ಮನೆಯೆ ಮಂತ್ರಾಲಯ, ಮನಸ್ಸು ದೇವಾಲಯ, ಬಡವರ ಜೀವನ ಹಸನಾಗಬೇಕು: ವಿ.ಸೋಮಣ್ಣ

5 years ago

ಬೆಂಗಳೂರು: ಪ್ರತಿಯೊಬ್ಬ ಕುಟುಂಬದವರಿಗೆ ಸ್ವಂತ ಸೂರು ಇರಬೇಕು ಮತ್ತು ಸುಸಜ್ಜಿತ ಮನೆ ನಿರ್ಮಿಸಬೇಕು ಎಂದು ಆಸೆ ಹೊಂದಿರುತ್ತಾರೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ 9 ವಾರ್ಡ್ ಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸ್ವಂತ ಜಾಗದಲ್ಲಿ ಶೀಟ್ ಮನೆಯಲ್ಲಿ ವಾಸವಿರುವವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 15×20 ಮತ್ತು 20×30 ಚದರ ಅಡಿಯಲ್ಲಿ ವಾಸಿಸುವ ನಿವಾಸಿಗಳಿಗೆ ಪ್ರತಿ ಮನೆ ನಿರ್ಮಾಣಕ್ಕೆ ಐದು ಲಕ್ಷ ರೂಪಾಯಿ ಹಣ ನೀಡಲಾಗುತ್ತಿದೆ ಎಂದು ಮಾಜಿ ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ  ಶಾಸಕರ ಕಚೇರಿಯಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು, ಮನೆ ಮಾಲೀಕರಿಗೆ ಅನುದಾನದ ಚೆಕ್ಕುಗಳನ್ನು ವಿತರಿಸಿ ಮಾತಾಡಿದ ಅವರು,  ಕೊರೋನ ಎರಡನೇ ಅಲೆಯಿಂದ ಬಡವರು ಹಸಿವಿನಿಂದ ಬಳಲಬಾರದು ಎಂಬ ಕಾರಣದಿಂದ 1 ಲಕ್ಷ ದಿನಸಿ ಧಾನ್ಯಗಳ ಕಿಟ್ ಗಳನ್ನು ನೀಡಲಾಗಿದೆ ಎಂದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ವಾರ್ಡ್ನನಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣ ಆಳವಡಿಕೆ ಮಾಡಿರುವ ಹೈಟೆಕ್ ಆಸ್ಪತ್ರೆ ನಿರ್ಮಿಸಲಾಗುತ್ತಿದೆ ಎಂದರು.

ಪ್ರತಿಯೊಬ್ಬರ ಮನೆಯು ಮಂತ್ರಾಲಯವಾಗಬೇಕು, ಮನಸ್ಸು ದೇವಾಲಯವಾಗಬೇಕು. ಆಗ ಉತ್ತಮ ಸಮಾಜ ನೋಡಲು ಸಾಧ್ಯ ಎಂದರು.

ಗೋವಿಂದರಾಜನಗರ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್ ಗೌಡ ಹಾಗೂ ಮಾಜಿ  ಬಿಬಿಎಂಪಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿ, ಮೋಹನ್ ಕುಮಾರ್, ವಾಗೇಶ್,  ರೂಪಲಿಂಗೇಶ್ವರ್, ರಾಜೇಶ್ವರಿ ಬೆಳಗೊಡ್, ಶಂಕುತಲ ಡೊಡ್ಡಲಕ್ಕಪ್ಪ, ಕೊಳಚೆ ನಿರ್ಮೂಲನ ಮಂಡಳಿ ಅಧಿಕಾರಿಗಳು  ಭಾಗವಹಿಸಿದ್ದರು.

Leave a Reply