ಬೆಂಗಳೂರು: ಸರ್ಕಾರದ ಭಾಗವಾಗಿದ್ದುಕೊಂಡು ಕೆಲವು ಸಚಿವರು ಮತ್ತು ಶಾಸಕರು ನಡೆಸುತ್ತಿರುವ ಭೋಜನಕೂಟ ಸೇರಿದಂತೆ ಇನ್ನಿತರ ಚಟುವಟಿಕೆಗಳು ಪಕ್ಷದ ಶಿಸ್ತಿನ ಮೇಲೆ ಪರಿಣಾಮ ಬೀರುತ್ತಿವೆ ಎಂದು ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಸಂವಿಧಾನ ಸಮಾವೇಶದ ಪೂರ್ವಭಾವಿ ಸಭೆ ನಂತರ ಸಿಎಂ ಮತ್ತು ಡಿಸಿಎಂ ಸಮ್ಮುಖದಲ್ಲಿ ಸಚಿವರು ಮತ್ತು ಶಾಸಕರೊಂದಿಗೆ ಸಭೆ ನಡೆಸಿದ ಅವರು ಪಕ್ಷ ಮತ್ತು ಸರ್ಕಾರದಲ್ಲಿ ಶಿಸ್ತು ಅತ್ಯಂತ ಮುಖ್ಯ ಎಂದು ಕಿವಿಮಾತು ಹೇಳಿದರು.
ನಾಯಕರು ಶಿಸ್ತಿನಿಂದ ಇರದಿದ್ದರೆ ಕಾರ್ಯಕರ್ತರು ಶಿಸ್ತಿನಿಂದಿರಲು ಹೇಗೆ ಸಾಧ್ಯ? ಯಾವ ನಾಯಕರು ಪಾರ್ಟಿಯನ್ನು ಬುಲ್ಡೋಜ್ ಮಾಡಬಾರದು. ಪಕ್ಷಕ್ಕಿಂತ ನಾವೇ ದೊಡ್ದವರೆಂದು ಭಾವಿಸಬೇಡಿ ಎಂದು ಹೇಳಿದ್ದಾರೆಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಪಕ್ಷ ತಾಯಿ ಇದ್ದಂತೆ. ಸರ್ಕಾರ ಮಗುವಿನಂತೆ. ಶಾಸಕರು, ನಾಯಕರು, ಸಚಿವರು ಯಾರೇ ಆಗಲಿ ಶಿಸ್ತು ಮೀರಬಾರದು. ಕಾರ್ಯಕರ್ತರನ್ನು ಗೌರವದಿಂದ ಕಾಣಬೇಕು. ಪಕ್ಷವನ್ನೇ ಬುಲ್ಡೋಜ್ ಮಾಡುವವರನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಸಭೆ ಕುರಿತು ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ಸುರ್ಜೇವಾಲ ಮಂತ್ರಿಗಳು ಶಾಸಕರಿಗೆ ಶಿಸ್ತಿನ ಪಾಠ ಹೇಳಿದ್ದಾರೆ ಎಂದರು.
ಸುರ್ಜೇವಾಲ ಯಾವುದೇ ರಹಸ್ಯ ಸಭೆ ನಡೆಸಲಿಲ್ಲ ಎಲ್ಲರ ಸಮ್ಮುಖದಲ್ಲಿಯೇ ಒಗ್ಗಟ್ಟು ಕಾಯ್ದುಕೊಳ್ಳಲು ಹೇಳಿದ್ದಾರೆ. ಯಾರನ್ನು ಪ್ರತ್ಯೇಕವಾಗಿ ಅವರು ಕರೆದು ಮಾತನಾಡಿಲ್ಲ. ಎಲ್ಲರಿಗೂ ಒಟ್ಟಾಗಿಯೇ ಸಂದೇಶ ಹೇಳಿದರು ಎಂದರು.




