ಉತ್ತರ ಕರ್ನಾಟಕದವರಿಗೆ ಬೊಮ್ಮಾಯಿ ಸಿಎಂ ಆಗಿದ್ದರಿಂದ ಸಂತಸ: ಎಚ್.ಕೆ.ಪಾಟೀಲ್

5 years ago

ಗದಗ: ಉತ್ತರ ಕರ್ನಾಟಕದ ಜನರ ಬಯಕೆಗೆ ಇವತ್ತು ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿರೋದು ಸಂತಸ ತಂದಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ಎಚ್.ಕೆ.ಪಾಟೀಲ್ ಹೇಳಿದರು.

ಗದಗಿನಲ್ಲಿ ಸಿಎಂ ಆಗಿ ಬಸವರಾಜ ಬೊಮ್ಮಾಯಿಯವರು ಪ್ರಮಾಣ ವಚನ ಸ್ವೀಕರಿಸಿ ಹಿನ್ನೆಲೆಯಲ್ಲಿ ಪ್ರತಿಕ್ರಿಇಯಿಸಿದ ಅವರು,  ಉತ್ತರ ಕರ್ನಾಟಕದ ಮುಖ್ಯಮಂತ್ರಿ ಪದ ದೊರಕಬೇಕು. ರಾಜಕೀಯ ಅಧಿಕಾರ ಉತ್ತರ ಕರ್ನಾಟಕದ ಭಾಗದವರಿಗೆ ದೊರೆತಿರಲಿಲ್ಲ. ಈ ಕಾರಣಕ್ಕೆ ಉತ್ತರ ಕರ್ನಾಟಕಕ್ಕೆ  ಸೂಕ್ತವಾಗಿರುವಂತೆ ಅಭಿವೃದ್ಧಿ ಕುಟಿಂತವಾಗಿದೆ. ಈ ಭಾಗದ ಜನರ ಭಾವನೆಗಳು ಘಾಸಿಗೊಳಗಾಗಿವೆ ಎಂದರು.

ಬಸವರಾಜ್ ಬೊಮ್ಮಾಯಿ ಅವರು ನಮ್ಮ ಸ್ನೇಹಿತರು ಉತ್ತಮ ಆಡಳಿತಗಾರರು, ಭಾಷಣಕಾರರು ಹೌದು. ಅವರ ಆಡಳಿತ ಕಾಲದಲ್ಲಿ ಎಲ್ಲಾ ಒಳ್ಳೆಯದಾಗಲಿ. ಉತ್ತರ ಕರ್ನಾಟಕ ಭಾಗಕ್ಕೆ ಆದ ಅನ್ಯಾಯವಾಗಿದೆ. ಅದು ಪೂರ್ಣವಾಗಿ ಇಲ್ಲವಾಗಲಿ. ನ್ಯಾಯ ಸಿಕ್ಕು ಉತ್ತರ ಕರ್ನಾಟಕದ ಭಾಗದ ಅಭಿವೃದ್ಧಿ ವಿಶೇಷ ರೀತಿಯಿಂದಾಗಲ್ಲಿ ಎಂದು ಹಾರೈಸಿದರು.

ಉತ್ತರ ಕರ್ನಾಟಕದ ಭಾಗದ ಮಹದಾಯಿ ನದಿಯ ಜೋಡಣೆ ಯೋಜನೆ, ಕೃಷ್ಣಾ ನದಿಯ ಬಹಳಷ್ಟು ಕೆಲಸವಾಗಬೇಕಿದೆ. ಯುಕೆಪಿ ಮುಂದುವರೆದ ಭಾಗ ಸ್ಥಗಿತಗೊಂಡಿದೆ, ಅಲ್ದೆ ಹಲವಾರು ಯೋಜನೆಗಳು ರಿಂಗ್ ರಿಂಗಾಗಿ ಅಲ್ಲೇ ಬಿದ್ದಿವೆ. ಅವುಗಳನ್ನು ಕೈಗೆ ಎತ್ತಿಕೊಂಡು ಯೋಜನೆ ಜಾರಿಗೆ ತರುವ ಕೆಲಸವಾಗಬೇಕು ಎಂದರು.

ಗ್ರ್ಯಾಂಟಿನೆಡ್ ಸಂಸ್ಥೆಗಳು ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚಿವೆ. ಗ್ರ್ಯಾಂಟ್ ಆಗದೆ ಸಾವಿರ ಸಾವಿರ ಶಿಕ್ಷಣ ಸಂಸ್ಥೆಗಳ ಬಗ್ಗೆ ವಿಶೇಷ ಕಾಳಜಿ ತಗೆದುಕೊಳ್ಳ ಬೇಕಿದೆ. ಉತ್ತರ ಕರ್ನಾಟಕದ ಭಾಗದ ಜನರ ಬೇಡಿಕೆಗಳಿಗೆ ವಿಶೇಷವಾದ ಗಮನ ಹರಿಸಿಬೇಕೆಂದು ಅವರು ಇದೇ ವೇಳೆ ಸಲಹೆ ನೀಡಿದರು.

Leave a Reply