ಸರಕಾರಿ ನೌಕರರ ಸಂಘದಿಂದ ಸನ್ಮಾನ
ಧಾರವಾಡ: ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ ಪುರಸ್ಕೃತರಾದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರನ್ನು ಮತ್ತು ಉತ್ತಮ ಜಿಲ್ಲಾ ವಿಪತ್ತು ಸಮಾಲೋಚಕ ಪ್ರಶಸ್ತಿ ಪುರಸ್ಕೃತ ವೆಂಕಟೇಶ ಬುಳ್ಳಾ ಹಾಗೂ ಅತ್ಯುತ್ತಮ ಗ್ರಾಮ ಆಡಳಿತ ಅಧಿಕಾರಿ ಪ್ರಶಸ್ತಿ ಪುರಸ್ಕೃತ ರಾಕೇಶ ತಂಗಡಗಿ ಅವರನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾ ಘಟಕದಿಂದ ಸನ್ಮಾನಿಸಿ, ಗೌರವಿಸಲಾಯಿತು.
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
- ದಶಕ ಮೀರಿದ ಕಾನೂನು ಹಾದಿ ಮತ್ತು ಉತ್ತರವಿಲ್ಲದ ಪ್ರಶ್ನೆಗಳು
- ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು: ಮಧು ಬಂಗಾರಪ್ಪ
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್, ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಹಾಗೂ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಪ್ರಶಸ್ತಿ ಪುರಸ್ಕೃತರನ್ನು ಸನ್ಮಾಸಿದರು.
ಸರಕಾರಿ ನೌಕರ ಸಂಘದ ಪದಾಧಿಕಾರಿಗಳಾದ ದೇವಿದಾಸ್ ಶಾಂತಿಕರ, ಆರ್. ಬಿ. ಲಿಂಗದಾಳ, ಮಲ್ಲಿಕಾರ್ಜುನ ಸೊಲಗಿ, ಮಂಜುನಾಥ ಯಡಹಳ್ಳಿ, ರಾಜಶೇಖರ ಬಾಣದ್, ಪಿ. ಎಫ್. ಗುಡೇನಕಟ್ಟಿ, ಸುರೇಶ ಹಿರೇಮಠ, ಮಹೆಬೂಬ ನದಾಫ, ಆರ್. ಎಂ. ಕಂಠೆಪ್ಪಗೌಡ್ರ, ರಾಜೇಶ ಕೋನರಡ್ಡಿ, ಸುರೇಶ ಜಟ್ಟೆಣ್ಣವರ, ಶಾಂತಾ ಶೀಲವಂತ, ರೇಣುಕಾ ಮದಬಾವಿ, ಆರ್. ಎಸ್. ಹೊನ್ನಪ್ಪನವರ, ಪಿ. ವಿ. ಕುರಬೆಟ್ ಮೊದಲಾದವರು ಹಾಜರಿದ್ದರು.



