ನಮ್ಮ ಕ್ಷೇತ್ರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲ ಧರ್ಮದವರು ಒಟ್ಟಾಗಿ ಬಾಳುತ್ತಿದ್ದಾರೆ: ವಿ.ಸೋಮಣ್ಣ

3 years ago

ಬೆಂಗಳೂರು: ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದಲ್ಲಿ ಭಾರತ ಹೊಸ ಸಂದೇಶದೊಂದಿಗೆ ಅಭಿವೃದ್ದಿ ಪಥದತ್ತ ಸಾಗುತ್ತಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ರಂಗಮಂದಿರ ಆವರಣದಲ್ಲಿ ಭಾರತೀಯ ಜನತಾ ಪಕ್ಷವನ್ನು ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರಾದ ಡಾ.ಹೇಮಲತಾ ಮತ್ತು ಅವರ ಸಂಗಡಿಗರು, ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಬಿ.ಜೆ.ಪಿ.ಪಕ್ಷಕ್ಕೆ ಸೇರ್ಪಡೆಯಾದರು. ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತಾಡಿದ ವಿ.ಸೋಮಣ್ಣ, ದೇಶ ಅಭಿವೃದ್ದಿಯತ್ತ ಹೊಸ ಸಂದೇಶದೊಂದಿಗೆ ಭಾರತ ಭವಿಷ್ಯದತ್ತ ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದಲ್ಲಿ ಯಶ್ವಸಿಯಾಗಿ ಸಾಗುತ್ತಿದೆ ಎಂದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ 9 ವರ್ಷಗಳ ಅಭಿವೃದ್ದಿ ಕಾಣದೇ ಹೋಗಿತ್ತು. ಅಪ್ಪ 15 ವರ್ಷ ಮಗ 9 ವರ್ಷ ಶಾಸಕರಾಗಿ ಮಾಡಿದ ಸಾಧನೆ ಏನು ಮಾಡಿದ್ದಾರೆ. ಕಳೆದ ನಾಲ್ಕು ಮೂಕ್ಕಾಲು ವರ್ಷದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಅಭಿವೃದ್ದಿ ಪಥದತ್ತ ಸಾಗುತ್ತಿದೆ ಎಂದರು.

ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ ಎಲ್ಲ ಧರ್ಮದವರು ಒಟ್ಟಾಗಿ ನಮ್ಮ ಕ್ಷೇತ್ರದಲ್ಲಿ ಬಾಳುತ್ತಿದ್ದಾರೆ. ಜನರಿಗೆ ದ್ರೋಹ ಮಾಡುವ ಕೆಲಸ ಮಾಡಬಾರದು. ರಾಜಕೀಯ ನಿಂತ ನೀರಲ್ಲ. ಅಧಿಕಾರ ಕೊಟ್ಟಾಗ ಜನ ಸೇವೆ ಮಾಡುವ ಕೆಲಸ ಮಾಡಬೇಕು ಎಂದರು.

ನಾಲ್ಕು ಮುಕ್ಕಾಕಲು ವರ್ಷ ನಮ್ಮ ಕ್ಷೇತ್ರದ ಅಭಿವೃದ್ದಿ ಸಾಧನೆ ಬಗ್ಗೆ ವಿರೋಧಿಗಳು ಬನ್ನಿ ಚರ್ಚೆ ಮಾಡೋಣ. ಕೊರೋನ ಸಾಂಕ್ರಮಿಕ ರೋಗ ಸಂದರ್ಭದಲ್ಲಿ ಎಲ್ಲಿ ಹೋಗಿದ್ದರು? ಈ ಮಹಾನ್ ವ್ಯಕ್ತಿಗಳು, ಸುಳ್ಳು ಹೇಳಿಕೊಂಡು, ಜನರಿಗೆ ಮೋಸ ಮಾಡುತ್ತಿದ್ದಾರೆ. ರಂಗನಾಥಸ್ವಾಮಿ ಭೂಕಬಳಿಕೆ ಮಾಡಿಕೊಂಡು ಹೋಗಿದ್ದಾರೆ. ಬೆಂಗಳೂರು ನಿವಾಸಿಗಳಿಗೆ ಮೊನ್ನೆ 55 ಸಾವಿರ ಮನೆಗಳನ್ನು ಹಸ್ತಾಂತರ ಮಾಡಲಾಯಿತು. 40 ವರ್ಷ ರಾಜಕೀಯ ಜೀವನದಲ್ಲಿ ಬಡವರ, ಧ್ವನಿ ಇಲ್ಲದ ಜನರ ಸೇವೆ ಮಾಡಿದ್ದೇನೆ ಎಂದರು.

ಶ್ರೀ ಶಿವಕುಮಾರ ಮಹಾಸ್ವಾಮೀಜಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿರವರ ಆಶೀರ್ವಾದದಿಂದ 305 ಹಾಸಿಗೆಯ ಸಾಮರ್ಥ್ಯದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸ್ಮರಣೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಪುನೀತ್ ರಾಜ್ ಕುಮಾರ್ ಸ್ಮರಣೆಯಲ್ಲಿ ಪಂತರಪಾಳ್ಯದಲ್ಲಿ ಆಸ್ಪತ್ರೆ ನಿರ್ಮಾಣ, 8 ಕಿಲೋ ಮೀಟರ್ ಹೈಟೆನ್ಷನ್ ವಿದ್ಯುತ್ ತಂತಿಯನ್ನ ಭೂಗತ ಕೇಬಲ್ ಆಗಿ ಆಳವಡಿಸಲಾಗಿದೆ. 70ಕ್ಕೂ ಹೆಚ್ಚು ಕುಡಿಯುವ ನೀರಿನ ಘಟಕ, 57 ದೇವಸ್ಥಾನ ಮತ್ತು ಉದ್ಯಾನವನ ನವೀಕರಣ ಮಾಡಲಾಗಿದೆ ಎಂದರು.

ಚುನಾವಣೆ ಹತ್ತಿರ ಬರುತ್ತಿದೆ, ಹಣ ಹಂಚಿ ಸುಳ್ಳು ಹೇಳುವವರು ಬರುತ್ತಾರೆ. 9 ವರ್ಷದ ನಿಮ್ಮ ಸಾಧನೆ ಏನು ಎಂದು ಜನರು ಅವರನ್ನ ಕೇಳಬೇಕು. ಬಸವೇಶ್ವರರ ಆದರ್ಶ ಸಿದ್ದಾಂತವನ್ನು ಆಳವಡಿಕೊಂಡು ಎಲ್ಲ ವರ್ಗ, ಧರ್ಮದವರು ಜೊತೆ ನಾನು ಬಾಳುತ್ತಿದ್ದೇನೆ ಎಂದರು.

ಡಾ.ಅರುಣ್ ಸೋಮಣ್ಣ, ವಿಶ್ವನಾಥಗೌಡ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮೋಹನ್ ಕುಮಾರ್, ದಾಸೇಗೌಡ ಮತ್ತು  ಇತರರು ಪಾಲ್ಗೊಂಡಿದ್ದರು.

Leave a Reply