್ನು ಬಹಿರಂಗವಾಗಿ ಖಂಡಿಸುತ್ತಲೇ ಇಸ್ರೇಲ್-ಪ್ಯಾಲೆಸ್ತೀನ್ ನ ನೈಜ ಇತಿಹಾಸವನ್ನು ಜನರಿಗೆ ತಿಳಿಸಲು ಎಲ್ಲಾ ಪ್ರಗತಿಪರ ಸಂಘಟನೆಗಳು / ಮಾಧ್ಯಮಗಳು ಮುಂದಾಗಬೇಕಿದೆ.

ಈ ನಿಟ್ಟಿನಲ್ಲಿ  ಪ್ರಗತಿಪರ ಸಂಘಟನೆಗಳು ಒಟ್ಟಾಗಿ ಅಥವಾ ಬಿಡಿಬಿಡಿಯಾಗಿ  ರಾಜ್ಯದಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಈ ಪ್ರಯತ್ನಗಳನ್ನು ಮಾಡಬಹುದೇ??

1. ಮೋದಿ ಸರ್ಕಾರ ಶಾಂತಿ ಗೊತ್ತುವಳಿ ವಿರುದ್ಧ ತೆಗೆದುಕೊಂಡ ನಿಲುವನ್ನು ಖಂಡಿಸಿ ಹೇಳಿಕೆ, ಖಂಡನಾ ಪತ್ರ ಇತ್ಯಾದಿಗಳನ್ನು ಮಾಡಬಹುದೇ?

2. ಕಾಂಗ್ರೆಸ್ ಸರ್ಕಾರವಿದ್ದರೂ , ಕಾಂಗ್ರೆಸ್ ನಿಲುವು  ಇಸ್ರೇಲ್ ದಾಳಿಯನ್ನು ಕೂಡಲೇ ನಿಲ್ಲಿಸಬೇಕೆಂದಿದ್ದರೂ ರಾಜ್ಯದಲ್ಲಿ ಶಾಂತಿ ಪ್ರತಿಭಟನೆಗೆ ಅವಕಾಶ ಕೊಡದಿರುವ ಬಗ್ಗೆ ಕ್ಷೇತ್ರದ  ಕಾಂಗ್ರೆಸ್ ಶಾಸಕ/ ಉಸ್ತುವಾರಿ ಮಂತ್ರಿಗಳ ಮನೆ ಮುಂದೆ ಧರಣಿ ಮಾಡಬಹುದೇ ?

3.  ಇಸ್ರೇಲ್ -ಪ್ಯಾಲೆಸ್ತೀನ್ ಸಂಘರ್ಷದ ನೈಜ ಇತಿಹಾಸದ ಬಗ್ಗೆ ಮತ್ತು ಅದರಲ್ಲಿ ಮೋದಿ ಸರ್ಕಾರ ತೆಗೆದುಕೊಳ್ಳುತ್ತಿರುವ ನಿಲುವಿಂದ ಭಾರತಕ್ಕಿರುವ ಅಪಾಯದ ಬಗ್ಗೆ ತಮ್ಮ- ತಮ್ಮ  ಕಾರ್ಯಕರ್ತರಿಗೆ ಶಿಬಿರ , ಬಹಿರಂಗ ಸಭೆ , ವಿಚಾರ ಸಂಕಿರಣಗಳನ್ನು ಮಾಡಲು ಸಾಧ್ಯವೇ?

4.  ಕಾಂಗ್ರೆಸ್ ಸರ್ಕಾರದ ಮೇಲೆ ಬಹುಮುಖಿ ಒತ್ತಡ ತಂದು ಇಸ್ರೇಲಿನ ಜನಾಂಗೀಯ ನರಮೇಧವನ್ನು ಖಂಡಿಸಿ ಶಾಂತಿಗಾಗಿ ಭಾರತೀಯರ ಸೌಹಾರ್ದ ಪ್ರದರ್ಶನ ಮಾಡಬಹುದೇ? …

ಅದೇ ರೀತಿ ಇಸ್ರೇಲಿನ ಜನಾಂಗೀಯವಾದೀ ಜಿಯೋನಿಸಂ ಪರವಾದ ಸಾಹಿತ್ಯ ಕನ್ನಡದಲ್ಲಿ ಇದೆ ಮತ್ತು ಹೆಚ್ಚಾಗುತ್ತಿದೆ.

ಆದರೆ ಕನ್ನಡದಲ್ಲಿ ಇಸ್ರೇಲ್ -ಪ್ಯಾಲೆಸ್ತೀನ್ ಸಂಘರ್ಷದ ಬಗ್ಗೆ ನ್ಯಾಯಬದ್ಧ ಕಥನದ ಪುಸ್ತಕಗಳು ಇಲ್ಲವೆನ್ನುವಷ್ಟು ಕಡಿಮೆ ..

– ಆದ್ದರಿಂದ ಪ್ರಗತಿಪರ ಸಂಘಟನೆಗಳು ಮತ್ತು ಸಂಸ್ಥೆಗಳು ಇಸ್ರೇಲಿ -ಪ್ಯಾಲೆಸ್ತೀನ್ ಸಂಘರ್ಷದ ನೈಜ ಹಾಗೂ ಐತಿಹಾಸಿಕ ಚಿತ್ರನವನ್ನು ಕೊಡುವ ಕರಪತ್ರ , ಕಿರು ಪುಸ್ತಿಕೆ ಅಥವಾ ದೊಡ್ಡ ಪುಸ್ತಕಗಳನ್ನು ತರಲು ಯೋಚಿಸಬಹುದೇ ?

– ಹಾಗೆಯೇ ಪ್ರಗತಿಪರ ಮಾಧ್ಯಮಗಳು ವಿಶೇಷವಾಗಿ ಕನ್ನಡದ ಪ್ರಗತಿಪರ ಡಿಜಿಟಲ್ ಮಾಧ್ಯಮಗಳು ಈ ವಿಷಯದ ಬಗ್ಗೆ ನಿರಂತರವಾದ ಸಂವಾದ , ವರದಿ , ಇತಿಹಾಸ ಕಥನ ಇತ್ಯಾದಿಗಳನ್ನು ಮಾಡಲು..

ಯೋಚಿಸಬಹುದೇ? ಆಗಗೊಳಿಸಬಹುದೇ ?

– ಶಿವಸುಂದರ್, ಸಾಮಾಜಿಕ ಹೋರಾಟಗಾರರು

Leave a Reply