ಸತತ ಮೂರ್ನಾಲ್ಕು ದಿನಗಳಿಂದ ಹತ್ತಿದ ಮಳೆಯಿಂದಾಗಿ ಜಡ್ಡುಗಟ್ಟಿದ ಮನಸಿಗೆ ಇವತ್ತು ಖುಷಿ ಪಡುವ ಸುದ್ದಿ ಸಿಕ್ಕಿದೆ. 2021ರ ಸಾಲಿನಲ್ಲಿ ಲಡಾಯಿ ಪ್ರಕಾಶನ ಪ್ರಕಟಿಸಿದ ಡಾ. ಎಚ್ ಎಸ್ ಅನುಪಮಾ ಅವರ ಕೋವಿಡ್ ಡಾಕ್ಟರ್ ಡೈರಿ: ಗ್ರಾಮ ಭಾರತದ ಕಥೆಗಳು ಪುಸ್ತಕಕ್ಕೆ ಡಾ. ಎಚ್ ಗಿರಿಜಮ್ಮ ಪ್ರಶಸ್ತಿ ಸಿಕ್ಕ ಸುದ್ಧಿ ಬಂದಿದೆ. ಅವರಿಗೆ ಲಡಾಯಿ ಪ್ರಕಾಶನ ಬಳಗದ ಹಾರ್ದಿಕ ಅಭಿನಂದನೆಗಳು .
ವೈದ್ಯಕೀಯ ಬರಹಗಳನ್ನು ಉತ್ತೇಜಿಸುವ ದೃಷ್ಟಿಯಿಂದ ವೈದ್ಯರು ಬರೆವ ಕೃತಿಗಳಿಗೆ ಪ್ರಶಸ್ತಿ ನೀಡಲು ಡಾ. ಎಚ್ ಗಿರಿಜಮ್ಮ ಸ್ನೇಹ ಬಳಗ ಸಂಘಟನೆ ಕಳೆದ ಸಾಲಿನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಡಾ. ಆರ್ ಕೆ ಸರೋಜ, ಡಾ. ಸಿ ಆರ್ ಚಂದ್ರಶೇಖರ, ಡಾ. ನಾ ಸೋಮೇಶ್ವರ ಅವರಿದ್ದ ಆಯ್ಕೆ ಸಮಿತಿ ಡಾ. ಎಚ್ ಎಸ್ ಅನುಪಮ ಮತ್ತು ಡಾ. ಶಾಂತಲಾ ಅವರ ಕೃತಿಗಳನ್ನು ಆಯ್ಕೆ ಮಾಡಿದೆ. ಪ್ರಶಸ್ತಿ ಪ್ರದಾನ ಜುಲೈ 23 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಈ ಕೋವಿಡ್ ಡಾಕ್ಟರ್ ಡೈರಿ ಕೃತಿ ಕುರಿತು ಕಮಲಾಕರ ಕಡವೆ ಅವರು “ಈ ನಿರೂಪಣೆಗಳು, ಪಾತ್ರಗಳು, ಅವರ ಭಾಷೆ, ಹಠ, ಭಾವನೆಗಳು, ಸುತ್ತಣ ಘಟನೆಗಳು ಯಾರನ್ನೇ ಆದರೂ ಐವರಿ ಟವರಿನಿಂದ ಕೆಳಗಿಳಿಸಿ ಕಿವಿ ಹಿಂಡುವಂತಿದೆ. ಓದು ನನ್ನ ಕಿವಿ ಹಿಂಡಿದ್ದಂತೂ ಹೌದು. ಅಬ್ಬಾ ಮೈಯೆಲ್ಲಾ ತರತರ ನಡುಗಿ ಹೋಯಿತು. ಬೆಸಗರಹಳ್ಳಿ ನೆನಪಾದರು” ಎಂದು ಬರೆದದ್ದು ಮತ್ತೆ ನೆನಪಾಯಿತು
ಪ್ರಶಸ್ತಿ ಪುರಸ್ಕೃತವಾದ ಈ ಪುಸ್ತಕ ಓದಿಗೆ ಲಭ್ಯವಿದೆ
ರೂ : 200/-
ಡಾ. ಎಚ್ ಗಿರಿಜಮ್ಮ ಅವರ ಆತ್ಮಕಥನ ಕಾಡತಾವ ನೆನಪುಗಳು ಕೃತಿಯೂ ಓದಿಗೆ ಲಭ್ಯ ಇದೆ
ರೂ 150/-
ಎರಡೂ ಪುಸ್ತಕ ಸೇರಿ ಬೆಲೆ 350/- ರೂ.
ಅಂಚೆವೆಚ್ಚ ಉಚಿತ. ಆಸಕ್ತರು ಕೊಳ್ಳಬಹುದು.
ಲಡಾಯಿ ಪ್ರಕಾಶನ
9480286844




